ಡಿವಿಜಿ ಸುದ್ದಿ, ಹಳೇಬೀಡು: ಸಿರಿಗೆರೆಯ ತರಳಬಾಳ ಬೃಹನ್ಮಠದ ಹುಣ್ಣಿಮೆ ಮಹೋತ್ಸವದ ಸಮಾರೋಪ ಸಮಾರಂಭದಲ್ಲಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಭಾಗವಹಿಸಲಿದ್ದಾರೆ. ಇಂದು ಸಂಜೆ 6.30ರಿಂದ ನಡೆಯಲಿರುವ ಕಾರ್ಯಕ್ರಮದಲ್ಲಿ ತರಳಬಾಳು ಬೃಹನ್ಮಠದ ಶ್ರೀ ಶಿವಮೂರ್ತಿ ಶಿವಚಾರ್ಯ ಸ್ವಾಮೀಜಿ ಅವರು ದಿವ್ಯ ಸಾನಿಧ್ಯ ವಹಿಸಲಿದ್ದಾರೆ.

ಕಾರ್ಯಕ್ರಮ ಮುಖ್ಯ ಅತಿಥಿಗಳಾಗಿ ಕೇಂದ್ರ ಸಚಿವ ಸದಾನಂದಗೌಡ, ರಾಜ್ಯ ಗೃಹ ಸಚಿವ ಬಸವರಾಜ್ ಬೊಮ್ಮಾಯಿ, ಮಾಜಿ ಸಚಿವ ಶಾಮನೂರು ಶಿವಶಂಕರಪ್ಪ, ಸಂಸದ ಜಿ.ಎಂ. ಸಿದ್ಧೇಶ್ವರ್ ,ಶಾಸಕ ಎಸ್. ಎ. ರವೀಂದ್ರನಾಥ್, ಸಚಿವ ಬಿ.ಸಿ. ಪಾಟೀಲ್ ಭಾಗಮಿಸಲಿದ್ದಾರೆ. ವಿಶೇಷ ಉಪನ್ಯಾಸದಲ್ಲಿ ‘ಪ್ರಜಾಪ್ರಭುತ್ವದ ಸುಧಾರಣೆಗೆ ಶರಣರ ಚಿಂತನೆಗಳು’ ವಿಷಯದ ಕುರಿತು ಚಿತ್ರಕಲಾ ಪರಿಷತ್ತು ಅಧ್ಯಕ್ಷ ಬಿ.ಎಲ್. ಶಂಕರ್ ಹಾಗೂ ‘ನಡವಳಿಕೆ-ತಿಳಿವಳಿಕೆ’ ಕುರಿತು ಖ್ಯಾತ ವಾಗ್ಮಿ ಪ್ರೊ. ಎಂ. ಕೃಷ್ಣಪ್ಪ ಮಾತನಾಡಲಿದ್ದಾರೆ.
ವಿಶೇಷ ಆಹ್ವಾನಿತರರಾಗಿ ಶಾಸಕರಾದ ಮಾಡಾಳು ವಿರೂಪಾಕ್ಷಪ್ಪ, ಬೆಳ್ಳಿಪ್ರಕಾಶ್, ಡಿ.ಕೆ. ಸುರೇಶ್, ಎಸ್.ವಿ. ರಾಮಚಂದ್ರಪ್ಪ, ಎಂ. ಚಂದ್ರಪ್ಪ, ರುದ್ರೇಗೌಡ, ಮಾಜಿ ಶಾಸಕ ಬಿ.ಕೆ. ಮಲ್ಲಿಕಾರ್ಜುನ್ , ಎಚ್. ಪಿ. ರಾಜೇಶ್ ಭಾಗವಹಿಸಲಿದ್ದಾರೆ.

ಕಳೆದ 8 ದಿನದಿಂದ ನಡೆಯುತ್ತಿರುವ ತರಳಬಾಳು ಹುಣ್ಣಿಮೆ ಮಹೋತ್ಸವ ಅತ್ಯಂತ ಯಶಸ್ವಿಯಾಗಿ ನಡೆದಿದ್ದು, ಇಂದು ನಡೆಯಲಿರುವ ಸಮಾರೋಪ ಸಮಾರಂಭವವೂ ವಿಜೃಂಭಣೆಯಿಂದ ನಡೆಯುತ್ತಿದೆ. ಬೆಳಗ್ಗೆ 7.30 ರಿಂದ 8.30 ವರೆಗೆ ನಗರದ ವಿವಿಧ ಶಾಲಾ ಕಾಲೇಜು ವಿದ್ಯಾರ್ಥಿಗಳಿಂದ ಪ್ರಭಾತ್ ಫೇರಿ ಆಯೋಜಿಸಿಲಾಗಿತ್ತು. ಇದಾದನಂತರ ಜಿಲ್ಲಾಧಿಕಾರಿ ಆರ್ ಗೀರೀಶ್ ಧ್ವಜರೋಹಣ ನೆರವೇರಿಸಿದರು. ಇದಾದನಂತರ ದಾವಣಗೆರೆಯ ಅನುಭವಮಂಟಪ ಶಾಲಾ ವಿದ್ಯಾರ್ಥಿಗಳಿಂದ ವಿಶೇಷ ಕವಾಯತು ನಡೆಯಿತು. ಇದಾದ ಬಳಿಕ ತರಳಬಾಳು ಹುಣ್ಣಿಮೆಯ ಕ್ರೀಡಾಮೇಳ ಸ್ಪರ್ಧೆ ನಡೆಯಿತು. ಮಧ್ಯಾಹ್ನ 2.30 ರಿಂದ 5.30 ವರೆಗೆ ವಿಶೇಷ ವಾಹನದಲ್ಲಿ ತರಳಬಾಳು ಶ್ರೀ ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಅವರ ಅಡ್ಡ ಪಲ್ಲಕ್ಕಿ ಉತ್ಸವ ನಡೆಯಲಿದೆ. ಈ ಮೆರವಣಿಗೆಯಲ್ಲಿ ವಿವಿಧ ಕಲಾ ತಂಡಗಳು ಕಲಾ ಪ್ರದರ್ಶನ ನೀಡಲಿದ್ದಾರೆ.




