ಡಿವಿಜಿ ಸುದ್ದಿ, ಹರಪನಹಳ್ಳಿ: ತಾಲ್ಲೂಕಿನ ಉಚ್ಚoಗಿದುರ್ಗ ಹಾಗೂ ಸುತ್ತಮುತ್ತಲಿನ ಗ್ರಾಮಗಳಿಗೆ ಹರಿಹರ ಪಂಚಮಸಾಲಿ ಮಠದ ಶ್ರೀ ವಚನಾನoದ ಸ್ವಾಮೀಜಿ ಡಿ. 15 ರಂದು ಭಾನುವಾರ ಭೇಟಿ ನೀಡಲಿದ್ದಾರೆ.
ಇದನ್ನು ಓದಿ: ಹರ ಜಾತ್ರಾ ಮಹೋತ್ಸವ, ಬೆಳ್ಳಿ ಬೆಡಗು ಕಾರ್ಯಕ್ರಮಕ್ಕೆ ಪ್ರಧಾನಿ ಮೋದಿಗೆ ಆಹ್ವಾನ
ಹರಿಹರದಲ್ಲಿ ಜನವರಿ 14,15 ರಂದು ನಡೆಯುವ ಹರ ಜಾತ್ರೆ ಹಾಗೂ ಬೆಳ್ಳಿ ಬೆಡಗು ಕಾರ್ಯಕ್ರಮ ಆಯೋಜನೆ ಹಿನ್ನೆಲೆ ಹರಪನಹಳ್ಳಿ ತಾಲ್ಲೂಕಿನ ಎಲ್ಲಾ ಗ್ರಾಮಗಳ ದರ್ಶನ ಮಾಡುತ್ತಿದ್ದು, ಭಕ್ತಾಧಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗಿಯಾಗಿ ಕಾರ್ಯಕ್ರಮ ಯಶಸ್ವಿ ಮಾಡಬೇಕು ಎಂದು ಕೋರಲಿದ್ದಾರೆ.
ಉಚ್ಚoಗಿದುರ್ಗ ಸುತ್ತ ಮುತ್ತಲಿನ ಗ್ರಾಮಗದ ಎಲ್ಲಾ ಸಮಾಜದ ಬಂಧುಗಳು, ಗ್ರಾಮ ಪಂಚಾಯಿತಿ ಅಧ್ಯಕ್ಷರೂ, ಸರ್ವ ಸದಸ್ಯರು, ಸಂಘ ಸಂಸ್ಥೆಗಳು ಆಗಮಿಸಬೇಕು ಎಂದು ಶ್ರೀ ವೀರಶೈವ ಲಿಂಗಾಯತ ಪಂಚಮಸಾಲಿ ಸಮಾಜದ ಮುಖಂಡರಾದ ರಾಜನಗೌಡ್ರು ತಿಳಿಸಿದ್ದಾರೆ.
ಇದನ್ನು ಓದಿ : ಲಿಂಗಾಯತ ಒಳಪಂಗಡ ಒಂದಾಗಲಿ: ವಚನಾನಂದ ಸ್ವಾಮೀಜಿ



