ಡಿವಿಜಿಸುದ್ದಿ ಕಾಂ, ದಾವಣಗೆರೆ: ಚಿತ್ರದುರ್ಗ ಜಿಲ್ಲೆಯ ಸಿರಿಗೆರೆಯ ತರಳಬಾಳು ಬೃಹನ್ಮಠದ ಲಿಂಗೈಕ್ಯ ಶ್ರೀ ಶಿವಕುಮಾರ ಶಿವಾಚಾರ್ಯ ಸ್ವಾಮೀಜಿ ಅವರ ೨೭ ನೇ ಶ್ರದ್ದಾಂಜಲಿ ಕಾರ್ಯಕ್ರಮ ಸೆ. 24 ರಂದು ಸಿರಿಗೆರೆಯಲ್ಲಿ ನಡೆಯಲಿದೆ. ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಡಾ. ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಅವರು ವಹಿಸಿಕೊಳ್ಳಲಿದ್ದು, ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ.
ಮುಖ್ಯ ಅತಿಥಿಗಳಾಗಿ ಕೇಂದ್ರ ಸಚಿವರಾದ ಪ್ರಹ್ಲಾದ್ ಜೋಷಿ, ಸುರೇಶ್ ಸಿ. ಅಂಗಡಿ, ರಾಜ್ಯ ಸಚಿವರಾದ ಮಾಧುಸ್ವಾಮಿ, ಸಿ.ಸಿ. ಪಾಟೀಲ್, ಬಸವರಾಜ ಬೊಮ್ಮಾಯಿ, ಸಂಸದ ಜಿ.ಎಂ ಸಿದ್ದೇಶ್ವರ, ಶಾಸಕ ಶಾಮನೂರು ಶಿವಶಂಕರಪ್ಪ, ಸಚಿವ ಸಿ.ಟಿ ರವಿ, ಸಂಸದ ಬಿ.ವೈ. ರಾಘವೇಂದ್ರ, ಸಂಸದ ನಾರಾಯಣಸ್ವಾಮಿ, ಶಾಕರಾದ ಎಸ್.ಎ ರವೀಂದ್ರನಾಥ್, ತಿಪ್ಪಾರೆಡ್ಡಿ, ಮಾಡಾಳ್ ವಿರೂಪಾಕ್ಷಪ್ಪ, ಎಸ್.ವಿ ರಾಮಚಂದ್ರ, ಬೆಳ್ಳಿ ಪ್ರಕಾಶ್, ರುದ್ರೇಗೌಡ, ಎಂ.ಪಿ ರೇಣುಕಾಚಾರ್ಯ, ಎಂ.ಚಂದ್ರಪ್ಪ, ಡಿ.ಎಸ್. ಸತೀಶ್ ಸೇರಿದಂತೆ ಮಾಜಿ ಶಾಸಕರಾದ ವಡ್ನಾಳ್ ರಾಜಣ್ಣ, ಎಚ್. ಆಂಜನೇಯ, ಶಾಂತನಗೌಡ, ಎಚ್.ಪಿ. ರಾಜೇಶ್, ಬಿ.ಸಿ. ಪಾಟೀಲ್ ಭಾಗಿಯಾಗಲಿದ್ದಾರೆ.



