ಶಿಮ್ಲಾ: ಹಿಮಾಚಲ ಪ್ರದೇಶದ ಮನಾಲಿ ಮತ್ತು ಲೇಹ್ ಸಂಪರ್ಕಿಸುವ ಜಗತ್ತಿನ ಅತೀ ಉದ್ದದ ಅಟಲ್ ಸುರಂಗ ಮಾರ್ಗವನ್ನು ಪ್ರಧಾನಿ ನರೇಂದ್ರಮೋದಿ ಅವರು ಇಂದು ಉದ್ಘಾಟಿಸಿದರು.
Himachal Pradesh: Prime Minister Narendra Modi at Atal Tunnel, Rohtang
It is the longest highway tunnel in the world built at an altitude of 3000 meters. The 9.02 Km long tunnel connects Manali to Lahaul-Spiti valley pic.twitter.com/yh2KmITCSB
— ANI (@ANI) October 3, 2020
ಈ ಉದ್ಘಾಟನಾ ಕಾರ್ಯಕ್ರಮದಲ್ಲಿ ರಕ್ಷಣಾ ಸಚಿವ ರಾಜನಾಥ್ ಸಿಂಗ್, ಸೇನಾ ಮುಖ್ಯಸ್ಥ ಬಿಪಿನ್ ರಾವತ್ , ಮುಖ್ಯಮಂತ್ರಿ ಜೈರಾಮ್ ಠಾಕೂರ್ ಭಾಗವಹಿಸಿದ್ದರು. ಮನಾಲಿಯನ್ನು ಲೇಹ್‌ಗೆ ಸಂಪರ್ಕಿಸುವ 9.02 ಕಿ.ಮೀ ಉದ್ದದ ಅಟಲ್ ಸುರಂಗವು ವಿಶ್ವದ ಅತಿ ಉದ್ದದ ಹೆದ್ದಾರಿ ಸುರಂಗವಾಗಿದೆ.
ಈ ಮಾರ್ಗ ಮನಾಲಿ–ಲೇಹ್ ನಡುವಿನ ದೂರವನ್ನು 46. ಕಿ.ಮೀ ನಷ್ಟು ಕಡಿತಗೊಳಿಸಲಿದೆ. ಈ ಹಿಂದೆ ವರ್ಷದಲ್ಲಿ ಆರು ತಿಂಗಳು ಈ ಮಾರ್ಗದಲ್ಲಿ ಹಿಮಪಾತವಾಗುತ್ತಿದ್ದರಿಂದ, ಅರ್ಧ ವರ್ಷ ಸಂಚಾರಕ್ಕೆ ನಿರ್ಬಂಧ ಹೇರಲಾಗುತ್ತಿತ್ತು. ಈಗ ಸುರಂಗ ನಿರ್ಮಾಣವಾಗಿರುವುದರಿಂದ, ವರ್ಷಪೂರ್ತಿ ಮನಾಲಿಯಿಂದ ಲಹೌಲ್ – ಸ್ಪಿತಿ ಕಣಿವೆಗೆ ಸಂಚರಿಸಬಹುದಾಗಿದೆ.
ಹಿಮಾಲಯದ ಪಿರ್ ಪಂಜಾಲ್ ಶ್ರೇಣಿಯಲ್ಲಿ ಸರಾಸರಿ ಸಮುದ್ರ ಮಟ್ಟದಿಂದ 10,000 ಅಡಿ ಎತ್ತರದಲ್ಲಿ ಅತ್ಯಾಧುನಿಕ ತಂತ್ರಜ್ಞಾನದೊಂದಿಗೆ ಈ ಸುರಂಗ ನಿರ್ಮಿಸಲಾಗಿದೆ. ಸತತ 10 ವರ್ಷದ ಕಾರ್ಯ ನಂತರ ಕಾಮಗಾರಿ ಪೂರ್ಣಗೊಂಡಿದೆ.