Connect with us

Dvg Suddi-Kannada News

ಜಗತ್ತಿನ ಅತಿ ಉದ್ದದ ಅಟಲ್ ಸುರಂಗ ಮಾರ್ಗ ಉದ್ಘಾಟಿಸಿದ ಪ್ರಧಾನಿ ನರೇಂದ್ರ ಮೋದಿ

ರಾಷ್ಟ್ರ ಸುದ್ದಿ

ಜಗತ್ತಿನ ಅತಿ ಉದ್ದದ ಅಟಲ್ ಸುರಂಗ ಮಾರ್ಗ ಉದ್ಘಾಟಿಸಿದ ಪ್ರಧಾನಿ ನರೇಂದ್ರ ಮೋದಿ

ಶಿಮ್ಲಾಹಿಮಾಚಲ ಪ್ರದೇಶದ ಮನಾಲಿ ಮತ್ತು ಲೇಹ್  ಸಂಪರ್ಕಿಸುವ ಜಗತ್ತಿನ ಅತೀ ಉದ್ದದ ಅಟಲ್ ಸುರಂಗ ಮಾರ್ಗವನ್ನು ಪ್ರಧಾನಿ ನರೇಂದ್ರಮೋದಿ ಅವರು ಇಂದು ಉದ್ಘಾಟಿಸಿದರು.

ಈ ಉದ್ಘಾಟನಾ ಕಾರ್ಯಕ್ರಮದಲ್ಲಿ ರಕ್ಷಣಾ ಸಚಿವ ರಾಜನಾಥ್ ಸಿಂಗ್, ಸೇನಾ ಮುಖ್ಯಸ್ಥ ಬಿಪಿನ್‌ ರಾವತ್‌ , ಮುಖ್ಯಮಂತ್ರಿ ಜೈರಾಮ್‌ ಠಾಕೂರ್‌ ಭಾಗವಹಿಸಿದ್ದರು. ಮನಾಲಿಯನ್ನು ಲೇಹ್‌ಗೆ ಸಂಪರ್ಕಿಸುವ  9.02 ಕಿ.ಮೀ ಉದ್ದದ ಅಟಲ್ ಸುರಂಗವು ವಿಶ್ವದ ಅತಿ ಉದ್ದದ ಹೆದ್ದಾರಿ ಸುರಂಗವಾಗಿದೆ.

ಈ ಮಾರ್ಗ ಮನಾಲಿ–ಲೇಹ್‌ ನಡುವಿನ ದೂರವನ್ನು 46. ಕಿ.ಮೀ ನಷ್ಟು ಕಡಿತಗೊಳಿಸಲಿದೆ. ಈ ಹಿಂದೆ ವರ್ಷದಲ್ಲಿ ಆರು ತಿಂಗಳು ಈ ಮಾರ್ಗದಲ್ಲಿ ಹಿಮಪಾತವಾಗುತ್ತಿದ್ದರಿಂದ, ಅರ್ಧ ವರ್ಷ ಸಂಚಾರಕ್ಕೆ ನಿರ್ಬಂಧ ಹೇರಲಾಗುತ್ತಿತ್ತು. ಈಗ ಸುರಂಗ ನಿರ್ಮಾಣವಾಗಿರುವುದರಿಂದ, ವರ್ಷಪೂರ್ತಿ ಮನಾಲಿಯಿಂದ ಲಹೌಲ್‌ – ಸ್ಪಿತಿ ಕಣಿವೆಗೆ ಸಂಚರಿಸಬಹುದಾಗಿದೆ.

ಹಿಮಾಲಯದ ಪಿರ್ ಪಂಜಾಲ್ ಶ್ರೇಣಿಯಲ್ಲಿ ಸರಾಸರಿ ಸಮುದ್ರ ಮಟ್ಟದಿಂದ  10,000 ಅಡಿ ಎತ್ತರದಲ್ಲಿ ಅತ್ಯಾಧುನಿಕ ತಂತ್ರಜ್ಞಾನದೊಂದಿಗೆ ಈ ಸುರಂಗ ನಿರ್ಮಿಸಲಾಗಿದೆ. ಸತತ 10 ವರ್ಷದ ಕಾರ್ಯ ನಂತರ ಕಾಮಗಾರಿ ಪೂರ್ಣಗೊಂಡಿದೆ.

Click to comment

Leave a Reply

Your email address will not be published. Required fields are marked *

More in ರಾಷ್ಟ್ರ ಸುದ್ದಿ

Advertisement Enter ad code here
Advertisement

ದಾವಣಗೆರೆ

Advertisement

ಪ್ರಮುಖ ಸುದ್ದಿ

News

Advertisement
Advertisement e

namma davanagere

ಸಿದ್ದನೂರು ಮತ್ತು ಅಗಸನಕಟ್ಟೆಯ ನಿಕ್ರಾ ಯೋಜನೆಯ ದೃಶ್ಯಾವಳಿ

Advertisement
To Top