ನವದೆಹಲಿ: ಮುಂದಿನ ತಿಂಗಳಲ್ಲಿ11 ರಾಜಸಭಾ ಸ್ಥಾನಗಳು ತೆರವಾಗಲಿದ್ದು, ನವೆಂಬರ್ 9ರಂದು ಚುನಾವಣೆ ನಡೆಸಲು ಚುನಾವಣಾ ಆಯೋಗ ಘೋಷಣೆ ಮಾಡಿದೆ.
ಉತ್ತರ ಪ್ರದೇಶದ 10, ಉತ್ತರಾಖಂಡ್‌ನ 1 ರಾಜ್ಯಸಭೆ ಸ್ಥಾನಗಳಿಗೆ ಚುನಾವಣಾ ಘೋಷಣೆ ಮಾಡಿದ್ದು, ಕೇಂದ್ರ ಸಚಿವ ಹರ್‌ದೀಪ್ ಸಿಂಗ್ ಪುರಿ, ಸಮಾಜವಾದಿ ಪಕ್ಷದ ಮುಖಂಡ ರಾಮಗೋಪಾಲ್ ಯಾದವ್ ಸೇರಿದಂತೆ 10 ಸದಸ್ಯರು ನ. 25ರಂದು ನಿವೃತ್ತಿಯಾಗಲಿದ್ದಾರೆ.
ಇನ್ನು ಉತ್ತರಾಖಂಡ್‌ನಿಂದ ಆಯ್ಕೆಯಾಗಿರುವ ನಟ ರಾಜ್‌ಬಬ್ಬರ್ ಅವರು ನಿವೃತ್ತರಾಗಲಿದ್ದಾರೆ. ತೆರವಾಗಲಿರುವ ಈ ಸ್ಥಾನಗಳಿಗೆ ಚುನಾವಣೆ ನಡೆಲಿದೆ. ಅಂದೇ ಸಂಜೆ ಮತ ಎಣಿಕೆ ನಡೆಯಲಿದೆ. ಈ ಚುನಾವಣೆ ಕುರಿತ ಅಧಿಸೂಚನೆ ಇದೇ 20ರಂದು ಹೊರಬೀಳಲಿದೆ.