ಬೆಂಗಳೂರು: ರಾಜ್ಯದಲ್ಲಿ ಕೊರೊನಾ ಸೋಂಕು ಗಣನೀಯವಾಗಿ ಇಳಿಕೆಯಾಗಿದ್ದು, ಅಕ್ಟೋಬರ್ 1 ರಿಂದ ಶಾಲೆಗಳಿಗೆ ಮತ್ತು ಸಿನಿಮಾ ಮಂದಿರ ಪೂರ್ಣ ಪ್ರಮಾಣ ಓಪನ್ ಮಾಡಲು ಸರ್ಕಾರ ಅವಕಾಶ ನೀಡಿದೆ.
ಈ ಬಗ್ಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮಾತನಾಡಿ, ಕೋವಿಡ್ ಸ್ಥಿತಿಗತಿ ಕುರಿತ ಉನ್ನತ ಮಟ್ಟದ ಸಭೆಯ ನಂತರ ಪೂರ್ಣ ಪ್ರಮಾಣದಲ್ಲಿ ಶಾಲೆ-ಕಾಲೇಜ್, ಸಿನಿಮಾ ಮಂದಿರಕ್ಕೆ ಅವಕಾಶ ನೀಡಲು ತೀರ್ಮಾನ ಕೈಗೊಳ್ಳಲಾಗಿದೆ. ರಾಜ್ಯದಲ್ಲಿ ಈಗ ಸರಾಸರಿ ಶೇ. 0.66 ಕೋವಿಡ್ ಪ್ರಮಾಣ ತಗ್ಗಿದೆ. ಹೀಗಾಗಿ ಕೊರೊನಾ ನಿರ್ಬಂಧಗಳನ್ನು ಸಡಿಲೀಕರಿಸಲಾಗಿದೆ. ಪಾಸಿಟಿವ್ ರೇಟ್ 2% ಗಿಂತ ಹೆಚ್ಚಿದ್ರೆ ಆ ಜಿಲ್ಲೆಗಳಲ್ಲಿ ಸಿನಿಮಾ ಮಂದಿರಗಳು, ಪಬ್ಗಳು ಕ್ಲೋಸ್ ಆಗುತ್ತವೆ. ಗಾಂಧಿ ಜಯಂತಿಯ ನಂತರ ಪಬ್ಗಳಿಗೆ ತೆರೆಯಲು ಅವಕಾಶ ನೀಡಲಾಗುವುದು ಎಂದು ತಿಳಿಸಿದರು.
ದೇವಸ್ಥಾನಗಳಲ್ಲಿ ಸೇವೆ ಆರಂಭಕ್ಕೆ ಆಯಾ ಜಿಲ್ಲಾಧಿಕಾರಿಗಳು ತೀರ್ಮಾನ ತೆಗೆದುಕೊಳ್ಳಲಿದ್ದಾರೆ. ದಸರಾ ಬಗ್ಗೆ ಪ್ರತ್ಯೇಕ ಮಾರ್ಗಸೂಚಿ ಹೊರಡಿಸಲಾಗುವುದು. ಗಡಿ ಭಾಗದ ಜಿಲ್ಲೆಗಳಲ್ಲಿ ತೀವ್ರ ನಿಗಾ ಮುಂದುವರಿಸಲಾಗುವುದು. 6 ರಿಂದ 12ನೇ ತರಗತಿವರೆಗೆ ಪೂರ್ಣ ಪ್ರಮಾಣದಲ್ಲಿ ಶಾಲೆ ನಡೆಸಲು ಅವಕಾಶವಿರುತ್ತದೆ. 1 ರಿಂದ 5ನೇ ತರಗತಿವರೆಗಿನ ಶಾಲೆಗಳ ಪುನರಾರಂಭ ಸದ್ಯಕ್ಕಿಲ್ಲ ಎಂದು ಸಿಎಂ ಬೊಮ್ಮಾಯಿ ತಿಳಿಸಿದರು.
- ಹಾಲಿ ರಾತ್ರಿ 9 ಗಂಟೆಯಿಂದ ಆರಂಭವಾಗುತ್ತಿರುವ ನೈಟ್ ಕರ್ಫ್ಯೂ ಇನ್ನು ಮುಂದೆ ರಾತ್ರಿ 10 ರಿಂದ ಬೆಳಿಗ್ಗೆ 5 ವರೆಗೆ ಚಾಲ್ತಿಯಲ್ಲಿರುತ್ತದೆ
- ಶಾಲೆಗಳಲ್ಲಿ 100% ಹಾಜರಾತಿ: 6ನೇ ತರಗತಿಯಿಂದ ರಿಂದ 8ನೇ ತರಗತಿವರೆಗೆ ಶೇ. 100 ರಷ್ಟು ಹಾಜರಾತಿಯೊಂದಿಗೆ ವಾರದಲ್ಲಿ ಐದು ದಿನಗಳು ಶಾಲೆ ನಡೆಸಲು ಅವಕಾಶ. ಸೋಮವಾರದಿಂದ ಶುಕ್ರವಾರದವರೆಗೆ ಶಾಲಾ ಕಾಲೇಜುಗಳಿಗೆ ಅನುಮತಿ
- ಅಕ್ಟೋಬರ್ 1 ರಿಂದ ಶೇ. 1 ಕ್ಕಿಂತ ಕಡಿಮೆ ಕರೊನಾ ಪಾಸಿಟಿವಿಟಿ ಇರುವ ಜಿಲ್ಲೆಗಳಲ್ಲಿ ಸಿನಿಮಾ ಮಂದಿರಗಳಲ್ಲಿ 100% ಸೀಟು ಭರ್ತಿಗೆ ಅನುಮತಿ
- ಶೇ.1 ಕ್ಕಿಂತ ಜಾಸ್ತಿ ಇರೋ 4 ರಿಂದ 5 ಜಿಲ್ಲೆಗಳಲ್ಲಿ ಮಾತ್ರ 50% ಸೀಟಿಂಗ್ ಅನುಮತಿ
- ಅಕ್ಟೋಬರ್ 3 ರಿಂದ ಕ್ಲಬ್ ಮತ್ತು ಪಬ್ಗಳಿಗೆ ತೆರೆಯಲು ಅವಕಾಶ