Connect with us

Dvg Suddi-Kannada News

ಶಿಕ್ಷಕರ ದಿನಾಚರಣೆ ಮತ್ತು ಉನ್ನತ ಶಿಕ್ಷಣ

ಅಂಕಣ

ಶಿಕ್ಷಕರ ದಿನಾಚರಣೆ ಮತ್ತು ಉನ್ನತ ಶಿಕ್ಷಣ

Instead of celebrating my birthday it would be my proud privilege if September 5th is observed as Teacher’s Day.

-Dr. S. Radhakrishnan

ಈ ಮಾತನ್ನು ಡಾಕ್ಟರ್ ಸರ್ವಪಲ್ಲಿ ರಾಧಾಕೃಷ್ಣನ್ ಅವರ ತಮ್ಮ ಹುಟ್ಟುಹಬ್ಬವನ್ನು ಆಚರಿಸಲು ಬಂದಂತಹ ತಮ್ಮ ಶಿಷ್ಯರಿಗೆ ಹೇಳಿದ ಮಾತಿದು. ಇದು, ಅವರಿಗೆ ಶಿಕ್ಷಕ ವೃತ್ತಿಯ ಬಗ್ಗೆ ಇದ್ದ ಗೌರವವನ್ನು ಸೂಚಿಸುತ್ತದೆ.

ಭಾರತ ರತ್ನ ಡಾಕ್ಟರ್ ಸರ್ವಪಲ್ಲಿ ರಾಧಾಕೃಷ್ಣನ್ ಅವರು 20 ನೇ ಶತಮಾನ ಕಂಡ ಶ್ರೇಷ್ಠ ಶಿಕ್ಷಕ, ತತ್ವಜ್ಞಾನಿ, ಖ್ಯಾತ ಶಿಕ್ಷಣ ತಜ್ಞ ಆಂಧ್ರ ವಿಶ್ವವಿದ್ಯಾಲಯ ಮತ್ತು ಬನಾರಸ್ ವಿಶ್ವವಿದ್ಯಾಲಯದ ಕುಲಪತಿ, ರಾಯಭಾರಿ, ಉತ್ತಮ ಸಂಸದೀಯ ಪಟುವಾಗಿದ್ದರು. ಇದಲ್ಲದೆ ಸ್ವತಂತ್ರ ಭಾರತದ ಪ್ರಥಮ ಉಪ ರಾಷ್ಟ್ರಪತಿಯಾಗಿ ಎರಡು ಅವಧಿಗೆ ಸೇವೆ ಸಲ್ಲಿಸಿದ್ದಾರೆ. ಹಾಗೆಯೇ ಭಾರತದ ಎರಡನೇ ರಾಷ್ಟ್ರಪತಿಯಾಗಿಯೂ ಸೇವೆ ಸಲ್ಲಿಸಿದ್ದಾರೆ.

ಶ್ರೀಯುತರು ಈ ದೇಶ ಕಂಡ ಉಜ್ವಲ ಪ್ರತಿಭೆ ಭರತ ಖಂಡದ ಶೈಕ್ಷಣಿಕ ಕ್ಷೇತ್ರದ ಬುದ್ಧಿವಂತಿಕೆ, ತತ್ವಜ್ಞಾನದ ಸಾಮರ್ಥ್ಯವನ್ನು ಜಗತ್ತಿಗೆ ಸಾರಿದ ಮಹನೀಯರು. ರಾಧಾಕೃಷ್ಣನ್ ಅವರು ಬಹುಮುಖಿ ಪ್ರತಿಭೆ ತಮ್ಮ ಸೇವೆಯನ್ನು ಶಿಕ್ಷಣ, ತತ್ವಜ್ಞಾನ, ಆಡಳಿತ ಮತ್ತು ರಾಜಕೀಯ ಕ್ಷೇತ್ರಕ್ಕೂ ವಿಸ್ತರಿಸಿದರು. ಆ ಮೂಲಕವಾಗಿ ಅವರು ಶಿಕ್ಷಕರಿಗೆ ಮಾರ್ಗದರ್ಶಕ ಮತ್ತು ಮಾದರಿಯಾಗಿದ್ದಾರೆ. ಬೋಧಕರು ತಮ್ಮನ್ನು ತಾವು ಕೇವಲ ಬೋಧನೆಗೆ ಮಾತ್ರ ಸೀಮಿತಗೊಳಿಸಿಕೊಳ್ಳದೆ ಸಮಾಜದ ವಿವಿಧ ರಂಗಗಳಿಗೂ ಸಮರ್ಪಿಸಿಕೊಳ್ಳಬೇಕು ಎಂಬುದನ್ನು ತೋರಿಸಿಕೊಟ್ಟಿದ್ದಾರೆ. ಸೆ. 5ನೇ ತಾರೀಖು ಶಿಕ್ಷಕರ ದಿನಾಚರಣೆಯಾಗಿ ಆಚರಣೆ ಮಾಡುವುದರ ಹಿಂದಿನ ಉದ್ದೇಶ ಏನು ಎಂಬುದನ್ನು ನೋಡುವುದಾದರೆ..

 • ಶಿಕ್ಷಕರು ನಾಡನ್ನು ಕಟ್ಟುವವರು, ನಿಜವಾಗಿಯೂ ರಾಷ್ಟ್ರ ನಿರ್ಮಾಣ ಮಾಡುವವರು ಶಿಕ್ಷಕರೇ ಎಂಬ ಸಂದೇಶವನ್ನು ಸಮಾಜಕ್ಕೆ ರವಾನೆ ಮಾಡುವುದು
 • ಗುರು ಎಲ್ಲವನ್ನೂ ಎಲ್ಲರನ್ನೂ ಮೀರಿದ ಮಾರ್ಗದರ್ಶನ ನೀಡುವ ಮೇರು ಪರ್ವತ.. ಗುರು ಎಂದರೆ ವ್ಯಕ್ತಿಯಲ್ಲ ವ್ಯಕ್ತಿತ್ವ, ಗುರು ಎಂದರೆ ಮೌಲ್ಯ ನಂಬಿಕೆ ಪರಂಪರೆ..

ಆದ್ದರಿಂದಲೇ ಗುರುವನ್ನು ಗುರು ಬ್ರಹ್ಮ ಗುರು ವಿಷ್ಣು ಗುರು ದೇವೋ ಮಹೇಶ್ವರ, ಗುರು ಸಾಕ್ಷಾತ್ ಪರಬ್ರಹ್ಮ ತಸ್ಮೈಶ್ರೀ ಗುರುವೇ ನಮಃ ಎಂದು ಬಣ್ಣಿಸಲಾಗುತ್ತಿದೆ.

ಗುರುಗಳನ್ನು ವಿದ್ಯಾರ್ಥಿಗಳು ಏಕೆ ಗೌರವಿಸಬೇಕು?

ಗುರು ಎಂದರೆ ಶಿಕ್ಷಕ. ಗುರು ಎಂದರೆ ಸತ್ಯ. ಗುರುಗಳು ಸದಾ ಸತ್ಯವನ್ನು ಹೇಳುತ್ತಾರೆ. ಗುರು ಶಿಕ್ಷಿಸುವವನಲ್ಲ, ಕ್ಷಮಿಸುವವನು. ಗುರು ತಪ್ಪು ಮಾಡುವವನಲ್ಲ, ತಪ್ಪನ್ನು ತಿದ್ದುವವ. ಗುರು ದಾರಿ ತಪ್ಪಿಸುವವನಲ್ಲ, ದಾರಿ ದೀಪ. ಗುರು ಎಂದರೆ ತಂದೆ-ತಾಯಿ ಬಂಧು ಬಳಗ ಮಾರ್ಗದರ್ಶಕ ಎಂಬ ಭಾವನೆಯಿಂದ ಮಕ್ಕಳು ಗೌರವಿಸುತ್ತಾರೆ. ಆದ್ದರಿಂದ ಯಾವುದೇ ಆತ್ಮ ವಂಚನೆ ಮಾಡದೆ ಕಾಯಾ-ವಾಚಾ-ಮನಸಾ ಮಕ್ಕಳಿಗೆ ಬೋಧನೆ ಮಾಡಿ ಗುರು ಜನ್ಮ ಸಾರ್ಥಕ ಮಾಡಿಕೊಂಡು ಈ ಹುದ್ದೆ ಪೂರ್ವಜನ್ಮದ ಪುಣ್ಯದ ಫಲವಾಗಿದೆ ಎಂದು ಭಾವಿಸಬೇಕಿದೆ.
ನಮ್ಮ ನಡುವಿನ ಗುರುಗಳೇ ನಮಗೆ ಏಕೆ ಮಾದರಿ
ಭಾರತ ಋಷಿ-ಮುನಿಗಳು, ಸಂತರು, ದಾರ್ಶನಿಕರು, ವಿಚಾರವಂತರು, ಮೇಧಾವಿಗಳ ನಾಡು.. ಇವರೆಲ್ಲರೂ ಸಮಾಜದ ಶಿಕ್ಷಕರಾಗಿದ್ದಾರೆ. ಅವರ ಆದರ್ಶ, ತ್ಯಾಗ, ನಿಸ್ವಾರ್ಥ ಪ್ರಾಮಾಣಿಕ ಸೇವೆ, ಸಾಮಾಜಿಕ ಕಾಳಜಿಗಳು ನಮಗೆ ಮಾದರಿಯಾಗಬೇಕು.

 •  ಶ್ರೇಷ್ಠ ಗುರು ಗೌತಮ ಬುದ್ಧನ ತ್ಯಾಗ ಮತ್ತು ನಿಸ್ವಾರ್ಥ ಗಳು ನಮಗೆ ಮಾದರಿಯಾಗಬೇಕು
 • ಅಣ್ಣ ಬಸವಣ್ಣನ ಕ್ರಾಂತಿಕಾರಿ ಪರಿವರ್ತನೆಯ ಹಾದಿ
 • ಡಾಕ್ಟರ್ ಬಿ. ಆರ್. ಅಂಬೇಡ್ಕರ್ ಅವರ ಮಹಾ ಮಾನವತೆ
 •  ಅರಿಸ್ಟಾಟಲ್ ರವರ ಸಕಲ ವಿಷಯಗಳ ಜ್ಞಾನ ಸಂಪಾದನೆ

ವ್ಯಾಸ, ವಾಲ್ಮೀಕಿ, ಏಸುಕ್ರಿಸ್ತ, ಪೈಗಂಬರ್ ಮತ್ತುಗುರುನಾನಕರ ವಿಚಾರಧಾರೆಗಳನ್ನು ಸಕಾರತ್ಮಕವಾಗಿ ಅಳವಡಿಸಿಕೊಂಡು ಉನ್ನತವಾದ ಗುರುಪರಂಪರೆಯನ್ನು ಸಮಕಾಲೀನ ಸಂದರ್ಭದಲ್ಲಿ ಸ್ಥಾಪಿಸಬೇಕಾದ ತುರ್ತು ಅನಿವಾರ್ಯತೆ ಶಿಕ್ಷಕರ ಮುಂದೆ ಇರುವ ದೊಡ್ಡ ಸವಾಲು.

ಶಿಕ್ಷಕರು ಎಂತಹ ಶಿಷ್ಯರನ್ನು ತಯಾರು ಮಾಡಬೇಕು?

ಶಿಕ್ಷಕ ತನ್ನ ಬೋಧನೆಯ ಮೂಲಕ ವಿದ್ಯಾರ್ಥಿಗಳನ್ನು ಪ್ರೇರೇಪಿಸಬೇಕು. ವಿದ್ಯಾರ್ಥಿಗಳ ಮನದಲ್ಲಿ ಪ್ರಶ್ನೆ ಮೂಡುವಂತೆ ಬೋಧಿಸಬೇಕು ಕೇವಲ ಕಾಟಾಚಾರಕ್ಕೆ ಪಠ್ಯಕ್ರಮ ಬೋಧಿಸಬಾರದು. ನನಗೆ ಬುದ್ಧನು ಹೇಳುವ ಮಾತು ನೆನಪಿಗೆ ಬರುತ್ತದೆ.

“ನಂಬದಿರು ಏನನ್ನು ಅದು ನಿನಗೆ ಹೇಳಲ್ಪಟ್ಟಿದೆ ಎಂಬ ಕಾರಣಕ್ಕಾಗಿ ನಂಬದಿರು ಏನನ್ನು ಅದು ಪರಂಪರೆ ಎಂಬ ಕಾರಣಕ್ಕಾಗಿ ನಂಬದಿರು ಏನನ್ನು ಗುರುವಿನ ಬಗೆಗಿನ ಗೌರವ ಎಂಬ ಕಾರಣಕ್ಕಾಗಿ ಬದಲಾಗಿ ಎಲ್ಲವನ್ನು ತೀಕ್ಷ್ಣ ಪರೀಕ್ಷೆಗೊಳಪಡಿಸು ವಿಮರ್ಶೆಗೊಳಪಡಿಸುವ ಯಾವುದು ಸತ್ಯವು ಅದನ್ನು ಮಾತ್ರ ನಂಬು” ಎಂದು ಬುದ್ಧ ಹೇಳುತ್ತಾನೆ.

ಅಂದರೆ ನಾವು ತಯಾರು ಮಾಡಬೇಕಾಗಿರುವುದು ಸಕಾರಾತ್ಮಕವಾದ ಆಲೋಚನೆಯನ್ನು ಹೊಂದುವ ವೈಜ್ಞಾನಿಕ ಮನೋಧರ್ಮದ ವಿದ್ಯಾರ್ಥಿಗಳನ್ನು

ಉನ್ನತ ಶಿಕ್ಷಣ ಯಾವ ದಾರಿಯಲ್ಲಿ ಸಾಗುತ್ತಿದೆ?

 • ಉನ್ನತ ಶಿಕ್ಷಣ ಕವಲು ದಾರಿಯಲ್ಲಿದೆ
 • ಉದ್ಯೋಗದ ಭದ್ರತೆ ಇಲ್ಲ
 • ವಿದ್ಯಾರ್ಥಿಗಳು ಮತ್ತು ಪೋಷಕರು ನಿರಾಶೆ ಮತ್ತು ಗೊಂದಲದಲ್ಲಿದ್ದಾರೆ
 • ಉನ್ನತ ಶಿಕ್ಷಣ ಎಂಬುದು ಕೇವಲ ಪದವಿಗಳನ್ನು ನೀಡುವ ಕೇಂದ್ರವಾಗುತ್ತಿದೆ
 • ಕೇವಲ ಜ್ಞಾನಕ್ಕಾಗಿ ಶಿಕ್ಷಣ ಪಡೆಯಲು ಸಾಧ್ಯವಿಲ್ಲ ಜ್ಞಾನದ ಜೊತೆಗೆ ಶಿಕ್ಷಣವು ಬದುಕನ್ನ ರೂಪಿಸಬೇಕು ಆದರೆ ಅದು ಸಾಧ್ಯವಾಗುತ್ತಿಲ್ಲ
 • ಉನ್ನತ ಶಿಕ್ಷಣದಲ್ಲಿ ಆಮೂಲಾಗ್ರ ಬದಲಾವಣೆಗಳು ಆಗುತ್ತಿಲ್ಲ

ಉನ್ನತ ಶಿಕ್ಷಣದಲ್ಲಿ ಆಗಲೇಬೇಕಾದ ಬದಲಾವಣೆಗಳು

 1. ವಿದ್ಯಾರ್ಥಿ ಸ್ನೇಹಿ ಉದ್ಯೋಗಾಧಾರಿತ ಭರವಸೆಯ ಪಠ್ಯಕ್ರಮ ರಚನೆ
 2.  ಕೌಶಲ್ಯಾಧಾರಿತ ಮತ್ತು ಅಂತರಶಿಸ್ತೀಯ ಪಠ್ಯಕ್ರಮ ರಚನೆ
 3.  ಸ್ವಾವಲಂಬನೆಯ ಧಾರಿತ ಪ್ರಾಯೋಗಿಕ ಮಹತ್ವದ ಪಠ್ಯಕ್ರಮ ಭೋಧನೆ
 4.  ಪಠ್ಯಕ್ರಮ ಕೇವಲ ಬೋಧನೆಗೆ ಸೀಮಿತವಾಗದೆ ಬದುಕನ್ನು ಅನಾವರಣಗೊಳಿಸುವ ಮಾರ್ಗವಾಗಬೇಕು
 5. ಸಾಂಪ್ರದಾಯಿಕ ಪಠ್ಯಕ್ರಮ ಬೋಧನಾ ಕ್ರಮಗಳಿಗೆ ಅಂತ್ಯ ಹಾಡಿ ಮಾಹಿತಿ ತಂತ್ರಜ್ಞಾನದ ಮೂಲಕ ಪಠ್ಯಕ್ರಮ ಬೋಧನೆ ಮಾಡಬೇಕಾದ ಅವಶ್ಯಕತೆ ಇದೆ
 6. ಸಮಾಜ ವಿ ಜ್ಞಾನಗಳು ಮತ್ತು ಮೂಲ ವಿಜ್ಞಾನಗಳು ಆಕರ್ಷಣೆ ಕಳೆದುಕೊಳ್ಳುತ್ತಿರುವುದಕ್ಕೆ ಸಕಾರಣಗಳನ್ನು ಹುಡುಕಿ ಸೂಕ್ತ ಪರಿಹಾರವನ್ನು ತಕ್ಷಣವೇ ಕಂಡುಹಿಡಿಯಬೇಕಾಗಿದೆ ಇದಕ್ಕೆ ನಮ್ಮ ಸರ್ಕಾರ ಈಗಾಗಲೇ ಕಾರ್ಯ ಪ್ರವೃತ್ತವಾಗಿದೆ

ನಾವೆಲ್ಲೂರು ಶಿಕ್ಷಕರ ದಿನಾಚರಣೆಯನ್ನು ಆಚರಿಸಿ ಹಾಗೆ ನಿಶ್ಚಲರಾಗಿ ಇರುವುದು ಸರಿಯಲ್ಲ, ಇದು ಕೇವಲ ಸಂಭ್ರಮವಾಗಬಾರದು. ಈ ಸಂಭ್ರಮ ಸಾರ್ಥಕವಾಗಬೇಕು ನಾವೆಲ್ಲರೂ ಸೇರಿ ಒಂದು ಪ್ರತಿಜ್ಞೆ ಮಾಡಬೇಕು ಅದೇನೆಂದರೆ ನಮ್ಮ ಕಾಲೇಜಿನ ಮಕ್ಕಳ ಭವಿಷ್ಯ ನಮ್ಮ ಮಕ್ಕಳ ಭವಿಷ್ಯ ವಿದ್ದಂತೆ, ಶಿಕ್ಷಣ ಇಲಾಖೆಯಲ್ಲಿನ ಕಾರ್ಯಕ್ರಮಗಳನ್ನ ಬಳಸಿಕೊಂಡು ಅವರ ಬದುಕನ್ನು ನಾವೆಲ್ಲರೂ ಸುಂದರ ಗೊಳಿಸುತ್ತೇವೆ ಆತ್ಮವಂಚನೆಯಿಲ್ಲದೆ ರಾಜ್ಯದ, ಸಮಾಜದ ಋಣವನ್ನು ತೀರಿಸುತ್ತೆವೆ ಎಂಬ ಪಣವನ್ನು ತೊಡಬೇಕಾಗಿದೆ.

-ಅಶೋಕ್ ಕುಮಾರ್, ಪ್ರಾಧ್ಯಾಪಕರು

ಸರ್ಕಾರಿ ಕಲಾ ಕಾಲೇಜು ಬೆಂಗಳೂರು

3 Comments

3 Comments

Leave a Reply

Your email address will not be published. Required fields are marked *

More in ಅಂಕಣ

Advertisement Enter ad code here
Advertisement

ದಾವಣಗೆರೆ

Advertisement

ಪ್ರಮುಖ ಸುದ್ದಿ

Advertisement
Advertisement e
Advertisement
To Top