ದಾವಣಗೆರೆ: ದಾವಣಗೆರೆ ಜೋಗಲ್ ಬಾಬಾನಗರದ ರಿಂಗ್ ರಸ್ತೆಯಲ್ಲಿ ಆ.4 ರಂದು ಜಪ್ತಿ ಮಾಡಲಾದ 32 ಕ್ವಿಂಟಾಲ್ ಅಕ್ಕಿಯನ್ನು ಸೆ.15 ರ ಮಧ್ಯಾಹ್ನ 12 ಗಂಟೆಗೆ ದಾವಣಗೆರೆಯ ಕೆ.ಎಫ್.ಸಿ.ಎಸ್.ಸಿ ಸಗಟು ಮಳಿಗೆ 1, ಎಪಿಎಂಸಿ ಆವರಣದಲ್ಲಿ ಸಹಾಯಕ ನಿರ್ದೇಶಕರ ಸಮಕ್ಷಮದಲ್ಲಿ ಬಹಿರಂಗ ಹರಾಜು ಮಾಡಲಾಗುವುದು.
ಹರಾಜಿನಲ್ಲಿ ಭಾಗವಹಿಸುವ ಬಿಡ್ಡುದಾರರು, ಹರಾಜು ದಿನ ಒಂದು ಗಂಟೆಯ ಮುಂಚೆ ಬಂದು, ಶೇ.10 ರಷ್ಟು ಮೊಬಲಗನ್ನು ಮುಂಗಡವಾದ ಠೇವಣಿ ಇಡಬೇಕು. ಠೇವಣಿ ಇಡದವರು ಹರಾಜಿನಲ್ಲಿ ಭಾಗವಹಿಸಲು ಅವಕಾಶವಿಲ್ಲ. ಸರ್ಕಾರಕ್ಕೆ ಜಪ್ತಿ ಮಾಡಲಾದ 32 ಕ್ವಿಂಟಲ್ ಅಕ್ಕಿಯನ್ನು ಇದ್ದ ಸ್ಥಿತಿಯಲ್ಲಿಯೇ ಹರಾಜು ಮಾಡಲಾಗುವುದು.
ಹರಾಜಿನಲ್ಲಿ 32 ಕ್ವಿಂಟಲ್ ಅಕ್ಕಿ ಪಡೆದ ಬಿಡ್ಡುದಾರರು ತಕ್ಷಣವೇ ಪೂರ್ಣ ಹಣವನ್ನು ಸರ್ಕಾರಕ್ಕೆ ಪಾವತಿ ಮಾಡಬೇಕು ಮತ್ತು ಅದೇ ದಿನ ವಸ್ತುಗಳನ್ನು ತಮ್ಮ ಸ್ವಂತ ಖರ್ಚಿನಲ್ಲಿ ತೆಗೆದುಕೊಂಡು ಹೋಗಬೇಕು. ಹರಾಜಿನಲ್ಲಿ ಇಲಾಖೆಯವರ ತೀರ್ಮಾನವೇ ಅಂತಿಮ ತೀರ್ಮಾನವಾಗಿರುತ್ತದೆ ಎಂದು ಆಹಾರ, ನಾಗರಿಕ ಸರಬರಾಜು ಹಾಗೂ ಗ್ರಾಹಕರ ವ್ಯವಹಾರಗಳ ಇಲಾಖೆ ಸಹಾಯಕ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.



