ಡಿವಿಜಿ ಸುದ್ದಿ, ಹಳೇಬೀಡು: ತರಳಬಾಳು ಹುಣ್ಣಿಮೆ ಮಹೋತ್ಸವದ 6ನೇ ದಿನವಾದ ಇಂದಿನ ಕಾರ್ಯಕ್ರಮದಲ್ಲಿ ಖ್ಯಾತ ಚಿಂತಕ ಡಾ. ಗುರುರಾಜ ಕರ್ಜಗಿ ಭಾಗವಹಿಸಲಿದ್ದಾರೆ.

ಸಂಜೆ 6.30 ಕ್ಕೆ ಕಾರ್ಯಕ್ರಮ ಪ್ರಾರಂಭವಾಗಲಿದ್ದು, ಸಿರಿಗೆರೆಯ ತರಳಬಾಳು ಬೃಹ್ಮಠದ ಶ್ರೀ ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ದಿವ್ಯ ಸಾನಿಧ್ಯ ವಹಿಸಲಿದ್ದಾರೆ . ಶಿವಮೊಗ್ಗದ ಮುರುಘರಾಜೇಂದ್ರ ಸ್ವಾಮೀಜಿ, ಮೌಲಾನ್ ಮಹಮದ್ ಅನ್ವರ್ ಅಸಾದಿ ಆರ್ಶೀವಚನ ನೀಡಲಿದ್ದಾರೆ. ಮುಖ್ಯ ಅತಿಥಿಗಳಾಗಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಬಿ. ಶ್ರೀರಾಮುಲು, ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಜೆ.ಸಿ. ಮಾಧುಸ್ವಾಮಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಶಶಿಕಲಾ ಜೊಲ್ಲೆ, ಕರ್ನಾಟಕ ನೀರಾವರಿ ನಿಗಮದ ವ್ಯವಸ್ಥಾಪಕ ನಿರ್ದೇಶಕ ಮಲ್ಲಿಕಾರ್ಜುನ ಗುಂಗೆ ಭಾಗವಹಿಸಲಿದ್ದಾರೆ.
ಉಪನ್ಯಾಸ ಕಾರ್ಯಕ್ರಮದಲ್ಲಿ ‘ಬದುಕಿನಲ್ಲಿ ಸಂತೋಷ’ ಕುರಿತು ಖ್ಯಾತ ಚಿಂತಕ ಡಾ. ಗುರುರಾಜ ಕರ್ಜಗಿ, ‘ಭಾವೈಕ್ಯತೆ ಮತ್ತು ಶಿಶುನಾಳ ಷರೀಫರು’ ಕುರಿತು ದೂರದರ್ಶನ ನಿವೃತ್ತ ನಿರ್ದೇಶಕ ಮಹೇಶ್ ಜೋಶಿ, ‘ಶರಣ ಸಾಹಿತ್ಯದಲ್ಲಿ ಕೇಷಿ ಸಂವೇದನೆ’ ಕುರಿತು ಚಿಂತಕ ಮಹೇಶ್ ಚಟ್ನಳ್ಳಿ, ‘ಭಾರತದ ಅಂತಃಶಕ್ತಿ’ ಕುರಿತು ರಾಜ್ಯ ಬಿಜೆಪಿ ಸಂಘಟನಾ ಕಾರ್ಯದರ್ಶಿ ಅರುಣ ಕುಮಾರ್ ಮಾತನಾಡಲಿದ್ದಾರೆ.



