ಚೆನ್ನೈ: ಪ್ರಧಾನಿ ನರೇಂದ್ರ ಮೋದಿಗೆ ಕಾರ್ಯವನ್ನು ಮೆಚ್ಚಿರೈತನೋರ್ವ ತನ್ನ ಸ್ವಂತ ಜಮೀನಿನಲ್ಲಿ ಮೋದಿ ಅವರ ಗುಡಿ ಕಟ್ಟಿದ್ದಾನೆ.
ನರೇಂದ್ರ ಮೋದಿ ಅವರ ಮೂರ್ತಿಯ ಜತೆಗೆ ತಮಿಳುನಾಡು ಮಾಜಿ ಮುಖ್ಯಮಂತ್ರಿ ಜೆ.ಜಯಲಲಿತಾ, ಮುಖ್ಯಮಂತ್ರಿ ಪಳನಿಸ್ವಾಮಿ ಹಾಗೂ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಫೋಟೊಗಳಿದ್ದು ನಿತ್ಯ ಪೂಜೆ ಮಾಡುತ್ತಿದ್ದಾನೆ.

ತಮಿಳುನಾಡಿನ ತಿರುಚಿರಪಳ್ಳಿಯಿಂದ 63 ಕಿ.ಮೀ. ದೂರದಲ್ಲಿರುವ ಎರಕುಡಿ ಗ್ರಾಮದಲ್ಲಿ 50 ವರ್ಷ ವಯಸ್ಸಿನ ರೈತ ಪಿ.ಶಂಕರ್ ಜಮೀನಿನಲ್ಲಿ ಗುಡಿ ಕಟ್ಟಿದ ರೈತ. ಕಳೆದ ವಾರ ಗುಡಿ ಆರಂಭಿಸಿದ್ದು, ನರೇಂದ್ರ ಮೋದಿ ಮೂರ್ತಿಗೆ ಆರತಿ ನಡೆಯಲಿದೆ.
ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿಯಂತಹ ಕಲ್ಯಾಣ ಯೋಜನೆಗಳ ಲಾಭ ಪಡೆದಿದ್ದು, ಪ್ರಧಾನಿ ಮೋದಿ ಅವರ ಕಾರ್ಯ ಮತ್ತು ಯೋಜನೆಗಳಿಂದ ಪ್ರಭಾವಿತನಾಗಿದ್ದೇನೆ ಎಂದು ಶಂಕರ್ ಹೇಳಿದ್ದಾನೆ. 8 x 8 ಅಡಿ ಅಳತೆಯ ಗುಡಿ ನಿರ್ಮಾಣಕ್ಕೆ ₹ 1.2 ಲಕ್ಷ ಖರ್ಚು ಮಾಡಿದ್ದಾನೆ.



