ಬೆಂಗಳೂರು: ಕ್ರಿಕೆಟ್ ಸುದ್ದಿಯ ಕ್ಷಣ ಕ್ಷಣದ ಮಾಹಿತಿ ಜೊತೆ ವಿಶ್ಲೇಷಣೆ ನೀಡುವ ಕ್ರಿಕ್ ಬಝ್, ಇದೀಗ ಕ್ರಿಕ್-ಬಝ್ ಪ್ಲಸ್ ಲಾಂಚ್ ಗೆ ಸನ್ನದ್ಧವಾಗಿದೆ.
ಭಾರತೀಯ ಕ್ರಿಕೆಟ್ ಪ್ರೇಮಿಗಳಿಗೆ ಸುದ್ದಿ, ವಿಶ್ಲೇಷಣೆ, ಸಂದರ್ಶನ ಉತ್ತಮ ಮಾಹಿತಿ ಒದಗಿಸುವ ಉತ್ತಮ ತಾಣಗಳಲ್ಲೊಂದಾದ ಕ್ರಿಕ್ ಬಝ್, ಟೈಮ್ಸ್ ಇಂಟರ್ನೆಟ್ ಮಾಲೀಕತ್ವದಲ್ಲಿ ಜನಪ್ರಿಯವಾಗಿದೆ. ಭಾರತೀಯ ಕ್ರಿಕೆಟ್ ನ್ಯೂಸ್ ಆ್ಯಪ್ ಕ್ರಿಕ್-ಬಝ್ (Cricbuzz), ಈಗ ಕ್ರಿಕ್-ಬಝ್ ಪ್ಲಸ್ (Cricbuzz Plus) ನ್ನು ಕ್ರಿಕೆಟ್ ಪ್ರೇಮಿಗಳಿಗೆ ಪರಿಚಯಿಸಲಿದೆ.
ಆಟದ ಅತ್ಯುತ್ತಮ ಆಯಾಮಗಳನ್ನು ಕ್ಷಣ ಕ್ಷಣಕ್ಕೂ ಮಾಹಿತಿ, ವಿಶ್ಲೇಷಣೆ ಮೂಲಕ ವೀಕ್ಷಕರನ್ನು ತೃಪ್ತಿಪಡಿಸುವುದು ಕ್ರಿಕ್-ಬಝ್ (Cricbuzz) ವೇದಿಕೆಯ ಉದ್ದೇಶವಾಗಿದೆ. ಕ್ರಿಕೆಟ್ ತಂಡಗಳು, ಆಟಗಾರರು, ಪಂದ್ಯದ ಕಾರ್ಯತಂತ್ರಗಳ ಬಗ್ಗೆ ವಿಶೇಷವಾದ ಮಾಹಿತಿಯನ್ನು ಈ ತಾಣದಲ್ಲಿ ಪಡೆಯಬಹುದಾಗಿದೆ. ಕ್ರಿಕ್-ಬಝ್ (Cricbuzz) ಯೂಟ್ಯೂಬ್ ಲಿಂಕ್ https://www.youtube.com/watch?v=vYVRxf0jYh8



