ಡಿವಿಜಿ ಸುದ್ದಿ, ಸಿರಿಗೆರೆ: ಜನಸಾಮಾನ್ಯರು ಮತ್ತು ವಿದ್ವಾಂಸರೆಲ್ಲರ ಮನಸ್ಸನ್ನು ಗೆದ್ದ ಕೆ.ಎಸ್ ನಿಸಾರ್ ಅಹಮದ್ ಕನ್ನಡ ನಾಡು ಕಂಡ ಶ್ರೇಷ್ಠ ಸಾಹಿತಿಳಾಗಿದ್ದರು. ಅವರ ನಿಧನದಿಂದ ಕನ್ನಡ ಸಾಹಿತ್ಯ ವಲಯಕ್ಕೆ ತುಂಬಲಾರದ ನಷ್ಟವಾಗಿದೆ ಎಂದು ಶ್ರೀ ತರಳಬಾಳು ಜಗದ್ಗುರು ಡಾ.ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿಯವರು ತೀವ್ರ ಸಂತಾಪವನ್ನು ಸೂಚಿಸಿದ್ದಾರೆ.

ನಮ್ಮ ಬೃಹನ್ಮಠದೊಡನೆ ಅವರ ಸಂಪರ್ಕ ಅತ್ಯಂತ ನಿಕಟವಾಗಿತ್ತು. 1979ರಲ್ಲಿ ನಡೆದ ನಮ್ಮ ಪಟ್ಟಾಭಿಷೇಕದಿಂದ ಮೊದಲುಗೊಂಡು ಬೃಹನ್ಮಠದ ತರಳಬಾಳು ಹುಣ್ಣಿಮೆ ಕಾರ್ಯಕ್ರಮಗಳು ಹಾಗೂ ಬೆಂಗಳೂರು ತರಳಬಾಳು ಕೇಂದ್ರದ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಅವರು ಭಾಗವಹಿಸಿದ್ದರು. 1991 ರಲ್ಲಿ ಬೃಹನ್ಮಠವು ಅವರ ಸಮಗ್ರ ಕವಿತೆಗಳ ಸಂಕಲನವನ್ನು ಪ್ರಕಟಿಸಲು ಅವರು ಅವಕಾಶ ಮಾಡಿಕೊಟ್ಟಿದ್ದರು ಎಂದು ಅವರು ತಮ್ಮ ಸಂದೇಶದಲ್ಲಿ ಸ್ಮರಿಸಿದ್ದಾರೆ.



