Connect with us

Dvgsuddi Kannada | online news portal | Kannada news online

ಈ ಬಾರಿ ಮನೆಯಲ್ಲಿಯೇ  ವಿಶ್ವ ಯೋಗ ದಿನ ಆಚರಿಸಿ: ಆಯುಷ್ ಇಲಾಖೆ    

ಆರೋಗ್ಯ

ಈ ಬಾರಿ ಮನೆಯಲ್ಲಿಯೇ  ವಿಶ್ವ ಯೋಗ ದಿನ ಆಚರಿಸಿ: ಆಯುಷ್ ಇಲಾಖೆ    

ಡಿವಿಜಿ ಸುದ್ದಿ, ದಾವಣಗೆರೆ : ಜೂ.21 ರಂದು ಅಂತರಾಷ್ಟ್ರೀಯ ಯೋಗ ದಿನವಾಗಿದೆ. ಈ ಬಾರಿ ಕೋವಿಡ್-19 ಮಹಾಮಾರಿ ಕಾರಣದಿಂದ ಸಾಮಾಜಿಕ ಅಂತರ ಕಾಯ್ದುಕೊಳ್ಳುವ ದೃಷ್ಠಿಯಿಂದ ಈ ಸಾಲಿನಲ್ಲಿ ಮನೆಯಲ್ಲಿ ಯೋಗ  ಎಂಬ ಘೋಷ ವಾಕ್ಯದೊಂದಿಗೆ  ಕಾರ್ಯಕ್ರಮದಲ್ಲಿ ಭಾಗವಹಿಸಲು ಭಾರತ ಸರ್ಕಾರದ ಆಯುಷ್ ಮಂತ್ರಾಲಯವು ಸೂಚಿಸಿರುತ್ತದೆ.

ಕೋವಿಡ್-19 ಮುಂಜಾಗ್ರತಾ ಕ್ರಮವಾಗಿ ಗೈಡ್‍ಲೈನ್ಸ್ ಫಾರ್ ನ್ಯಾಚುರೋಪತಿ ಪ್ರಾಕ್ಟಿಷ್‍ನರ್ಸ್ ಫಾರ್ ಕೋವಿಡ್-19 ಸೂಚಿಯಲ್ಲಿ “ ಸ್ಟ್ರೆಸ್ ಅಂಡ್ ಆಂಗ್ಸೈಟಿ ಡಿಪ್ರೆಷನ್ ನಿವಾರಣೆಗಾಗಿ ಯೋಗ ಥೆರಫಿ ಮಾಡಲ್‍ಗಳನ್ನು ಅನುಸರಿಸಲು ಆಯುಷ್ ಮಂತ್ರಾಲಯವು ಸೂಚಿಸಿರುವ ಹಿನ್ನೆಲೆಯಲ್ಲಿ ಜಿಲ್ಲೆಯ ಎಲ್ಲಾ ಯೋಗಾಸಕ್ತರು, ಯೋಗ ಒಕ್ಕೂಟ, ಸಂಘ ಸಂಸ್ಥೆಗಳು ಸಾರ್ವಜನಿಕರ ಗಮನಕ್ಕೆ ಈ ವಿಷಯವನ್ನು ತರಲಾಗಿದೆ.  ಮನೆಯಿಂದಲೇ ಯೋಗ ಕಾರ್ಯಕ್ರಮದಲ್ಲಿ ಭಾಗವಹಿಸಿ ಈ ಕಾರ್ಯಕ್ರಮವನ್ನು ಆಚರಿಸಲು ಮತ್ತು ಯಶಸ್ವಿಗೊಳಿಸಲು ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಆಯುಷ್ ಇಲಾಖೆ, ಜಿಲ್ಲಾ ಯೋಗ ಒಕ್ಕೂಟ ದಾವಣಗೆರೆ ಹಾಗೂ ಇನ್ನಿತರೆ ಯೋಗಸಕ್ತ ಸಂಘ ಸಂಸ್ಥೆಗಳ ಪರವಾಗಿ ಸಾರ್ವಜನಿಕರಲ್ಲಿ ಕೇಳಿಕೊಳ್ಳಲಾಗುವುದೆಂದು ಜಿಲ್ಲಾ ಆಯುಷ್ ಕಚೇರಿ ತಿಳಿಸಿದೆ.

Dvgsuddi.com is a live Kannada news portal. Kannada news online. political, information, crime, film, Sports News in Kannada

Click to comment

Leave a Reply

Your email address will not be published. Required fields are marked *

More in ಆರೋಗ್ಯ

To Top