ಡಿವಿಜಿಸುದ್ದಿ.ಕಾಂ, ಹರಿಹರ: ಪರಿಸರ ರಕ್ಷಣೆ, ಮಳೆ ನೀರು ಶೇಖರಣೆ ಜತೆ ಅಂತರ್ಜಲ ಮಟ್ಟ ಹೆಚ್ಚಿಸು ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಬೇಕಿದೆ ಎಂದು ವಿರಕ್ತ ಮಠದ ಶ್ರೀ ಬಸವಪ್ರಭು ಸ್ವಾಮೀಜಿ ಹೇಳಿದರು.
ನಗರದ ವಿದ್ಯಾನಗರದಲ್ಲಿ ಮಾಜಿ ಅರೆಸೈನಿಕರ ನಗರ ಮತ್ತು ಗ್ರಾಮೀಣಾಭಿವೃದ್ಧಿ ಸಂಸ್ಥೆಯ ಉದ್ಘಾಟನಾ ಕಾರ್ಯಕ್ರಮ ಸಾನಿಧ್ಯವಹಿಸಿ ಮಾತನಾಡಿದ ಅವರು, ಸಂಘಟನೆ ಮೂಲಕ ಬಡವರ, ನೊಂದವರ, ಶೋಷಿತರ ಸೇವೆ ಮಾಡುವಕಾರ್ಯ ಶ್ಲಾಘನೀಯ . ಇದೇ ರೀತಿ ನಿಮ್ಮ ಸಮಾಜ ಸೇವೆ ಮುಂದುವರಿಯಲ್ಲಿ ಎಂದು ಆಶೀರ್ವದಿಸಿದರು.
ದೇಶ ಗಡಿ ಕಾಯುವ ಸೇನೆಯಲ್ಲಿ ನಿವೃತ್ತಿಯಾದ ನಂತರ ಸಮಾಜ ಸೇವೆಗೆ ಒಟ್ಟುಗೂಡಿರುವುದು ಸಂತಸ ಸಂಗತಿ. ನಿಮ್ಮ ಈ ಸೇವೆ ಇತರೆ ವರ್ಗದವರಿಗೂ ಮಾದರಿಯಾಗಲಿದೆ. ಸಮಾಜದ ಒಳಿತಿಗಾಗಿ ಎಲ್ಲರು ಒಟ್ಟಾಗಿ ಶ್ರಮಿಸಿದಾಗ ಬದಲಾವಣೆ ಸಾಧ್ಯ ಎಂದು ತಿಳಿಸಿದರು.
ನಿವೃತ್ತಿ ನಂತರ ಮನೆಯಲ್ಲಿ ವಿಶ್ರಾಂತಿ ಜೀವನ ನಡೆಸುವವರೇ ಹೆಚ್ಚು. ಇಂತಹ ಕಾಲದಲ್ಲಿ ಸರ್ಕಾರಿ ಶಾಲೆಗಳಲ್ಲಿ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡುವುದು. ಕನ್ನಡ ಭಾಷೆಯ ಉಳಿವಿಗಾಗಿ ಜಾಗೃತಿ ಮೂಡಿಸುತ್ತಿರುವುದು ಒಳ್ಳೆಯ ಸಂಗತಿ ಎಂದರು
ಶಾಸಕ ಎಸ್ ರಾಮಪ್ಪ ಮಾತನಾಡಿ, ಸಮಾಜ ಸೇವೆಯೇ ಮುಖ್ಯ ಗುರುಯಾಗಿರಿಸಿ ಕೊಂಡಿರುವ ಈ ಸಂಸ್ಥೆಗೆ ಒಂದು ಸ್ವಂತ ಕಟ್ಟಡದ ಅವಶ್ಯಕತೆಯಿದ್ದು, ಕಟ್ಟಡ ನಿರ್ಮಾಣ ಮಾಡಿ ಕೊಡುತ್ತೇನೆ ಎಂದು ಭರವಸೆ ನೀಡಿದರು.
ಸಂಸ್ಥೆಯ ಅಧ್ಯಕ್ಷ ಹೆಚ್.ಬಸವರಾಜ್, ಕಾರ್ಯದರ್ಶಿ ಎಂ.ಗಂಗಾಧರ್ , ಉಪಾಧ್ಯಕ್ಷ ಪಿ.ಮಂಜುನಾಥ, ಖಜಾಂಚಿ ಅರುಣ್ ಕುಮಾರ್ ಸೇರಿದಂತೆ ಮತ್ತಿತರರು ಉಪಸ್ಥಿತರಿದರು.



