ಸೌತಾಂಪ್ಟನ್: ಇಡೀ ಜಗತ್ತಿನಾದ್ಯಂತ ಕೊರೊನಾ ಸೋಂಕು ಹರಡುತ್ತಿರುವ ಹಿನ್ನೆಲೆ ಎಲ್ಲಾ ಕ್ರೀಡಾ ಚಟುವಟಿಕೆಗಳು ಸ್ಥಗಿತಗೊಂಡಿವೆ. ಇದರ ಮಧ್ಯೆ ರೋಸ್ ಬೌಲ್ ಕ್ರೀಡಾಂಗಣದಲ್ಲಿ ಇಂಗ್ಲೆಂಡ್- ವೆಸ್ಟ್ ಇಂಡೀಸ್ ನಡುವಿನ ದೀರ್ಘ ಬಿಡುವಿನ ನಂತರ ಮೊದಲ ಪಂದ್ಯ ನಡೆದಿದೆ. ವಿಂಡೀಸ್ ನ ವೇಗದ ಬೌಲರ್ ಜೇಸನ್ ಹೋಲ್ಡರ್ ದಾಳಿಗೆ ಇಂಗ್ಲೆಂಡ್ ಅಲ್ಪ ಮೊತ್ತಕ್ಕೆ ಕುಸಿದಿದೆ.
ವೆಸ್ಟ್ ಇಂಡೀಸ್ ತಂಡದ ವೇಗದ ಜೋಡಿ ಜೇಸನ್ ಹೋಲ್ಡರ್ ಮತ್ತು ಶಾನನ್ ಗ್ಯಾಬ್ರಿಯಲ್ ಅವರ ದಾಳಿಯ ಮುಂದೆ ಆತಿಥೇಯರು ಸಾಧಾರಣ ಮೊತ್ತಕ್ಕೆ ಕುಸಿದರು. ಸುಮಾರು ನಾಲ್ಕು ತಿಂಗಳುಗಳ ನಂತರ ನಡೆಯುತ್ತಿರುವ ಮೊದಲ ಟೆಸ್ಟ್ ಪಂದ್ಯದ ಎರಡನೇ ದಿನ ಇಂಗ್ಲೆಂಡ್ 67.3 ಓವರ್‌ಗಳಲ್ಲಿ 204 ರನ್ ಗಳಿಸಿತು. ನಂತರ ಬ್ಯಾಟ್ ಆರಂಭಿಸಿದ ವಿಂಡೀಸ್ ವಿಕೆಟ್ ನಷ್ಟವಿಲ್ಲದೇ 21 ರನ್ ಗಳಿಸಿದೆ.
#EngvWI These bowling figures are just satisfying to look at!😍👏🏾 #WIReady pic.twitter.com/zmn8LHANyq
— Windies Cricket (@windiescricket) July 9, 2020
ವಿಂಡೀಸ್ ನಾಯಕ ಜೇಸನ್ ಹೋಲ್ಡರ್ (42ಕ್ಕೆ6) ಐದು ವಿಕೆಟ್‌ಗಳ ಪಡೆದರು. ಚೆಂಡಿಗೆ ಎಂಜಲು ಲೇಪನ ಮಾಡದೆಯೂ ಅವರು ಸ್ವಿಂಗ್ ಅಸ್ತ್ರಗಳನ್ನು ಪ್ರಯೋಗಿಸಿದ್ದು ವಿಶೇಷವಾಗಿತ್ತು.ಮೊದಲ ದಿನವಾದ ಬುಧವಾರ ಮಳೆಯ ಆಟವೇ ಹೆಚ್ಚು ನಡೆದಿತ್ತು. ಕೇವಲ 106 ಎಸೆತಗಳು ಮಾತ್ರ ಪ್ರಯೋಗವಾಗಿದ್ದವು. ಆತಿಥೇಯ ತಂಡವು ಕೇವಲ ಒಂದು ವಿಕೆಟ್ ಕಳೆದುಕೊಂಡಿತ್ತು. ಇಂಗ್ಲೆಂಡ್ ತಂಡದ ಹಂಗಾಮಿ ನಾಯಕ ಬೆನ್ ಸ್ಟೋಕ್ಸ್ 43 ರನ್ ಗಳಿಸಿದ್ದು, ವೈಯಕ್ತಿಕ ಗರಿಷ್ಠ ಸ್ಕೋರ್ ಆಯಿತು.



