ಡಿವಿಜಿಸುದ್ದಿ.ಕಾಂ, ದಾವಣಗೆರೆ: ನಗರದ ಪಿ.ಜೆ ಬಡಾವಣೆಯಲ್ಲಿ ಸಾರ್ವನಿಕರು ಹಾಗೂ ಎಲ್ಲಾ ಸಮುದಾಯದ ಸಹಕಾರದೊಂದಿಗೆ ಅ.13 ರಂದು ಬೆಳಗ್ಗೆ 10.30ಕ್ಕೆ ಶ್ರೀ ಆದಿಕವಿ ಮಹರ್ಷಿ ವಾಲ್ಮೀಕಿ ಜಯಂತಿ ಆಚರಿಸಲಾಗುವುದು ಎಂದು ಪ್ರವೀಣ್ ದೇವರಮನೆ ಹೇಳಿದರು.
ಈ ಬಗ್ಗೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಾರ್ವನಿಕರು ಹಾಗೂ ಎಲ್ಲಾ ಸಮುದಾಯದ ಬಾಂಧವರು ಒಟ್ಟಾಗಿ ಅ.13 ರಂದು ವಾಲ್ಮೀಕಿ ಜಯಂತಿ ಆಚರಿಸಲಿದ್ದೇವೆ. ಕಾರ್ಯಕ್ರಮಕ್ಕೆ ಸಂಸದ ಜಿ.ಎಂ ಸಿದ್ದೇಶ್ವರ್, ಶಾಸಕರಾದ ಶಾಮನೂರು ಶಿವಶಂಕರಪ್ಪ, ಎಸ್. ರವೀಂದ್ರನಾಥ್, ರೇಣುಕಾಚಾರ್ಯ, ನಾಯಕ ಸಮಾಜದ ಮುಖಂಡರಾದ ಶ್ರೀನಿವಾಸ ದಾಸಕರಿಯಪ್ಪ,ಬಿ.ಜೆ ಅಜಯ್ ಕುಮಾರ್, ಎಸ್ ಹಾಲೇಶಪ್ಪ,ಹೆಚ್.ಬಿ ಗೋಣೆಪ್ಪ,ದಿನೇಶ್ ಕೆ ಶೆಟ್ಟಿ ಆಗಮಿಸಲಿದ್ದಾರೆ ಎಂದರು.
ಸುದ್ದಿಗೋಷ್ಠಿಯಲ್ಲಿ ಶಾಮನೂರು ಪ್ರವೀಣ್, ಸನ್ನಿ ಜೈನ್, ರಾಜು ಅಳುಗೋಡಿ,ಶಶಿಕುಮಾರ್, ವಿರಾಟ್ ವತ್ಸಲ್, ಸಾಗರ್, ಚಂದನ್, ಫಣಿಯಾಪುರ ಲಿಂಗರಾಜ್, ಶಿವರಾಜ್ ಇದ್ದರು.



