Connect with us

Dvg Suddi-Kannada News

ಶ್ರೀ ಮಂಜುನಾಥಸ್ವಾಮಿ ಅನುಗ್ರಹದಿಂದ ಮಂಗಳವಾರದ ರಾಶಿ ಭವಿಷ್ಯ ನೋಡಿ…

ಜ್ಯೋತಿಷ್ಯ

ಶ್ರೀ ಮಂಜುನಾಥಸ್ವಾಮಿ ಅನುಗ್ರಹದಿಂದ ಮಂಗಳವಾರದ ರಾಶಿ ಭವಿಷ್ಯ ನೋಡಿ…

ಇಂದು ಶುಭ ಮಂಗಳವಾರ ರಾಶಿ ಭವಿಷ್ಯ” ಶ್ರೀಶ್ರೀಶ್ರೀ ಧರ್ಮಸ್ಥಳ ಮಂಜುನಾಥ ಸ್ವಾಮಿ” ಮತ್ತು ಶ್ರೀ ಶ್ರೀ ಶ್ರೀ “ಚಾಮುಂಡೇಶ್ವರಿ” ಪ್ರಾರ್ಥನೆ ಮಾಡುತ್ತಾ, ಆ ತಾಯಿಯ  ಅನುಗ್ರಹದಿಂದ ಹಾಗೂ “ಚೌಡೇಶ್ವರಿ ದೇವಿ” ಮಹೋನ್ನತ ಬಲಿಷ್ಠ ಪೂಜಾ ಶಕ್ತಿಗಳಿಂದ ನಿಮ್ಮ ಸಮಸ್ಯೆಗಳು ಏನೇ ಇರಲಿ, ಎಷ್ಟೇ ಕಠಿಣವಾಗಿರಲಿ ಪರಿಹಾರ ಮತ್ತು ಮಾರ್ಗದರ್ಶನ ಸೂಚಿಸುವರು. ತಮ್ಮ ಸಮಸ್ಯೆಗಳಾದ ವಿದ್ಯೆ, ಉದ್ಯೋಗ, ವಿದೇಶ ಪ್ರವಾಸ, ಆರೋಗ್ಯ, ಸಂತಾನ, ದಾಂಪತ್ಯ, ಮದುವೆ ,ಹಣಕಾಸು ,ಪ್ರೇಮ ವಿಚಾರ , ಇನ್ನಿತರ ಗುಪ್ತ ಕಠಿಣ ಸಮಸ್ಯೆಗಳಿಗೆ ಮುಖ್ಯಪ್ರಾಣದೇವರ ಕೃಪಾಕಟಾಕ್ಷದಿಂದ ಪರಿಹಾರ ಶತಸಿದ್ಧ. ಪಂಡಿತ್ ಸೋಮಶೇಖರ್B.Sc, Mob.No: 9353488403 ನಿಮ್ಮ ಭವ್ಯ ಭವಿಷ್ಯದ ಕನಸು ನನಸಾಗಲು ಇಂದೇ ಕರೆ ಮಾಡಿ.

“ಮೇಷ ರಾಶಿ” ಅಶ್ವಿನಿ,ಭರಣಿ  ಮತ್ತು ಕೃತಿಕಾ1ನೇ ಚರಣ. ಸೊಸೆಯ ನಡವಳಿಕೆಯ ಬಗ್ಗೆ ಮನಸ್ತಾಪ.  ಅತ್ತೆ-ಸೊಸೆ ಸದಾ ಕಿರಿಕಿರಿಯಾಗುವುದು. ನೀರಾವರಿ ಆಧಾರಿಸಿದ ಬೆಳೆಗಾರರಿಗೆ ಹೆಚ್ಚಿನ ಲಾಭಾಂಶ ಬರುತ್ತದೆ. ಕೃಷಿಕರಿಗೆ ಬೇಕಾದ ಕೃಷಿ ಸಲಕರಣೆ  ಖರೀದಿಸುವ ಅವಕಾಶ ಕೂಡಿಬರುವುದು. ಅಂದುಕೊಂಡ ಕೆಲಸ ವೇಗವಾಗಿ ಆಗದಿದ್ದರೂ,  ಉತ್ತಮ ಫಲಿತಾಂಶ ಸಿಗಲಿದೆ. ಇಂದು ತಾವು ಹಿರಿಯರ ಮಾರ್ಗದರ್ಶನದಲ್ಲಿ ನಡೆಯಿರಿ. ಪತ್ನಿಯ ಸಹಾಯದಿಂದ ಆರ್ಥಿಕ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವಿರಿ. ಹಳೆಯ ಸಾಲ ತೀರಿಸುವ ಸಮಯ ಹತ್ತಿರ ಬಂದಿರುತ್ತದೆ. ಪಿತ್ರಾರ್ಜಿತ ಆಸ್ತಿ ಗೊಂದಲ ಇಂದು ನಿವಾರಣೆಯಾಗಲಿದೆ. ತಮ್ಮ ಒರಟುತನದ ಮಕ್ಕಳು ಇಂದು, ಪರಿವರ್ತನೆಯಾಗಿ ಸಮಾಜಕ್ಕೆ ಆದರ್ಶ ವ್ಯಕ್ತಿಗಳ ಆಗುವರು. ಚಿತ್ರರಂಗದಲ್ಲಿ ಕೆಲಸ ಮಾಡುವ ಹವ್ಯಾಸಿ ಕಲಾವಿದರಿಗೆ ಒಳ್ಳೆಯ ಅವಕಾಶಗಳು ಬರುವವು. ಪರಸ್ಪರ ಪ್ರೀತಿಸುವುದರಲ್ಲಿ ವೇದನೆ ಮೂಡಲಿದೆ. ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ ಸೋಮಶೇಖರ್ ಪಂಡಿತ್B.Sc Mob.no.9353 488403

“ವೃಷಭ ರಾಶಿ”  ಕೃತಿಕಾ 2, 3,4 ರೋಹಿಣಿ ,ಮೃಗಶಿರಾ 1,2 ಅತ್ತೆ, ಮಾವನ ಕಡೆಯಿಂದ ತುಂಬಾ ಕಿರಿಕಿರಿ. ಪ್ರೇಮ ವಿಚಾರ ಮನಸ್ತಾಪ.

ತಾವು ಆತ್ಮಸಾಕ್ಷಿಯಾಗಿ ಮಾಡಿರುವಂತ ಕೆಲಸ, ಕುಟುಂಬದ ಸದಸ್ಯರಿಗೆ  ತೃಪ್ತಿದಾಯಕವಾಗುವುದಿಲ್ಲ. ಇದರಿಂದ ತಮಗೆ ಮನಸ್ತಾಪ ವಾಗುವುದು. ಗೆಳೆಯರ ಬಗ್ಗೆ ಮೃದು ಧೋರಣೆ ಬೇಡ ,ಅವರೇ ನಿಮಗೆ ಮುಳ್ಳಾಗುವರು. ಮಕ್ಕಳ ಬೇಡಿಕೆಗಳು ಮತ್ತು ಅವರಿಗೆ ತೋರಿಸುವ ಪ್ರೀತಿ ತಿರಸ್ಕಾರ ಮಾಡಬೇಡಿ. ತಮ್ಮ ಕುಟುಂಬದ ಜೊತೆ ಸಂತೋಷದ ಕ್ಷಣಗಳನ್ನು ಅನುಭವಿಸಿ, ರಸದೌತಣ ಮಾಡುವಿರಿ. ಮಕ್ಕಳ ಮದುವೆ ಚಿಂತನೆ ಮಾಡುವಿರಿ. ನಿವೇಶನ ಖರೀದಿಸುವ ಅಥವಾ ನಿವೇಶನ ಕಟ್ಟುವ  ಯೋಚನೆಗಳು ಬರಲಿವೆ. ರಂಗಭೂಮಿ ಕಲಾವಿದರಿಗೆ ಉತ್ತಮ ಪ್ರತಿಕ್ರಿಯೆ ಸಿಗಲಿವೆ. ಮಾತಾಪಿತೃ ಆರೋಗ್ಯದ ಬಗ್ಗೆ ಗಮನವಿರಲಿ. ತಮ್ಮ ಪ್ರಿಯತಮೆ ಆರೋಗ್ಯದ ಬಗ್ಗೆ ಕಾಳಜಿ ಮಾಡಿ. ತಮ್ಮ ಸಂಗಾತಿಯಿಂದ ಸಹಕಾರ ಸಿಗಲಿದೆ. ಕುಟುಂಬಸ್ಥರು ಮಾತುಮಾತಿಗೆ ಸಿಟ್ಟು ಮಾಡಿಕೊಳ್ಳುವ ಅತಿರೇಕ ಬೇಡ. ಅನಾವಶ್ಯಕ ವಸ್ತುಗಳಿಗೆ ಹಣ ಖರ್ಚು ಮಾಡುವ ಬದಲು ಅಗತ್ಯ ವಸ್ತುಗಳನ್ನು ಖರೀದಿಸಿ. ಹಿತಶತ್ರುಗಳ ಬಗ್ಗೆ ಎಚ್ಚರವಿರಲಿ. ಅಕ್ಕಪಕ್ಕದ ಜನ ಅಥವಾ ಅಕ್ಕ ಪಕ್ಕದ ಹೊಲದ ಮಾಲೀಕರ ಕಡೆಯಿಂದ ,ಸಮಸ್ಯೆಗಳು ಸೃಷ್ಟಿಯಾಗಲಿವೆ ,ಎಚ್ಚರ ಇರಲಿ. ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ ಸೋಮಶೇಖರ್ ಪಂಡಿತ್B.sc, mob.No. 9353 488403

“ಮಿಥುನರಾಶಿ” ಮೃಗಶಿರಾ3,4 ಆರಿದ್ರಾ, ಪುನರ್ವಸು 1, 2, 3. ಸಾಲ ಕೊಡಿಸುವ ಮಧ್ಯವರ್ತಿಗಳಿಗೆ ಉತ್ತಮ ಕಮಿಷನ್ ಬರುತ್ತದೆ .ಆದರೆ ಅಧಿಕ ಲಾಭದ ಆಸೆ ತೋರಿಸಿ ಸಾಲಕ್ಕೆ ಬರುವ ದಾಖಲೆಯಲ್ಲಿ ವ್ಯತ್ಯಾಸವಿರುತ್ತದೆ, ಎಚ್ಚರವಾಗಿರಿ. ಇದೇ ಸಮಸ್ಯೆ ತಾವು ಎದುರಿಸುವ ಪ್ರಸಂಗ ಬರುತ್ತದೆ ಎಚ್ಚರವಾಗಿರಿ. ತಮ್ಮ ಹೇರು ಧ್ವನಿಯಿಂದ ಜನರು ವಿರೋಧಿಸುವರು. ತಾವು ಯಾರಿಗೂ ಜಾಮೀನು ನೀಡಬೇಡಿ. ತಾವು ಮಧ್ಯಸ್ಥಿಕೆ ವಹಿಸಿ ಸಾಲ ಕೊಡಿಸಬೇಡಿ. ಹೊಸ ಹೋಟೆಲ್ ಉದ್ಯಮ ಪ್ರಾರಂಭ ಮಾಡುವುದರ ಬಗ್ಗೆ ಚಿಂತನೆ. ಮನೆಯನ್ನು ವಾಸ್ತು ಪ್ರಕಾರ ಪರಿವರ್ತನೆ ಮಾಡುವ ಸಾಧ್ಯತೆ. ಜಮೀನಿನಲ್ಲಿ ಬೋರ್ವೆಲ್ ಕೊರೆಸುವ ಸಾಧ್ಯತೆ. ಪ್ರೀತಿಯಲ್ಲಿ ಋಣಾತ್ಮಕ ಚಿಂತನೆ ಮಾಡುವಿರಿ. ಪತಿ-ಪತ್ನಿ ಮಧ್ಯೆ ಪದೇ ಪದೇ ಮನಸ್ತಾಪವಾಗುವುದು. ತಾವು ಈಶ್ವರ ದೇವಸ್ಥಾನದಲ್ಲಿ ಬಿಲ್ವ ಪತ್ರೆ ಗಿಡ ನೆಟ್ಟರೆ ಉತ್ತಮ ಫಲಸಿಗುವುದು. ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ ಸೋಮಶೇಖರ್ ಪಂಡಿತ್B.Sc, Mob.no.9353 488403

“ಕಟಕರಾಶಿ” ಪುನರ್ವಸು 4, ಪುಷ್ಯ, ಆಶ್ಲೇಷಾ. ಸಿಹಿತಿಂಡಿ, ಉಪ್ಪಿನಕಾಯಿ, ಹಪ್ಪಳ ಮತ್ತು ಇತ್ಯಾದಿ ಉದ್ಯಮ ಮಾಡುವವರು ಅದಕ್ಕೆ ಒತ್ತು ಕೊಡುವುದರಿಂದ ಮುಂದಿನ ದಿನದಲ್ಲಿ ಆದಾಯ ಹೆಚ್ಚಾಗುತ್ತದೆ. ನಿಮ್ಮ ವಸ್ತುಗಳು ಹೆಚ್ಚು ಜನಪ್ರಿಯತೆ ಪಡೆದು ಬೇಡಿಕೆ ಹೆಚ್ಚಾಗುವುದು. ದೂರದ ವ್ಯಕ್ತಿಗಳ ಸಹಾಯದಿಂದ ಹೊಸ ಅವಕಾಶ ಸಿಗಲಿದೆ. ಎದುರಾಳಿಗಳನ್ನು ಧೈರ್ಯದಿಂದ ಎದುರಿಸಿ ಇದರಲ್ಲಿ ನಿಮಗೆ ಜಯಸಿಗುವುದು. ಕುಟುಂಬ ಸದಸ್ಯರ ಶಸ್ತ್ರಚಿಕಿತ್ಸೆಯ ಬಗ್ಗೆ ಚಿಂತನೆ ಮಾಡುವಿರಿ. ಹೊಸ ಖಾನಾವಳಿ ಪ್ರಾರಂಭ ಮಾಡುವುದರ ಬಗ್ಗೆ ಚಿಂತನೆ ಮಾಡುವಿರಿ. ಬಟ್ಟೆ ವ್ಯಾಪಾರಸ್ಥರು ಮೊದಲಿದ್ದಂತೆ ವ್ಯಾಪಾರ ವಹಿವಾಟು ಈಗ ಕಡಿಮೆಯಾಗಲಿದೆ. ಹತ್ತಿರದ ಊರುಗಳಲ್ಲಿ ವ್ಯಾಪಾರ ವಹಿವಾಟು ಮಾಡಿ ವ್ಯಾಪಾರ ವಿಸ್ತಾರ ಮಾಡಬಹುದು. ಆಸ್ತಿ ಖರೀದಿ ಮಾಡುವಾಗ ಅಡತಡೆಗಳು ಮಾಯವಾಗಿ ನಿಮ್ಮ ಇಷ್ಟದ ಆಸ್ತಿ ಹೊಂದುವ ಯೋಗವಿದೆ. ಮನಸ್ಸಿನಲ್ಲಿ ಯೋಚಿಸಿರುವ ವಿಚಾರಗಳು ಎಲ್ಲರ ಮುಂದೆ ಹೇಳಬೇಡಿ. ಪ್ರತಿಯೊಂದು ಕಷ್ಟ ಸುಖದ ಕೆಲಸಗಳಲ್ಲಿ ತಮ್ಮ ಪತ್ನಿ ಮಾರ್ಗದರ್ಶನ  ಮಾಡುವವಳು ಸಹಕರಿಸಿರಿ. ಪ್ರೀತಿ-ಪ್ರೇಮ ಸರಸ-ಸಲ್ಲಾಪಗಳಲ್ಲಿ ಮಾನಸಿಕವಾಗಿ ವೇದನೆ. ತಾವು ಲಕ್ಷ್ಮಿ ದೇವಸ್ಥಾನ ಹತ್ತಿರ ಬೇವಿನ ಗಿಡ ನೆಟ್ಟರೆ ಒಳ್ಳೆದು. ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ ಸೋಮಶೇಖರ್ ಪಂಡಿತ್B.Sc, Mob.No.9353 488403

“ಸಿಂಹರಾಶಿ”  ಮಘ, ಪೂರ್ವಪಾಲ್ಗುಣಿ ,ಉತ್ತರ ಪಾಲ್ಗುಣಿ1 ತಮ್ಮ ಕುಟುಂಬದಲ್ಲಿ ಕಲಹ ಸೃಷ್ಟಿಯಾಗುವುದು. ತಾವು ಮಾಡುವಂತ ವೃತ್ತಿಯಲ್ಲಿ ಶತ್ರುಗಳ ಕಾಟ ಕಾಡಲಿದೆ. ತಮ್ಮ ಕೆಲಸಕಾರ್ಯಗಳಲ್ಲಿ ಹಸುವೇ ಪಡುವರು. ತಮಗೆ ಯಾರ ಸಹಕಾರ ಸಿಗಲಾರದು. ಹೊಸ ಉದ್ಯಮ ಪ್ರಾರಂಭ ಮಾಡಲು ಮನಸ್ತಾಪಗಳು, ಅಡತಡೆಗಳು ಕಾರಣವಾಗುವವು. ಹೈನುಗಾರಿಕೆ ಮಾಡುವವರು ಉತ್ಪನ್ನಗಳಿಗೆ ಬೆಲೆ ಬಂದು ಉತ್ತಮ ಲಾಭಾಂಶ ಸಿಗಲಿದೆ. ಪಿತ್ರಾರ್ಜಿತ ಆಸ್ತಿಯಲ್ಲಿ ಗೊಂದಲ ಸೃಷ್ಟಿಯಾಗಲಿವೆ. ಅಣ್ಣ ತಮ್ಮ, ಅಕ್ಕ ತಂಗಿಯರ ಮಧ್ಯೆ ಕಲಹಗಳು ಸೃಷ್ಟಿಯಾಗುವುದು. ದೂರದ ಪ್ರಯಾಣ ಬೇಡ. ಪ್ರೇಮದಲ್ಲಿ ವಿರಹ ಕಾಡಲಿವೆ. ಶಿಕ್ಷಕರಿಗೆ ತಮ್ಮ ಶಿಕ್ಷಕವೃಂದದಿಂದ ಕಾಡಾಟ ಕಾಡಲಿದೆ. ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ ಸೋಮಶೇಖರ್ ಪಂಡಿತ್B.Sc, Mob.No._9353 488403

“ಕನ್ಯಾರಾಶಿ” ಉತ್ತರ ಪಾಲ್ಗುಣಿ 2, 3 ,4 ಹಸ್ತ ,ಚಿತ್ತ 1,2 ನೆನೆಗುದಿಗೆ ಬಿದ್ದಿದ್ದ ಸಂಬಂಧದ ವಿಚಾರ ಮತ್ತೆ ಗರಿಗೆದರುವ ಸಾಧ್ಯತೆ .ಮಕ್ಕಳ ವೈವಾಹಿಕ ಜೀವನದ ಬಗ್ಗೆ ಚಿಂತನೆ.  ಉದ್ಯೋಗಕಾಂಕ್ಷಿಗಳಿಗೆ ಉತ್ತಮ ಅವಕಾಶಗಳು ಕಂಡುಬರುತ್ತದೆ ,ಪ್ರಯತ್ನ ಮಾಡಲಿದ್ದೀರಿ. ಅತಿಯಾದ ಶ್ರಮದಿಂದ ಆರೋಗ್ಯದ ಮೇಲೆ ಪರಿಣಾಮ ಬೀರುವ ಸಾಧ್ಯತೆಯಿದೆ, ಜಾಗೃತಿವಹಿಸಿ. ಪತ್ನಿ ಮತ್ತು ಮಕ್ಕಳ ಆರೋಗ್ಯದ ಬಗ್ಗೆ ಗಮನವಿರಲಿ. ಸ್ಥಳ ಅಥವಾ ಉದ್ಯೋಗದಲ್ಲಿ ಬದಲಾವಣೆ ಸಾಧ್ಯತೆ. ಗಳಿಕೆಯಲ್ಲಿಯು ಪ್ರಗತಿ. ತಪ್ಪು ನಡೆಯಿಂದಾಗಿ ಮಾನಸಿಕ ಹಿಂಸೆ ಅನುಭವಿಸುವ ಸಾಧ್ಯತೆ. ನಿಮ್ಮ ಪ್ರಾಮಾಣಿಕತೆ ನಿಮಗೆ ಶ್ರೀರಕ್ಷೆಯಾಗಲಿದೆ. ಹೊಸ ಹೋಟೆಲ್ ಪ್ರಾರಂಭದ  ಚಿಂತನೆ. ಸಾಲದ ಸಮಸ್ಯೆ ಕಾಡಲಿದೆ. ರಾಜಕೀಯ ಕ್ಷೇತ್ರದಲ್ಲಿ ಇದ್ದವರಿಗೂ ಒಳ್ಳೆಯ ಫಲಿತಾಂಶ ಸಿಗಲಿದೆ. ಸರಕಾರಿ ನೌಕರರಿಗೆ ಉತ್ತಮ ಪ್ರಗತಿ ಕಾಣಲಿದೆ. ಹೊಸ ಮನೆ ಖರೀದಿ, ಜಮೀನು ಖರೀದಿ ಸಾಧ್ಯತೆ. ಹಳೆಯ ನೆನಪುಗಳು ಕಾಡುವವು. ಸಂಗಾತಿಯ ಮನಸ್ಸು ಗೆಲ್ಲುವಲ್ಲಿ ವಿಫಲವಾಗುವ ಸಾಧ್ಯತೆ. ಮನೆಯ ಜವಾಬ್ದಾರಿ ನಿಭಾಯಿಸುವುದರಲ್ಲಿ ಯಶಸ್ಸು ಕಾಣುವಿರಿ. ಕುರಿ ಸಾಕಾಣಿಕೆ, ಕೋಳಿ ಸಾಕಾಣಿಕೆ ಉದ್ಯಮದ ಚಿಂತನೆ ಮಾಡುವಿರಿ. ಮಹಾಲಕ್ಷ್ಮಿ ದೇವಸ್ಥಾನದಲ್ಲಿ ಬನ್ನಿ ಗಿಡ ನೆಟ್ಟರೆ ಒಳಿತು. ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿರಿ ಸೋಮಶೇಖರ್ ಪಂಡಿತ್B.Sc Mob.No._9353 488403

“ತುಲಾ ರಾಶಿ” ಚಿತ್ತಾ 3,4 ಸ್ವಾತಿ, ವಿಶಾಖ 1 ,2 ,3 ಕುಟುಂಬ ವರ್ಗದವರ ಜೊತೆ ಚರ್ಚಿಸಿ ಹೊಸ ಉದ್ಯಮ ಪ್ರಾರಂಭ ಮಾಡುವಿರಿ. ಎಲ್ಲಿ ಕೆಲಸ ಮಾಡುತ್ತಿದ್ದೀರಿ ,ಅಲ್ಲಿಯೇ ಮುಂದುವರೆಯಿರಿ. ಅಧಿಕಾರಿಗಳಿಗೆ ಕೆಳಗಿನವರ ಕಡೆಯಿಂದ, ಮೇಲಿನವರ ಕಡೆಯಿಂದ  ಸಮಸ್ಯೆ  ಕಾಡಲಿದೆ. ಹೊಸ ಯೋಜನೆಗಳು ಪ್ರಾರಂಭ ಮಾಡುವ ಸಕಾಲ. ಪತಿಯ ಸಂಬಂಧಿಕರ ಕಡೆಯಿಂದ ಬಂಧುತ್ವ ವೃದ್ಧಿಯಾಗುವುದು. ಮಗನ ಅಥವಾ ಮಗಳ ಸಂತಾನದ ಬಗ್ಗೆ ಚಿಂತನೆ ಮಾಡುವಿರಿ. ಮಕ್ಕಳ ವಿಚ್ಛೇದನದ ಬಗ್ಗೆ ಚಿಂತನೆ. ತಮಗೆ ಎದೆ ನೋವು, ಮಂಡಿ ನೋವು ಸಮಸ್ಯೆ  ಕಾಡುವವು. ತಾವು ಖರೀದಿಸುವ ಆಸ್ತಿಯ ಮೇಲೆ ದುಷ್ಟರ ದಬ್ಬಾಳಿಕೆ ಕಾಡಲಿದೆ. ಸಂಗಾತಿಯ ಪ್ರೀತಿ ಕಡಿಮೆಯಾಗಲಿದೆ. ಈಶ್ವರ ದೇವಸ್ಥಾನದಲ್ಲಿ ಬನ್ನಿಗಿಡ, ಬಿಲ್ಪತ್ರೆ ,ಬೇವಿನಮರ ಸಸಿಗಳನ್ನು ನೆಟ್ಟು ಪೋಷಿಸಿ ಬೆಳೆಸಬೇಕು. ಪ್ರಗತಿ ಕಾಣುವಿರಿ. ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ ಸೋಮಶೇಖರ್ ಪಂಡಿತ್B.Sc, Mob.no._9353 488403

“ವೃಚಿಕ ರಾಶಿ’ ವಿಶಾಖ 4 ಅನುರಾಧ ,ಜೇಷ್ಠ. ಕೃಷಿಕರಿಗೆ ಹೆಚ್ಚಿನ ಧನಾಗಮನ ನಿರೀಕ್ಷೆ. ಜಮೀನಿಗಾಗಿ ಹೊಸ ಯಂತ್ರೋಪಕರಣಗಳ ಖರೀದಿ ಸಾಧ್ಯತೆ. ಜಮೀನಿನಲ್ಲಿ ಬೋರ್ವೆಲ್  ಕೊರೆಯುವುದುಕ್ಕಾಗಿ ಚಿಂತಿಸುವಿರಿ. ಮಕ್ಕಳು ಅಡ್ಡದಾರಿ ಹೋಗುವುದರ ಬಗ್ಗೆ ಚಿಂತನೆ ಮಾಡುವಿರಿ. ಮಹಿಳಾ ರಾಜಕಾರಣಿಗಳಿಗೆ ಸಿಹಿಸುದ್ದಿ ಲಭಿಸಲಿದೆ. ನಿರುದ್ಯೋಗಿಗಳಿಗೆ ಉದ್ಯೋಗ ಸಿಗುವ ಭಾಗ್ಯ. ನೌಕರಸ್ಥರು ಸಹೋದ್ಯೋಗಿಗಳಿಂದ ಮನಸ್ತಾಪ. ಬಂಧು ಮತ್ತು ಸ್ನೇಹಿತರಿಂದ ಅತಿಥಿಸತ್ಕಾರ ಭಾಗ್ಯ ಸಿಗಲಿದೆ. ನ್ಯಾಯಾಲದಲ್ಲಿ ಪೆಂಡಿಂಗ್ ಇರುವ ಕೆಲಸ ಕಾರ್ಯಗಳು ಯಶಸ್ವಿನ ಹಂತಕ್ಕೆ ಬಂದಿರುತ್ತದೆ. ಮಕ್ಕಳ ಕಂಕಣಬಲ ಕೂಡಿ ಬರುವ ಸಾಧ್ಯತೆ. ನಿಮ್ಮಿಂದ ದೇವರ ಪ್ರತಿಷ್ಠಾಪನಾ ಮಾಡುವುದರ ಬಗ್ಗೆ ಚಿಂತನೆ. ಜಮೀನಲ್ಲಿ ತಕರಾರು ನ್ಯಾಯ ಶುರುವಾಗುವುದು ಎಚ್ಚರಿಕೆಯಿಂದ ಹೆಜ್ಜೆ ಇಡಬೇಕು. ಕುಟುಂಬ ಸದಸ್ಯರ ಆರೋಗ್ಯದ ಬಗ್ಗೆ ಚಿಂತನೆ ಮಾಡುವಿರಿ. ಮಾತಾಪಿತೃ ಆರೋಗ್ಯದ ಶಸ್ತ್ರಚಿಕಿತ್ಸೆಯ ಬಗ್ಗೆ ಚಿಂತನೆ ಮಾಡುವಿರಿ. ಪ್ರೇಮಿಗಳು ಪ್ರೀತಿ-ಪ್ರೇಮ ಸರಸ-ಸಲ್ಲಾಪಗಳಿಂದ ಮನಸ್ತಾಪವಾಗಲಿದೆ. ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ ಸೋಮಶೇಖರ್ ಪಂಡಿತ್B.Sc Mob.no.__9353 488403

“ಧನಸುರಾಶಿ” ಮೂಲ,ಪೂರ್ವಾಷಾಢ, ಉತ್ತರಾಷಾಢ 1. ನಾಲ್ಕು ಚಕ್ರದ ವಾಹನ ಖರೀದಿಸುವ ಚಿಂತನೆ ಮಾಡುವಿರಿ. ಮನೆ ಕಟ್ಟುವ ವಿಚಾರ ಪತ್ನಿಯ ಸಹಕಾರದಿಂದ ಯಶಸ್ಸು ಕಾಣುವಿರಿ. ಪಿತ್ರಾರ್ಜಿತ ಆಸ್ತಿ ವಿಚಾರದಲ್ಲಿ ನೆಮ್ಮದಿಯ ವಾತಾವರಣ ಸೃಷ್ಟಿಯಾಗಲಿದೆ. ವಿಧವಾ ಮಕ್ಕಳ ಮದುವೆ ಬಗ್ಗೆ ಚಿಂತನೆ. ಮಗಳ ಅಥವಾ ಮಗನ ಸಂತಾನದ ಬಗ್ಗೆ ಚಿಂತನೆ. ತಾವು ಕೊಟ್ಟಿರುವ ಹಣದ ಬಗ್ಗೆ ಚಿಂತನೆ ಮಾಡುವಿರಿ. ನಿಮ್ಮ ದುಡ್ಡು ನಿಮ್ಮ ಕೈ ಸೇರಲು ಹರಸಾಹಸ ಪಡುವಿರಿ. ಕೃಷಿಕರಿಗೆ ಉತ್ತಮ ಲಾಭಾಂಶ ನಿರೀಕ್ಷಣೆ ಮಾಡುವಿರಿ. ಸುವರ್ಣ ಅಭರಣಗಳ ಖರೀದಿ ಮಾಡುವ ಸಾಧ್ಯತೆ. ನಿಮ್ಮ ಅಮೃತ ಹಸ್ತದಿಂದ ದೇವರ ಪ್ರತಿಷ್ಠಾಪನಾ ಬಗ್ಗೆ ಚಿಂತನೆ ಮಾಡುವಿರಿ. ಬಹು ದಿನಗಳಿಂದ ಪೆಂಡಿಂಗ್ ಇರುವ ಕಾರ್ಯಗಳು ಇಂದು ನೆರವೇರುವ ಸಾಧ್ಯತೆ ಇದೆ. ತಮ್ಮ ಹಿತೈಷಿಗಳು ತಮಗೆ ಆಶೀರ್ವಾದ ಮಾಡುವಿರಿ. ತಾವು ನಂಬಿಕೆಯಿಟ್ಟಿರುವ ವ್ಯಕ್ತಿಗಳಿಂದ ಮನಸ್ತಾಪ ವಾಗುವುದು. ವಾಹನ ಸವಾರಿ ಮಾಡುವಾಗ ಎಚ್ಚರಿಕೆಯಿಂದ ವಾಹನ ಚಲಾಯಿಸಬೇಕು. ಮನೆಗೆ ಎಲೆಕ್ಟ್ರಾನಿಕ್ಸ್ ಯಂತ್ರೋಪಕರಣಗಳ ಖರೀದಿ ಸಾಧ್ಯತೆ ಇದೆ. ತಾವು ತಮ್ಮ ಜಮೀನಿನಲ್ಲಿ ಮೇಕೆ ಸಾಕಾಣಿಕೆ, ಹೈನುಗಾರಿಕೆ, ಕೋಳಿ ಫಾರಂ ಉದ್ಯಮ ಪ್ರಾರಂಭ ಮಾಡುವುದರ ಬಗ್ಗೆ ಚಿಂತನೆ ಮಾಡುವಿರಿ. ಪ್ರೀತಿ-ಪ್ರೇಮ ಸರಸ-ಸಲ್ಲಾಪ ಗಳಿಂದ ಬೇಸರ ಜಿಗುಪ್ಸೆ ಸೃಷ್ಟಿಯಾಗಲಿದೆ. ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ ಸೋಮಶೇಖರ್ ಪಂಡಿತ್B.Sc, Mob.no.__9353 488403

“ಮಕರರಾಶಿ” ಉತ್ತರಾಷಾಢ 2, 3 ,4 ಶ್ರಾವಣ ,ಧನಿಷ್ಠ 1,2, ಉನ್ನತ ಪರೀಕ್ಷೆಗಳಲ್ಲಿ ನಿರೀಕ್ಷೆಯಂತೆ ಉತ್ತಮ ಫಲಿತಾಂಶ. ಮಕ್ಕಳ ಮುಂದಿನ ವ್ಯಾಸಂಗಕ್ಕಾಗಿ ಹಣಕಾಸಿನ ಹೊಂದಾಣಿಕೆ ಆಗಲಿದೆ .ಮಕ್ಕಳ ಪ್ರಗತಿಯಿಂದ ಮನೆಯಲ್ಲಿ ಸಂಭ್ರಮದ ವಾತಾವರಣ .ವಿದೇಶದಿಂದ ಬಂಧುಗಳ ಆಗಮನ. ಹಣಕಾಸಿನ ಆದಾಯದಿಂದ ಹೊಸ ಮಾರ್ಗ ಕಂಡುಕೊಳ್ಳುವ ಸಾಧ್ಯತೆ ಇದೆ. ಕೆಲಸದಲ್ಲಿ ಪ್ರಮುಖ ಬೆಳವಣಿಗೆ ನಿಮ್ಮ ಗಮನಕ್ಕೆ ಬರಲಿದೆ .ಮದುವೆ ಮುಂತಾದ ಶುಭ ಸಮಾರಂಭಕ್ಕೆ ಚಿಂತನೆ ನಡೆಸಲಿದ್ದಾರೆ. ಮಗಳ ಸಂತಾನದ ಬಗ್ಗೆ ಚಿಂತನೆ ಮಾಡುವಿರಿ. ನಿವೇಶನ ಕಟ್ಟುವುದು ಅರ್ಧಕ್ಕೆ ನಿಲ್ಲುವುದು. ಜಮೀನಿನ ತಕರಾರು ತಂಟೆ ನಿಮಗೆ ಸಮಸ್ಯೆ ಕಾಡಲಿದೆ. ನಿಮ್ಮ ದುಡ್ಡು ನಿಮ್ಮ ಕೈ ಸೇರಲು ಹರಸಾಹಸ ಪಡುವಿರಿ. ಪ್ರೇಮಿಗಳಿಗೆ ಹಿರಿಯರ ಕಡೆಯಿಂದ ವಿರೋಧ ಸೃಷ್ಟಿಯಾಗುವುದು. ಸಂಗಾತಿಯೊಡನೆ ನೆಮ್ಮದಿ ಇಲ್ಲದಂತಾಗುವುದು. ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ ಸೋಮಶೇಖರ್ ಪಂಡಿತ್B.Sc, Mob.no._9353 488403

“ಕುಂಭರಾಶಿ” ಧನಿಷ್ಠ 3, 4 ಶತಭಿಷಾ ,ಪೂರ್ವಭಾದ್ರ 1,2 ,3 ಮಗನ ನಡವಳಿಕೆಯ ಬಗ್ಗೆ ತಮಗೆ ತುಂಬಾ ಕಣ್ಣೀರುಡಿಸುವುದು. ಸಾಲ ತೆಗೆದವರ ಕಡೆಯಿಂದ  ತುಂಬಾ ಹಿಂಸೆ ಅನುಭವಿಸುವಿರಿ. ಹೊಸ ಉದ್ಯಮ ಪ್ರಾರಂಭಿಸುವ ಬಗ್ಗೆ ಕುಟುಂಬ ಸದಸ್ಯರ, ಪತ್ನಿಯ, ಹಾಗೂ ಸ್ನೇಹಿತರ ಸಲಹೆ ಪಡೆದುಕೊಳ್ಳುವಿರಿ. ಗುರಿ ಸಾಧನೆಯ ಕನಸು ಕಾಣುವಿರಿ. ಸರ್ಕಾರಿ ಕಚೇರಿಯಲ್ಲಿನ ಕೆಲಸಕಾರ್ಯಗಳು ತಮಗೆ ಕಾಡಲಿದೆ. ಅದಕ್ಕೆ ಸಂಬಂಧಪಟ್ಟ ವ್ಯಕ್ತಿ ನಿಮಗೆ ಕಾಣಲಿದ್ದಾರೆ. ಕುಟುಂಬ ಸದಸ್ಯರೊಡನೆ ಸಂತೋಷದ ಕ್ಷಣಗಳನ್ನು ಅನುಭವಿಸುವಿರಿ. ಜನರ ಜೊತೆ ತಮ್ಮ ಒಡನಾಟ ಸುಂದರವಾಗಿದೆ. ಲೇವಾದೇವಿ, ವ್ಯಾಪಾರಸ್ಥರಿಗೆ ಉತ್ತಮ ಪ್ರತಿಕ್ರಿಯೆ ಸಿಗಲಿದೆ. ಉದ್ಯೋಗ ಹುಡುಕಾಟದಲ್ಲಿ ಸ್ನೇಹಿತರ ಕಡೆಯಿಂದ ಸಹಾಯ ಸಿಗಲಿದೆ. ಮಕ್ಕಳ ಮದುವೆ ಕಾರ್ಯ ವಿಳಂಬವಾಗಲಿದೆ. ಆರೋಗ್ಯದಲ್ಲಿ ವೃದ್ಧಿಯಾಗುವುದು. ವ್ಯಾಪಾರಸ್ಥರಿಗೆ ಉತ್ತಮ ಪ್ರಗತಿ ಕಾಣಲಿದೆ. ಹಣಕಾಸಿನ ವ್ಯವಹಾರದಲ್ಲಿ  ಸ್ವಲ್ಪ ಮಟ್ಟಿಗೆ ಚೇತರಿಕೆ ಕಾಣಲಿದೆ. ಅಕ್ಕಪಕ್ಕದ ಮನೆಯ ಕಡೆ ಮತ್ತು ಅಕ್ಕಪಕ್ಕದ ಹೊಲದ ಮಾಲೀಕರ ಕಡೆಯಿಂದ ಮನಸ್ತಾಪವಾಗುವ ಸಾಧ್ಯತೆ ಇದೆ. ಪ್ರೀತಿ ವಿಚಾರದಲ್ಲಿ ಕೊರಗುವಿರಿ. ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ ಸೋಮಶೇಖರ್ ಪಂಡಿತ್B.Sc, 9353 488403

“ಮೀನ ರಾಶಿ” ಪೂರ್ವಭಾದ್ರಪದ 4 ಉತ್ತರಭಾದ್ರಪದ ,ರೇವತಿ.

ದಿನಸಿ ವ್ಯಾಪಾರ ಲಾಭದಾಯಕವಾಗಲಿದೆ. ಬರಬೇಕಾದ ಬಾಕಿ ಹಣ ಕೈಸೇರಲಿದೆ. ಕುಟುಂಬದಲ್ಲಿ ಶಾಂತ ವಾತಾವರಣ ಸೃಷ್ಟಿಯಾಗುವುದು. ಶತ್ರು ಭಯ ಸೃಷ್ಟಿಯಾಗುವುದು. ವಿರೋಧಿಗಳು ತಮ್ಮ ಬಗ್ಗೆ ಒಳಸಂಚು ಮಾಡುವ ಸಾಧ್ಯತೆ ಇದೆ ಜಾಗೃತಿವಹಿಸಿ. ಪತಿ-ಪತ್ನಿ ಸಮಾಲೋಚನೆ ಮಾಡಿ ಸೂಕ್ತ ನಿರ್ಧಾರ ಮಾಡಿದರೆ ಒಳ್ಳೆಯದು. ಪತ್ನಿಯ ಸಹಕಾರದಿಂದ ಮನೆ ಕಟ್ಟುವ ವಿಚಾರ ಯಶಸ್ವಿಯಾಗಲಿದೆ. ದಂಪತಿಗಳಿಗೆ ಸಂತಾನದ ಭಾಗ್ಯ ಸಿಗಲಿದೆ. ನಿವೇಶನ ಖರೀದಿಸುವ ಚಿಂತನೆ ಮಾಡುವಿರಿ. ಹೊಸ ಉದ್ಯಮ ಪ್ರಾರಂಭಿಸುವುದು ಸೂಕ್ತ ಕಾಲ. ಹೋಟೆಲ್ ಬಿಜಿನೆಸ್ ಮಾಡುವವರಿಗೆ ಸಂತೋಷದ ದಿನ ವಾಗಲಿದೆ. ತಮ್ಮ ನೇರನುಡಿಯ ಮಾತುಗಳಿಗೆ ಮುಜುಗರ ಆಗುವಿರಿ. ಮೃದು ಸ್ವಭಾವ ಸ್ವಲ್ಪ ಮಟ್ಟಿಗೆ ರೂಢಿಸಿಕೊಳ್ಳುವುದು ಉತ್ತಮ. ಹೆಚ್ಚಿನ ಮಾಹಿತಿಗಾಗಿಸಂಪರ್ಕಿಸಿ ಸೋಮಶೇಖರ್ ಪಂಡಿತ್B.Sc, Mob.No._9353 488403

 

 

Click to comment

Leave a Reply

Your email address will not be published. Required fields are marked *

More in ಜ್ಯೋತಿಷ್ಯ

Advertisement Enter ad code here
Advertisement

ದಾವಣಗೆರೆ

Advertisement

ಪ್ರಮುಖ ಸುದ್ದಿ

News

Advertisement
Advertisement e

ಸಿದ್ದನೂರು ಮತ್ತು ಅಗಸನಕಟ್ಟೆಯ ನಿಕ್ರಾ ಯೋಜನೆಯ ದೃಶ್ಯಾವಳಿ

Advertisement
To Top