ಡಿವಿಜಿಸುದ್ದಿ.ಕಾಂ, ದಾವಣಗೆರೆ: ಅಭಿಮಾನಿಗಳಿಂದ ಸಾಹಸ ಸಿಂಹ ಅಂತಾ ಕರೆಸಿಕೊಳ್ಳುವ ನಟ ವಿಷ್ಣುವರ್ಧನ್ ಅವರಿಗೆ ರಾಜ್ಯದಾದ್ಯಂತ ಅಭಿಮಾನಿಗಳಿದ್ದಾರೆ. ಇವತ್ತು ವಿಷ್ಣುವರ್ಧನ್ ಅವರಿಗೆ 66 ನೇ ಹುಟ್ಟುಹಬ್ಬದ ಹಿನ್ನೆಲೆ ರಾಜ್ಯದಾದ್ಯಂತ ಅಭಿಮಾನಿಗಳು ಸಂಭ್ರಮದಿಂದ ಹುಟ್ಟುಹಬ್ಬ ಆಚರಿಸಿದರು.

ಬೆಣ್ಣೆ ನಗರಿ ದಾವಣಗೆರೆಯಲ್ಲಿಯೂ ಅಪಾರ ಅಭಿಮಾನಿಗಳನ್ನು ಹೊಂದಿರುವ ವಿಷ್ಣು ದಾದಾ ಅಭಿಮಾನಿಗಳು ವಿಭಿನ್ನವಾಗಿ ಆಚರಿಸಿದರು. ಈ ಎಲ್ಲಾ ಅಭಿಮಾನಿಗಳಲ್ಲಿ ಇಲ್ಲೊಬ್ಬ ವಿಶೇಷ ರೀತಿಯಲ್ಲಿ ದಾದಾ ಹುಟ್ಟು ಹಬ್ಬ ಆಚರಿಸಿದ್ದಾನೆ. ಬೀಡ ಸ್ಟಾಲ್ ವ್ಯಾಪಾರಿಯಾಗಿರುವ ಲೋಕೇಶ್ ಅವರಿಗೆ ವಿಷ್ಣುವರ್ಧನ್ ಮೇಲೆ ಅಪಾರ ಪ್ರೀತಿ.

ಈತ ಬರೊಬ್ಬರಿ 51 ಕೆ.ಜಿ ಕೇಕ್ ಕಟ್ಟು ಮಾಡಿವ ಮೂಲಕ ಸಹಾಸ ಸಿಂಹನ ಹುಟ್ಟುಹಬ್ಬವನ್ನು ಅದ್ದೂರಿಯಾಗಿ ಆಚರಿಸಿದ್ದಾನೆ. ನಗರದ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದ ಡಾಬ್‌ವೊಂದರ ಬಳಿ ಬೀಡ ಅಂಗಡಿ ಇಟ್ಟುಕೊಂಡಿರುವ ಲೋಕೇಶ್ ವಿಷ್ಣುವರ್ಧನ್ ದೊಡ್ಡ ಅಭಿಮಾನಿ. ವಿಷ್ಣುವರ್ಧನ್ ಫೋಟೋಗೆ ಪೂಜೆ ಸಲ್ಲಿಸಿ, ೬೬ನೇ ವರ್ಷದ ಕೇಕ್ ಕಟ್ ಮಾಡಿ ನೆರೆದಿದ್ದ ಎಲ್ಲರಿಗೂ ಕೇಕ್ ವಿತರಿಸಿದ್ದಾನೆ. ವಿಷ್ಣುವರ್ಧನ್ ಬಹುತೇಕ ಸಿನಿಮಾಗಳನ್ನು ನೋಡಿರುವ ಲೋಕೇಶ್ ವಿಷ್ಣವರ್ಧನ್ ಚಿತ್ರದ ಎಲ್ಲಾ ಡೈಲಾಗ್ ಗಳನ್ನು ಲೀಲಾಜಾಲವಾಗಿ ಹೇಳುತ್ತಾನೆ..

ವಿಷ್ಣುವರ್ಧನ್ ಕರ್ನಾಟಕದ ಸಿಂಹ.. ನಾನು ಅವರ ದೊಡ್ಡ ಅಭಿಮಾನಿ. ಪ್ರತಿ ವರ್ಷ ಕೇಕ್ ಕಟ್ಟುಮಾಡಿ ದಾದಾ ಅವರ ಹುಟ್ಟುಹಬ್ಬ ಆಚರಿಸುತ್ತೇನೆ. ನನ್ನ ಖರ್ಚಿನಲ್ಲಿ ಹುಟ್ಟುಹಬ್ಬ ಆಚರಿಸಿದ್ದೇನೆ. ನನಗೆ ಬಡತನವಿದ್ದರೂ ಅದ್ದೂರಿಯಾಗಿ ವಿಷ್ಣು ಅಣ್ಣನವರ ಬರ್ತ್ ಡೇ ಆಚರಣೆ ಮಾಡಬೇಕೆಂಬುದು ನನ್ನ ಬಯಕೆ ಎನ್ನುತ್ತಾರೆ ಅಶೋಕ್.



