Connect with us

Dvgsuddi Kannada | online news portal | Kannada news online

ಪ್ರತ್ಯೇಕ ಲಿಂಗಾಯತ ಧರ್ಮ ವಿಚಾರ: ಸಿದ್ದರಾಮಯ್ಯ ಪಟಾಂಲಂ ಸಂಚು ಅನಾವರಣ: ಬಿಜೆಪಿ ಕಿಡಿ

siddramaih

ಪ್ರಮುಖ ಸುದ್ದಿ

ಪ್ರತ್ಯೇಕ ಲಿಂಗಾಯತ ಧರ್ಮ ವಿಚಾರ: ಸಿದ್ದರಾಮಯ್ಯ ಪಟಾಂಲಂ ಸಂಚು ಅನಾವರಣ: ಬಿಜೆಪಿ ಕಿಡಿ

ಬೆಂಗಳೂರು: ಲಿಂಗಾಯತ ಪ್ರತ್ಯೇಕ ಧರ್ಮದ ವಿಚಾರದಲ್ಲಿ ವಿಧಾನ ಪರಿಷತ್ ಸದಸ್ಯ ಎಸ್.ಆರ್. ಪಾಟೀಲ್ ಅವರ ಹೇಳಿಕೆ ಉಲ್ಲೇಖಿಸಿ ಮಾಜಿ ಸಿಎಂ ಸಿದ್ದರಾಮಯ್ಯ ಪಟಾಂಲಂ ಸಂಚು ಅನಾವರಣಗೊಂಡಿದೆ  ಎಂದು ಬಿಜೆಪಿ ಕಿಡಿಕಾರಿದೆ.

ಈ ಕುರಿತು ಬುಧವಾರ ಸರಣಿ ಟ್ವೀಟ್ ಮಾಡಿರುವ ಬಿಜೆಪಿ,  ಪ್ರತ್ಯೇಕ ಧರ್ಮದ ಹೋರಾಟದಲ್ಲಿ ಸರ್ಕಾರ ಹಾಗೂ ಪಕ್ಷದ ಪಾತ್ರವಿಲ್ಲ ಎಂದು ಇಷ್ಟು ದಿನ ಜಾರಿಕೊಳ್ಳುತ್ತಿದ್ದ ಸಿದ್ದರಾಮಯ್ಯ ಅವರೇ, ನೀವು ಹೆಣೆದ ನಾಟಕದ ಸೂತ್ರಧಾರ ಯಾರೆಂಬುದು ಈಗ ಅನಾವರಣವಾಗಿದೆ. ಧರ್ಮ ವಿಭಜನೆಗೆ ಕೈ ಹಾಕಿದ್ದೇ ಕಾಂಗ್ರೆಸ್ ಸೋಲಿಗೆ ಕಾರಣ ಎಂದು ನಿಮ್ಮ ಆಪ್ತ ಎಸ್.ಆರ್. ಪಾಟೀಲ್ ಹೇಳಿಕೆ ನೀಡಿದ್ದಾರೆ. ನಿಮ್ಮ‌ಉತ್ತರವೇನು?..

ಲಿಂಗಾಯತ ಪ್ರತ್ಯೇಕ ಧರ್ಮ ಹೋರಾಟದಲ್ಲಿ ಭಾಗವಹಿಸಲು ನನಗೂ ಒತ್ತಾಯ ಮಾಡಿದ್ದರು. ಆದರೆ, ಅದು ರಾಜಕೀಯ ಪಕ್ಷದ ಕೆಲಸವಲ್ಲ ಎಂದು ನಾನು ದೂರ ಉಳಿದಿದ್ದೆ’ ಎಂದು ಎಸ್‌.ಆರ್. ಪಾಟೀಲ ಮಂಗಳವಾರ ಬಾಗಲಕೋಟೆಯಲ್ಲಿ ಹೇಳಿದ್ದರು. ಎಸ್.ಆರ್. ಪಾಟೀಲ್ ಅವರ ಹೇಳಿಕೆಯಿಂದ   ಸಿದ್ದರಾಮಯ್ಯ ಪ್ರಶ್ನಿಸಿದ ಬಿಜೆಪಿ, ಪ್ರತ್ಯೇಕ ಲಿಂಗಾಯತ ಧರ್ಮದಲ್ಲಿ ಸಿದ್ದರಾಮಯ್ಯ ಪಟಾಂಲಂ ಸಂಚು ಅನಾವರಣಗೊಂಡಿದೆ. ನೀವೇಕೆ ಅಷ್ಟು ಆತುರ ತೋರಿದಿರಿ ಸಿದ್ದರಾಮಯ್ಯ? ಎಂದು ಟ್ವಿಟ್ ಮಾಡಿದೆ.

ಈ ಹಿಂದೆ ಡಿ.ಕೆ. ಶಿವಕುಮಾರ್ ಇದೇ ಅರ್ಥದಲ್ಲಿ ಮಾತನಾಡಿದಾಗ ಧರ್ಮ ವಿಭಜನೆಯ ರೂವಾರಿಗಳಾದ ಸಿದ್ದರಾಮಯ್ಯ ಹಾಗೂ ಎಂ.ಬಿ. ಪಾಟೀಲ್‌ ಸಾರ್ವಜನಿಕವಾಗಿಯೇ ರೌದ್ರಾವತಾರ ಪ್ರದರ್ಶನ ಮಾಡಿದ್ದರು. ಈಗ ಸತ್ಯ ಹೇಳಿದ ಎಸ್.ಆರ್. ಪಾಟೀಲ್ ಅವರನ್ನು ಹೇಗೆ ನಡೆಸಿಕೊಳ್ಳುತ್ತೀರಿ? ಈ ಹಿರಿಯ ಜೀವವನ್ನೂ ರಾಜಕೀಯವಾಗಿ ಮುಗಿಸುತ್ತೀರಾ’ ಎಂದು ಪ್ರಶ್ನೆ ಎತ್ತಿದೆ.

ಎಸ್.ಆರ್.ಪಾಟೀಲ್ ಅವರಂತಹ ಹಿರಿಯ ಧರ್ಮಜ್ಞಾನವನ್ನು ಸಕಾಲದಲ್ಲಿ ಬಳಸದ ಪರಿಣಾಮ ಇಂದು ಕಾಂಗ್ರೆಸ್ ಪಕ್ಷವನ್ನು ಜನತೆ ಕಿತ್ತೆಸೆದಿದ್ದಾರೆ. ಧರ್ಮ ವಿಭಜನೆ ಎನ್ನುವುದು ಈ ಶತಮಾನ ಕಂಡ ಅತಿದೊಡ್ಡ ಧಾರ್ಮಿಕ ಷಡ್ಯಂತ್ರ. ಸಿದ್ದರಾಮಯ್ಯನವರೇ, ಇದಕ್ಕೆ ನೀವೊಬ್ಬರೇ ನಿರ್ದೇಶಕರೋ ಅಥವಾ ಜನಪಥ್ ರಸ್ತೆಯ ನಿರ್ದೇಶನವೂ ಇತ್ತೋ?’ ಎಂದು ಪರೋಕ್ಷವಾಗಿ ಸೋನಿಯಾ ಗಾಂಧಿ ಮೇಲೆ ಬೆರಳು ತೋರಿಸಿದೆ ಬಿಜೆಪಿ.

ಹಿಂದುತ್ವದ ವಿನಾಶಕ್ಕಾಗಿ ಯಾವ ದಾರಿಯನ್ನು ಬೇಕಾದರೂ ಕಾಂಗ್ರೆಸ್ ಹಿಡಿಯುತ್ತದೆ ಎಂಬುದಕ್ಕೆ ಲಿಂಗಾಯತ ಧರ್ಮ ವಿರೋಧಿ ಹೋರಾಟವೇ ಸಾಕ್ಷಿಯಾಗಿದೆ. ಈ ಪ್ರಯತ್ನ ನಡೆಸಿದ ನಿಮ್ಮನ್ನು ಇತಿಹಾಸ ಎಂದಿಗೂ ಕ್ಷಮಿಸದು. ಪಾಟೀಲರಂತಹ ಹಿರಿಯರ ಮಾತಿಗೂ ಮನ್ನಣೆ ನೀಡದೆ, ಯಾರಿಗಾಗಿ ಹಠಕ್ಕೆ ಬಿದ್ದು ಧರ್ಮ ಒಡೆಯಲು ಮುಂದಾದಿರಿ?’ ಎಂದು ಬಿಜೆಪಿ ಕಿಡಿಕಾರಿದೆ.

 

ಲೋಕಲ್ ಸುದ್ದಿಗಳನ್ನು ಕ್ಷಣಾರ್ಧದಲ್ಲಿ ಲೋಕದ ಜನರ ಬೆರಳ ತುದಿಗೆ ತಲುಪಿಸುವ ಉದ್ದೇಶದಿಂದ ಡಿವಿಜಿಸುದ್ದಿ.ಕಾಂ ಕನ್ನಡ ಆನ್ ಲೈನ್ ನ್ಯೂಸ್ ಪೋರ್ಟಲ್ (ಡಿಜಿಟಲ್ ಮಾಧ್ಯಮ) ಸ್ಥಾಪಿಸಲಾಗಿದೆ. ಸ್ಥಳೀಯ ಸುದ್ದಿ ಜೊತೆ ಇನ್ಫೋರ್ಮೆಟಿವ್ ನ್ಯೂಸ್ ಕೊಡುವುದು ಮೊದಲ ಆದ್ಯತೆ. ಇದಲ್ಲದೆ ರಾಜಕೀಯ, ಶಿಕ್ಷಣ, ಉದ್ಯೋಗ, ಕ್ರೀಡೆ, ಅಪರಾಧ ಸುದ್ದಿ ಹಾಗೂ ವಿಶೇಷವಾಗಿ ಕೃಷಿ ಮತ್ತು ರೈತರಿಗೆ ಉಪಯುಕ್ತ ಮಾಹಿತಿ ನೀಡುವುದು ಮುಖ್ಯ ಉದ್ದೇಶ. ಸುದ್ದಿ, ಮಾಹಿತಿ, ಸಲಹೆ, ಸೂಚನೆ ನೀಡಲು ವಾಟ್ಸಾಪ್ (7483892205) ಮಾಡಿ... Editor: munikondajji, MA journalism, contact number:7483892205, e-mail: dvgsuddi@gmail.com

Click to comment

Leave a Reply

Your email address will not be published. Required fields are marked *

More in ಪ್ರಮುಖ ಸುದ್ದಿ

To Top