ಡಿವಿಜಿಸುದ್ದಿ.ಕಾಂ
ದಾವಣಗೆರೆ : ಏಷ್ಯಾ ಪ್ರಸಿದ್ಧಿ ಕೆರೆಗೆ ಕಾಯಕಲ್ಪ ಒದಗಿಸಲು ಖಡ್ಗ ಸಂಘಟನೆ ನಡೆಸಿರುವ ಹೋರಾಟಕ್ಕೆ ಮೊದಲ ಹಂತದ ಜಯ ಸಿಕ್ಕಿದೆ. ಈ ಬಗ್ಗೆ ದಾವಣಗೆರೆ ವರದಿಗಾರರ ಕೂಟದಲ್ಲಿ ಪಾಂಡೋಮಟ್ಟಿ ಶ್ರೀ ಗಳ ನೇತೃತ್ವದಲ್ಲಿ ಖಡ್ಗ ಸಂಘಟನೆ ಪದಾಧಿಕಾರಿಗಳು ಪತ್ರಿಕಾಗೋಷ್ಠಿ ನಡೆಸಿ ಸರ್ವೇ ಕಾರ್ಯದ ರೂಪುರೇಷೆ ಬಗ್ಗೆ ಮಾಹಿತಿ ನೀಡಿದ್ದಾರೆ. ಖಡ್ಗ ಸಂಘಟನೆ ಒತ್ತಾಯಕ್ಕೆ ಮಣಿದ ಜಿಲ್ಲಾಡಳಿತ ಮುಂದಿನ ಶನಿವಾರ ಸರ್ವೇ ಕಾರ್ಯಕ್ಕೆ ಚಾಲನೆ ನೀಡಲಿದೆ.
6640 ಎಕರೆ ವಿಸ್ತೀರ್ಣ ಕೆರೆಯಲ್ಲಿ 900 ಎಕರೆ ಒತ್ತುವರಿಯಾಗಿದೆ. ಕೆರೆ ಸುತ್ತಮುತ್ತಲಿನ ರೈತರು ಕೃಷಿ ಕಾರ್ಯಕ್ಕಾಗಿ ಬಳಕೆ ಮಾಡುತ್ತಿದ್ದು ಸರ್ವೇ ನಂತರ ಕೆರೆ ಅದ್ದುಬಸ್ತ ಗೆ ಒಳಪಡಲಿದೆ. ಸೂಳೆಕೆರೆಯಿಂದ ಉಪಯೋಗ ಪಡೆಯುತ್ತಿರುವ ಎಲ್ಲಾ ಜನಪ್ರತಿನಿಧಿಗಳು ಸಾರ್ವಜನಿಕರು ಇದಕ್ಕೆ ಸಹಕಾರ ನೀಡಬೇಕೆಂದು ಸ್ವಾಮೀಜಿ ಮನವಿ ಮಾಡಿದ್ದಾರೆ.ಮುಂದಿನ ಶನಿವಾರ ಶಾಂತಿಸಾಗರ ಭಾಗದಲ್ಲಿ ಒಂದು ಕಾರ್ಯಕ್ರಮ ಆಯೋಜಿಸಲಾಗಿದೆ.



