ಡಿವಿಜಿಸುದ್ದಿ.ಕಾಂ,ದಾವಣಗೆರೆ : ಯಡಿಯೂರಪ್ಪ ವಿರುದ್ಧ ಈ ಹಿಂದೆ ಬಹುದೊಡ್ಡ ರಾಜಕೀಯ ಷಡ್ಯಂತರಗಳು ನಡೆದಿದ್ದವು. ಅವರ ವಿರುದ್ಧ ನಡೆದಷ್ಟು ರಾಜಕೀಯ ಪಿತೂರಿ ಇನ್ನೊಬ್ಬ ರಾಜಕಾರಣಿ ವಿರುದ್ಧ ನಡೆದಿಲ್ಲ ಎಂದು ಬಿಜೆಪಿ ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿ ಬಿ.ವೈ ವಿಜಯೇಂದ್ರ ಹೇಳಿದರು.
ದಾವಣಗೆರೆ ಶರನ್ನವರಾತ್ರಿ ದಸರಾ ಧರ್ಮ ಸಮ್ಮೇಳನ ದಲ್ಲಿ ಮಾತನಾಡಿದ ಅವರು, ಯಡಿಯೂರಪ್ಪನವರ ವಿರುದ್ಧ ಈ ಹಿಂದೆ ಬಹುದೊಡ್ಡ ರಾಜಕೀಯ ಷಡ್ಯಂತ್ರಗಳು ನಡೆದಿವೆ. ಯಡಿಯೂರಪ್ಪ ಜನಮೆಚ್ವಿದ ಜನನಾಯಕ. ಆ ಕಾರಣಕ್ಕಾಗಿ ಎಲ್ಲರು ಯಡಿಯೂರಪ್ಪನವರನ್ನು ಇಷ್ಟಪಡುತ್ತಾರೆ. ಯಡಿಯೂರಪ್ಪ ಹುಟ್ಟು ಹೋರಾಟಗಾರರು ಎಲ್ಲವನ್ನುಎದುರಿಸಿ, ಚಿರಯುವಕನಂತೆ ಉತ್ಸಾಹದಿಂದ ರಾಜ್ಯ ಕೆಲಸ ಮಾಡುತ್ತಿದ್ದಾರೆ ಎಂದರು.
ಯಡಿಯೂರಪ್ಪನವರ ಬೆನ್ನಿಗೆ ಸ್ವಾಮೀಜಿಗಳು ಇದ್ದಾರೆ. ಸ್ವಾಮೀಜಿಗಳು ಯಡಿಯೂರಪ್ಪನವರ ಹಿಂದೆ ಸದಾ ಕಾಲ ಇದ್ದಾರೆ. ನಾನು ವರುಣಾ ಕ್ಷೇತ್ರದಲ್ಲಿ ಸ್ಪರ್ಧಿಸಿ ಶಾಸಕನಾಗಬಹುದಿತ್ತು.ಯಡಿಯೂರಪ್ಪನವರ ಮಗನಾಗಿ ಶಾಸಕನಾಗುವುದಕ್ಕಿಂತ ರಾಜ್ಯದ ತುಂಬೆಲ್ಲಾ ಓಡಾಡಿ ಪಕ್ಷ ಕಟ್ಟುವ ಜವಾಬ್ದಾರಿ ಸಿಕ್ಕಿರುವುದು ಪೂರ್ವಜನ್ಮದ ಪುಣ್ಯ ಎಂದರು.



