Connect with us

Dvgsuddi Kannada | online news portal | Kannada news online

ನೆಗಡಿ ನಿಯಂತ್ರಣಕ್ಕೆ ಸಿಂಪಲ್ ಟಿಪ್ಸ್

ಆರೋಗ್ಯ

ನೆಗಡಿ ನಿಯಂತ್ರಣಕ್ಕೆ ಸಿಂಪಲ್ ಟಿಪ್ಸ್

ಚಳಿಗಾಲದಲ್ಲಿ ತಪ್ಪದೇ ಎಲ್ಲರನ್ನು ಕಾಡುವ ಸಮಸ್ಯೆ ನೆಗಡಿ. ಇದು ಒಬ್ಬರಿಂದ ಮತ್ತೊಬ್ಬರಿಗೆ ಹರಡುವ ವೈರಾಣು. ಇದು ಸಾಮಾನ್ಯ ಕಾಯಿಲೆ ಎಂದು ನಿರ್ಲಕ್ಷ್ಯ ಮಾಡುವಂತಿಲ್ಲ.

ನೆಗಡಿಯಿರುವ ವ್ಯಕ್ತಿ ಕೆಮ್ಮಿದಾಗ, ಸೀನಿದಾಗ ವೈರಾಣುಗಳು ಗಾಳಿಯಲ್ಲಿ ಹರಡಿ ಮತ್ತೊಬ್ಬ ವ್ಯಕ್ತಿಯ ದೇಹವನ್ನು ಸೇರುತ್ತದೆ. ನೆಗಡಿ ಸಾಮಾನ್ಯವಾಗಿ 4 ರಿಂದ 6 ದಿನಗಳೊಳಗೆ ತನ್ನಷ್ಟಕ್ಕೆ ತಾನೇ ಗುಣವಾಗುತ್ತದೆ. ದೇಹದ ರೋನಿರೋಧಕ ಶಕ್ತಿಯು ವೈರಾಣುವಿನ ವಿರುದ್ಧ ಹೋರಾಡಲು ಪ್ರತಿಬಂಧಕಗಳನ್ನು ಸೃಷ್ಟಿಸಿ ದೇಹದಿಂದ ಹೊರಹಾಕುತ್ತದೆ. ಆದ್ರೂ ನೆಗಡಿಯ ಕಿರಿಕಿರಿಯಿಂದ ದೂರವಿರಲು ಕೆಲ ಮನೆ ಮದ್ದುಗಳನ್ನು ಪಾಲಿಸಿ.

coold2

  • ಹುಳಿ ಮೊಸರು, ಕರಿದ ಆಹಾರ, ತಂಪು ಪಾನೀಯ ಕಡಿಮೆಗೊಳಿಸಿ.
  • ಒಂದು ಲೋಟ ಬೆಚ್ಚಗಿನ ಹಾಲಿಗೆ ಅರಿಶಿನ ಮತ್ತು ಬೆಲ್ಲವನ್ನು ಬೆರೆಸಿ ರಾತ್ರಿ ಮಲಗುವ ಮುನ್ನ ಕುಡಿದರೆ ಕಫ ಮತ್ತು ನೆಗಡಿ ಕಮ್ಮಿಯಾಗುತ್ತದೆ.
  • ದಿನಕ್ಕೆ 2 ರಿಂದ 3 ಬಾರಿ ಹತ್ತು ನಿಮಿಷಗಳ ಕಾಲ ಮುಖಕ್ಕೆ ಹಬೆಯನ್ನು ತೆಗೆದುಕೊಳ್ಳಬೇಕು.
  • ತುಳಸಿ, ಶುಂಠಿ ಕಷಾಯ ಸೇವಿಸಬೇಕು.
  • ದಾಲ್ಚಿನ್ನಿ, ಜೇನುತುಪ್ಪ ಮತ್ತು ನಿಂಬೆ ರಸವನ್ನು ಸೇವಿಸಿದರೆ ನೆಗಡಿ ಮತ್ತು ಕಫ ನಿವಾರಣೆಯಾಗುತ್ತದೆ.
  • ಬೆಳ್ಳಿಗೆ ಎದ್ದ ತಕ್ಷಣ ಬಿಸಿ ನೀರು ಕುಡಿಯುವ ಅಭ್ಯಾಸವನ್ನು ರೂಢಿಸಿಕೊಳ್ಳಬೇಕು.

ಲೋಕಲ್ ಸುದ್ದಿಗಳನ್ನು ಕ್ಷಣಾರ್ಧದಲ್ಲಿ ಲೋಕದ ಜನರ ಬೆರಳ ತುದಿಗೆ ತಲುಪಿಸುವ ಉದ್ದೇಶದಿಂದ ಡಿವಿಜಿಸುದ್ದಿ.ಕಾಂ ಕನ್ನಡ ಆನ್ ಲೈನ್ ನ್ಯೂಸ್ ಪೋರ್ಟಲ್ (ಡಿಜಿಟಲ್ ಮಾಧ್ಯಮ) ಸ್ಥಾಪಿಸಲಾಗಿದೆ. ಸ್ಥಳೀಯ ಸುದ್ದಿ ಜೊತೆ ಇನ್ಫೋರ್ಮೆಟಿವ್ ನ್ಯೂಸ್ ಕೊಡುವುದು ಮೊದಲ ಆದ್ಯತೆ. ಇದಲ್ಲದೆ ರಾಜಕೀಯ, ಶಿಕ್ಷಣ, ಉದ್ಯೋಗ, ಕ್ರೀಡೆ, ಅಪರಾಧ ಸುದ್ದಿ ಹಾಗೂ ವಿಶೇಷವಾಗಿ ಕೃಷಿ ಮತ್ತು ರೈತರಿಗೆ ಉಪಯುಕ್ತ ಮಾಹಿತಿ ನೀಡುವುದು ಮುಖ್ಯ ಉದ್ದೇಶ. ಸುದ್ದಿ, ಮಾಹಿತಿ, ಸಲಹೆ, ಸೂಚನೆ ನೀಡಲು ವಾಟ್ಸಾಪ್ (7483892205) ಮಾಡಿ... Editor: munikondajji, MA journalism, contact number:7483892205, e-mail: dvgsuddi@gmail.com

Click to comment

Leave a Reply

Your email address will not be published. Required fields are marked *

More in ಆರೋಗ್ಯ

ದಾವಣಗೆರೆ

Advertisement
Advertisement Enter ad code here

Title

To Top