ಮುಂಬೈ: ಭಾರತೀಯ ಮೂಲದ ನ್ಯೂಜಿಲೆಂಡ್ ತಂಡದ ಬೌಲರ್ ಅಜಾಜ್ ಪಟೇಲ್ , ಭಾರತದ ವಿರುದ್ಧ ಟೆಸ್ಟ್ ಕ್ರಿಕೆಟ್ನಲ್ಲಿ ಹೊಸ ಇತಿಹಾಸ ಬರೆದಿದ್ದಾರೆ. ಒಂದೇ ಇನ್ನಿಂಗ್ಸ್ನಲ್ಲಿ 10 ವಿಕೆಟ್ ಪಡೆಯುವ ಮೂಲಕ ವಿಶ್ವದ ಮೂರನೇ ಆಟಗಾರನೆಂಬ ಕೀರ್ತಿಗೆ ಭಾಜನರಾಗಿದ್ದಾರೆ.
ಜಿಮ್ ಲೇಕರ್ ಮತ್ತು ಅನಿಲ್ ಕುಂಬ್ಳೆ ದಾಖಲೆ ಬಳಿಕ ವಿಶ್ವದ ಮೂರನೇ ಆಟಗಾರನಾಗಿ ಅಜಾಜ್ ಪಟೇಲ್ ತಮ್ಮ ಹೆಸರನ್ನು ಇತಿಹಾಸದ ಪುಟಕ್ಕೆ ಸೇರಿಸಿಕೊಂಡಿದ್ದಾರೆ. ಇಂದು ನಡೆದ ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಎರಡನೇ ಟೆಸ್ಟ್ ಪಂದ್ಯದ ಮೊದಲ ಇನ್ನಿಂಗ್ಸ್ನಲ್ಲಿ ಟೀಮ್ ಇಂಡಿಯಾ 109.5 ಓವರ್ಗಳಲ್ಲಿ 325 ರನ್ಗಳಿಗೆ ಆಲೌಟ್ ಆಗಿದೆ. ನ್ಯೂಜಿಲೆಂಡ್ ಪರ ಕರಾರುವಾಕ್ ದಾಳಿ ನಡೆಸಿದ ಅಜಾಜ್ ಪಟೇಲ್, ಟೀಮ್ ಇಂಡಿಯಾದ 10 ವಿಕೆಟ್ಗಳನ್ನು ಉರುಳಿಸಿ ವಿಶ್ವದಾಖಲೆ ಬರೆದರು.
47.5 ಓವರ್ ಎಸೆದ ಅಜಾಜ್ ಪಟೇಲ್ 119 ರನ್ ನೀಡಿ 10 ವಿಕೆಟ್ ಪಡೆದಿದ್ದಾರೆ. ಭಾರತ ಮಧ್ಯಾಹ್ನದ ಹೊತ್ತಿಗೆ ತನ್ನೆಲ್ಲ ವಿಕೆಟ್ಗಳನ್ನು ಕಳೆದುಕೊಂಡು 109.5 ಓವರ್ಗಳಲ್ಲಿ 325 ರನ್ ಕಲೆಹಾಕಿತು.