ಡಿವಿಜಿ ಸುದ್ದಿ, ದಾವಣಗೆರೆ: ಬಿಜೆಪಿಯ ವಿದ್ಯಾನಗರ 39 ನೇ ವಾರ್ಡ್ ಅಭ್ಯರ್ಥಿಯಾಗಿರುವ ಗೀತಾ ದಿಳ್ಳೇಪ್ಪ ಅವರ ಪರ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ರೇಣುಕಾಚಾರ್ಯ, ವಿಧಾನ ಪರಿಷತ್ ಸದಸ್ಯ ನಾರಾಯಣಸ್ವಾಮಿ ಸೇರಿದಂತೆ ಅನೇಕ ಗಣ್ಯರು ಭರ್ಜರಿ ಪ್ರಚಾರ ನಡೆಸಿದರು.

ಈ ಬಗ್ಗೆ ಡಿವಿಜಿ ಸುದ್ದಿ ಜೊತೆ ಮಾತನಾಡಿದ ಗೀತಾ ದಿಳ್ಳೇಪ್ಪ ಅವರು, ವಿದ್ಯಾನಗರವನ್ನು ಮಾದರಿ ವಾರ್ಡ್ ಆಗಿ ನಿರ್ಮಾಣ ಮಾಡುವ ಗುರಿ ಹೊಂದಿದ್ದೇನೆ. ಇದಕ್ಕಾಗಿ ಎಲ್ಲ ನಾಗರಿಕರ ಸಹಕಾರ ಅಗತ್ಯವಿದೆ. ವಿದ್ಯಾನಗರ ದಾವಣಗೆರೆಯಲ್ಲಿ ಪ್ರತಿಷ್ಠಿತ ಬಡಾವಣೆಗಳಲ್ಲಿ ಒಂದಾಗಿದ್ದು,ಇಡೀ ದಾವಣಗೆರೆಗೆ ಮಾದರಿ ವಾರ್ಡ್ ಆಗಿ ನಿರ್ಮಿಸುವ ಆಸೆ ಇದೆ ಎಂದರು.

ಈಗಾಗಲೇ ವಿದ್ಯಾನಗರದಲ್ಲಿ ಸಾಕಷ್ಟು ಅಭಿವೃದ್ಧಿ ಕಾರ್ಯಗಳು ಆಗಿದ್ದು, ಅವುಗಳ ಜೊತೆ ನಾನು ಕೂಡ ಒಂದಿಷ್ಟು ನನ್ನದೇ ಯೋಜನೆ ರೂಪಿಸಿಕೊಂಡಿದ್ದೇನೆ. ಇಲ್ಲಿನ ಜನರೂ ಕೂಡ ವಿದ್ಯಾವಂತರಾಗಿದ್ದು, ಕೆಲಸ ಮಾಡುವ ಅಭ್ಯರ್ಥಿಗೆ ಮತ ಹಾಕ್ತಾರೆ ಎಂದರು. ದೇಶ ರಾಜ್ಯದಲ್ಲಿ ಬಿಜೆಪಿ ಅಧಿಕಾರದಲ್ಲಿ ಇರುವುದರಿಂದ ಸ್ಥಳೀಯ ಸಂಸ್ತೆಯಲ್ಲಿಯೂ ಬಿಜೆಪಿ ಅಧಿಕಾರ ಹಿಡಿಯಲಿದೆ ಎಂದರು.



