ದಾವಣಗೆರೆ: ಐಸಿಎಆರ್ ತರಳಬಾಳು ಕೃಷಿ ವಿಜ್ಞಾನ ಕೇಂದ್ರದಿಂದ ಜಿಲ್ಲೆಯ ನ್ಯಾಮತಿ ತಾಲೂಕಿನ ರಾಮೇಶ್ವರ ಗ್ರಾಮದಲ್ಲಿ ಶೇಂಗಾ ಬೆಳೆಯ ವಿವಿಧ ತಳಿಗಳ ಕ್ಷೇತ್ರ ಪ್ರಯೋಗದ ಕ್ಷೇತ್ರೋತ್ಸವ ಬೇಸಾಯ ತಜ್ಞ ಮಲ್ಲಿಕಾರ್ಜುನಪ್ಪ ನೇತೃತ್ವದಲ್ಲಿ ಆಚರಿಸಲಾಯಿತು.
ಕಾರ್ಯಕ್ರಮದ ಉದ್ಘಾಟನೆಯನ್ನು ಪ್ರಗತಿಪರ ರೈತರಾದ ವಂಕಟೇಶ್ ನೆರವೇರಿಸಿಕೊಟ್ಟರು. ಶೇಂಗಾ ತಳಿಗಳಾದ G-2 52,,GPBD 4 ಕಾಯಿಗಳ ಸಂಖ್ಯೆ ಹಾಗೂ ಮೇವು ಬಹಳ ಉತ್ತಮವಾಗಿದ್ದು ಎಂದು ಪ್ರಗತಿಪರ ರೈತರು ರವಿಯವರು ತಮ್ಮ ಅನಿಸಿಕೆಯನ್ನು ಹಂಚಿಕೊಂಡರು. ಕಾರ್ಯಕ್ರಮದಲ್ಲಿ ಕೇಂದ್ರದ
ಬೇಸಾಯ ತಜ್ಞ ಮಲ್ಲಿಕಾರ್ಜುನ್ ಅವರು ಮಾತನಾಡಿ, ರೈತಬಾಂಧವರು ಉತ್ತಮವಾದ ತಳಿಗಳನ್ನು ಆಯ್ಕೆ ಮಾಡಿಕೊಂಡು ಬೆಳೆಯನ್ನು ಬೆಳೆಯುವುದು ಬಹಳ ಸೂಕ್ತ ಹಾಗೂ ಬಿತ್ತನೆಯ ಮೊದಲು ಬೀಜೋಪಚಾರ ಮಾಡುವುದರಿಂದ ಬೀಜದಿಂದ ಹರಡುವ ರೋಗಗಳನ್ನು ತಡೆಯಬಹುದು ಎಂದರು. ಪ್ರಗತಿಪರ ರೈತರಾದ ರಾಕೇಶ್ ಹಾಗೂ ರೈತ ಮಹಿಳೆ ಯಶೋಧಮ್ಮ ತಮ್ಮ ಅನಿಸಿಕೆಗಳನ್ನು ಹಂಚಿಕೊಂಡರು. ಕಾರ್ಯಕ್ರಮವನ್ನು ಡಾ. ಅವಿನಾಶ್ ಹಾಗೂ ಸಣ್ಣ ಗೌಡರು, ಹಾಗೂ ಪ್ರಗತಿಪರ ರೈತರು ರೈತ ಮಹಿಳೆಯರು ಭಾಗವಹಿಸಿದ್ದರು.