ಡಿವಿಜಿಸುದ್ದಿ.ಕಾಂ, ದಾವಣಗೆರೆ: ಇತ್ತೀಚೆಗೆ ಸುರಿದ ಭಾರೀ ಮಳೆಯ ಪ್ರವಾಹಕೆ ಸಿಲುಕಿ ಸಾವನ್ನಪ್ಪಿದ ಎಸ್.ಎಂ.ಕೃಷ್ಣ ನಗರದ ವಾಸಿ ಅಶೋಕ್ ಅವರ ಕುಟುಂಬಕ್ಕೆ ಶಾಸಕ ಶಾಮನೂರು ಶಿವಶಂಕರಪ್ಪ ೫ ಲಕ್ಷ ರೂಪಾಯಿ ಪರಿಹಾರ ನೀಡಿ ಸಾಂತ್ವನ ಹೇಳಿದರು.
ಅಶೋಕ ಕುಟುಂಬ ಸದಸ್ಯರನ್ನು ಮನೆಗೆ ಕರೆಸಿಕೊಂಡು ೫ ಲಕ್ಷದ ರೂಪಾಯಿ ಚಕ್ ವಿತರಿಸಿದರು. ಪರಿಹಾರದ ಹಣವನ್ನು ಮಕ್ಕಳ ವಿದ್ಯಾಭ್ಯಾಸಕ್ಕೆ ಬಳಸುವಂತೆ ಶಾಮನೂರು ಶಿವಶಂಕರಪ್ಪ ಸಲಹೆ ನೀಡಿದರು.

ಭಾರೀ ಮಳೆಯಿಂದ ನಗರಾದ್ಯಂತ ೨೦ಕ್ಕೂ ಹೆಚ್ಚು ಮನೆಗಳು ಬಿದ್ದಿದ್ದು, ಆರು ಮನೆಗಳು ಸಂಪೂರ್ಣ ಜಖಂಗೊಂಡಿದ್ದವು. ಇನ್ನುಳಿದಂತೆ ಸಣ್ಣಪುಟ್ಟ ಹಾನಿಯಾಗಿದ್ದ ಸಂಸ್ರಸ್ತರಿಗೆ ಸಹಾ ಪರಿಹಾರದ ಚಕ್ ನೀಡಲಾಯಿತು.

ಈ ಸಂದರ್ಭದಲ್ಲಿ ತಹಶೀಲ್ದಾರ್ ಜಿ.ಸಂತೋಷ್‌ಕುಮಾರ್, ಅಧಿಕಾರಿಗಳಾದ ರಾಜೇಶ್, ಸಂಜಯ್, ಕಾಂಗ್ರೆಸ್ ಯುವ ಮುಖಂಡ ಸಾಗರ್.ಎಲ್.ಹೆಚ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.
ಸುದ್ದಿ, ಜಾಹೀರಾತಿಗಾಗಿ ವಾಟ್ಸ್ ಅಪ್ ಮಾಡಿ: 9844460336, 7483892205



