ದಾವಣಗೆರೆ: ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಕ್ಕೆ ಮೀಸಲಾತಿ ಹೆಚ್ಚಳ ಮಾಡಲು ಸದನ ಸಮಿತಿ ನೇಮಕ ಅಗತ್ಯವಿಲ್ಲಎಂದು ನಿವೃತ್ತ ನ್ಯಾಯಮೂರ್ತಿ ನಾಗಮೋಹನದಾಸ್ ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಾಬಾಬುಡನಗಿರಿ ವಿಚಾರದಲ್ಲಿ ಸದನ ಸಮಿತಿ ಬೇಕಾಗುತ್ತದೆ. ಆದರೆ, ಮೀಸಲಾತಿ ಹೆಚ್ಚಳ ಸರ್ಕಾರ ಒಂದು ಆದೇಶದ ಮೂಲಕ ಜಾರಿ ಮಾಡಬಹುದು ಎಂದರು.
ಪರಿಶಿಷ್ಟ ಪಂಗಡಕ್ಕೆ ಶೇ 7ರಷ್ಟು ಮೀಸಲಾತಿ ಹೆಚ್ಚಿಸಬಹುದು. ಪರಿಶಿಷ್ಟ ಜಾತಿಗೆ 15ರಿಂದ 17ಕ್ಕೆ ಮಾಡಬಹುದು. ಅದಕ್ಕೆ ಸಂಬಂಧಪಟ್ಟಂತೆ ಎಲ್ಲ ಅಧ್ಯಯನ ಮಾಡಿ ಸರ್ಕಾರಕ್ಕೆ ನೀಡಲಾಗಿದೆ. ಕೆಲ ವಿಚಾರಗಳಿಗೆ ಮಾತ್ರ ಸದನ ಸಮಿತಿ ಅಗತ್ಯವಿರುತ್ತದೆ. ಮೀಸಲಾತಿ ವಿಚಾರಗಳಿಗೆ ಬೇಕಾಗಿಲ್ಲ ಎಂದರು. ವಾಲ್ಮೀಕಿ ಸಮುದಾಯಕ್ಕೆ ಮೀಸಲಾತಿ ಹೆಚ್ಚಳ ಬಗ್ಗೆ ನ್ಯಾಯಮೂರ್ತಿ ನಾಗಮೋಹನ್ ದಾಸ್ ವರದಿ ಕೊಟ್ಟಿದ್ದು, ಸರ್ಕಾರ ಸದನ ಉಪ ಸಮಿತಿ ರಚನೆ ಮಾಡಿದೆ.