ದಾವಣಗೆರೆ: ಭಾರತೀಯ ರೆಡ್ ಕ್ರಾಸ್ ಸಂಸ್ಥೆಯಿಂದ ಕೊರೊನಾ ಸೋಂಕಿನಿಂದ ದುಡಿಯುವ ಪತಿ ಕಳೆದುಕೊಂಡ ಮಹಿಳೆಯರಿಗೆ ಟೈಲರಿಂಗ ತರಬೇತಿ ನೀಡಿ ಜೊತೆಗೆ ಉಚಿತ ಸಿಂಗರ್ ( ಟೈಲರಿಂಗ್ ) ಎಂಬ್ರಾಯಿಡರಿ ಹೊಲಿಗೆ ಯಂತ್ರ ನೀಡಲಾಗುವುದು.
ಇದರಿಂದ ಸ್ವಯಂ ಉದ್ಯೋಗ ಮಾಡಿಕೊಂಡು ತಮ್ಮ ಜೀವನ ನಿರ್ವಹಣೆ ಮಾಡಿಕೊಳ್ಳಲು ರೆಡ್ ಕ್ರಾಸ್ ಸಂಸ್ಥೆಯಿಂದ ಸಹಾಯ ಮಾಡಲಿದೆ. ಅವಶ್ಯಕತೆಯಿರುವವರು ಅಗತ್ಯ ದಾಖಲೆಗಳನ್ನು ದಾವಣಗೆರೆ ನಗರದಲ್ಲಿರುವ ಭಾರತೀಯ ರೆಡ್ ಕ್ರಾಸ್ ಸಂಸ್ಥೆಗೆ ಒದಗಿಸುವ ಮೂಲಕ ಸದುಪಯೋಗ ಪಡೆದುಕೊಳ್ಳಬೇಕೆಂದು ಜಿಲ್ಲಾ ಅಧ್ಯಕ್ಷ ಡಾ : ಎ. ಎಮ್. ಶಿವಕುಮಾರ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ : ನರೇಂದ್ರ ಪ್ರಕಾಶ್ : +919880144567, ಶ್ರೀಕಾಂತ ಬಗರೆ : 9886393695.