ಡಿವಿಜಿ ಸುದ್ದಿ, ದಾವಣಗೆರೆ : ಆನ್‌ಲೈನ್ ಶಿಕ್ಷಣಕ್ಕೆ ವಿದ್ಯಾರ್ಥಿಗಳಿಗೆ ಅಗತ್ಯವಾಗಿರುವ ಲ್ಯಾಪ್‌ಟಾಪ್ ಖರೀದಿಸಲು ಸುಕೋ ಬ್ಯಾಂಕ್ `ಸುಕೋವಿದ್ಯಾ-ಸೇತು’ ಸಾಲ ಯೋಜನೆಯನ್ನು ಜಾರಿ ಮಾಡಿದೆ.
`ಸುಕೋ ವಿದ್ಯಾ-ಸೇತು’ ಸಾಲ ಯೋಜನೆಯಲ್ಲಿ ಶೇ. 14ರ ಬಡ್ಡಿದರದಲ್ಲಿ ಲ್ಯಾಪ್ ಟಾಪ್ ಖರೀದಿ ಮೊತ್ತದ ಶೇ. 100 ರಷ್ಟು ಹಣವನ್ನು ಬ್ಯಾಂಕ್ ಸಾಲವಾಗಿ ನೀಡುತ್ತದೆ. `ಸುಕೋ ವಿದ್ಯಾ-ಸೇತು’ ಸಾಲ ಯೋಜನೆ ವಿದ್ಯಾರ್ಥಿಗಳ ಸ್ನೇಹಿಯಾಗಿದ್ದು, ಆನ್‌ಲೈನ್ ಕಲಿಕೆಗೆ ಪೂರಕ ಯೋಜನೆಯಾಗಿದೆ.
ಗ್ರಾಹಕರ ಆರ್ಥಿಕ ವ್ಯವಸ್ಥೆಗೆ ಅನುಕೂಲವಾಗಿ ಪ್ರತಿದಿನ, ವಾರಕ್ಕೊಮ್ಮೆ ಮತ್ತು ತಿಂಗಳಿಗೊಮ್ಮೆ ಹಣ ಮರುಪಾವತಿಸುವ ಸುಲಭ ಕಂತುಗಳನ್ನು ಹೊಂದಿರುವ ಯೋಜನೆಗೆ ಇದಾಗಿದೆ. ಕನಿಷ್ಠ ಆರು ತಿಂಗಳಿಂದ ಎರೆಡು ವರ್ಷಗಳ ಅವಧಿಯವರೆಗೆ ಸಾಲದ ಹಣ ಮರು ಪಾವತಿ ಮಾಡುವ ಸೌಲಭ್ಯವನ್ನು ಈ ಯೋಜನೆ ಹೊಂದಿದೆ.
ವಿದ್ಯಾರ್ಥಿಗಳು ಈ ಯೋಜನೆಯ ಸದುಪಯೋಗ ಪಡೆದುಕೊಳ್ಳಬೇಕು. ಈ ಯೋಜನೆ ಅಡಿ ಲ್ಯಾಪಟಾಪ್ ಖರೀದಿಸುವ ವಿದ್ಯಾರ್ಥಿಗೆ ಮೈಕ್ ಸಮೇತ ಹೆಡ್ ಫೋನ್ ನೀಡಲಾಗುತ್ತದೆ ಎಂದು ಅವರು ತಿಳಿಸಿದ್ದಾರೆ. ವಿವರಗಳಿಗಾಗಿ ಸಮೀಪದ ಸುಕೋ ಶಾಖೆಗೆ ಭೇಟಿ ನೀಡಿಅಥವಾ 8722229099, 9743179561,08192233440 ಗೆ ಕರೆ ಮಾಡಬಹುದು.