ಮುಂಬೈ: ಬಾಲಿವುಡ್ ನಟ ಶಾರುಖ್ ಖಾನ್ ಮಗ ಆರ್ಯನ್ ಖಾನ್ ಡ್ರಗ್ಸ್ ಕೇಸ್‌ನಲ್ಲಿ ಎನ್‌ಸಿಬಿ ಬಂಧಿಸಿದೆ. ಇದರ ಬೆನ್ನಲ್ಲೇ ಶಾರುಖ್ ಖಾನ್‌ಗೆ ಭಾರಿ ಸಂಕಟ ಎದುರಾಗಿದೆ. ಇವರು ನಾಲ್ಕೈದು ವರ್ಷಗಳಿಂದ ಬೈಜೂಸ್ ಬ್ರ್ಯಾಂಡ್ ಅಂಬಾಸಿಡರ್ ಆಗಿ ಕೆಲಸ ಮಾಡುತ್ತದ್ದರು.
ಇದೀಗ ಬೈಜೂಸ್ ಏಷ್ಯುಕೇಶನಲ್ ಕಂಪೆನಿ ತನ್ನ ಜಾಹೀರಾತಿನಿಂದ ಶಾರುಖ್ ಗೆ ಕೋಕ್ ನೀಡಿದೆ. ಇದರಿಂದ ಶಾರುಖ್ ವಾರ್ಷಿಕ ಐದು ಕೋಟಿ ರೂಪಾಯಿ ಸಂಪಾದನೆ ನಷ್ಟವಾಗಿದೆ. 2017 ರಿಂದ ಶಾರುಖ್ ಈ ಕಂಪೆನಿಯ ಬ್ರ್ಯಾಂಡ್ ಅಂಬಾಸಿಡರ್ ಆಗಿದ್ದರು. ಆ್ಯಪ್ ಮೂಲಕ ಮಕ್ಕಳಿಗೆ ಶಿಕ್ಷಣ ಹೇಳುವ ಜಾಹೀರಾತು ಇದಾಗಿದೆ. ಮಗನ ಡ್ರಗ್ಸ್ ಕೇಸ್ ಪ್ರಕರಣದಿಂದ ಕಂಪೆನಿ ತನ್ನ ಜಾಹೀರಾತಿನಿಂದ ಕೋಕ್ ನೀಡಿದೆ.



