Connect with us

Dvg Suddi-Kannada News

ಔರಾದ್ಕರ್ ವರದಿ ಅನ್ವಯ ಪೊಲೀಸ್ ನೌಕರರ ವೇತನ ಹೆಚ್ಚಳ

ರಾಜ್ಯ ಸುದ್ದಿ

ಔರಾದ್ಕರ್ ವರದಿ ಅನ್ವಯ ಪೊಲೀಸ್ ನೌಕರರ ವೇತನ ಹೆಚ್ಚಳ

ಡಿವಿಜಿಸುದ್ದಿ.ಕಾಂ ,ಬೆಂಗಳೂರು: ರಾಘವೇಂದ್ರ ಔರಾದ್ಕರ್ ಸಮಿತಿ ವರದಿ ಅನ್ವಯ ರಾಜ್ಯ ಸರ್ಕಾರ ಪೊಲೀಸ್ ಇಲಾಖೆಯ ಅಧಿಕಾರಿ ಹಾಗೂ ನೌಕರರ ವೇತನ ಶ್ರೇಣಿ ಪರಿಷ್ಕರಿಸಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಆದೇಶ ಹೊರಡಿಸಿದ್ದಾರೆ. ಈ ಮೂಲಕ ರಾಜ್ಯ ಸರ್ಕಾರ ಪೊಲೀಸ್ ಇಲಾಖೆಗೆ ದೀಪಾವಳಿ ಗಿಫ್ಟ್ ನೀಡಿದೆ.

2019ರ ಆಗಸ್ಟ್‌ 1ರಿಂದ ಅನ್ವಯವಾಗುವಂತೆ ತಕ್ಷಣಕ್ಕೆ ಜಾರಿಗೆ ಬರುವಂತೆ ಶನಿವಾರ ಆದೇಶಿಸಿಸಲಾಗಿದೆ.  ದೀಪಾವಳಿ ಹಬ್ಬ ಮತ್ತು ಪೊಲೀಸ್‌ ಹುತಾತ್ಮದಿನದ ಮುನ್ನಾ ದಿನ ಈ ಆದೇಶ ಹೊರ ಬಿದ್ದಿರುವುದು ಪೊಲೀಸ್ ಇಲಾಖೆಯ ನೌಕರಲ್ಲಿ ಹರ್ಷ ಮೂಡಿಸಿದೆ. ಪೊಲೀಸ್ ಇಲಾಖೆಯ ಎಲ್ಲಾ ಶ್ರೇಣಿಯ ಸಿಬ್ಬಂದಿಗೆ ಕಷ್ಟ ಪರಿಹಾರ ಭತ್ಯೆಯ ಜತೆಗೆ ಹೆಚ್ಚುವರಿಯಾಗಿ ₹ 1,000 ಮಂಜೂರು ಮಾಡಿದೆ.

ಪೊಲೀಸ್ ವೇತನ ಹೆಚ್ಚಳ ಬಗ್ಗೆ 2016ರ ಜೂನ್ 21ರಂದು ರಾಘವೇಂದ್ರ ಔರಾದ್ಕರ್ ಅಧ್ಯಕ್ಷತೆಯಲ್ಲಿ ಸಮಿತಿಯನ್ನು ರಚಿಸಲಾಗಿತ್ತು. ಸಮಿತಿಯು ಸರ್ಕಾರಕ್ಕೆ ವರದಿಯನ್ನು ಸಲ್ಲಿಸಿದೆ. ವರದಿಯ ಅನ್ವಯ ಸರ್ಕಾರ 2019ರ ಆಗಸ್ಟ್ 1ರಿಂದ ಜಾರಿಗೆ ಬರುವಂತೆ ವೇತನವನ್ನು ಉನ್ನತೀಕರಗೊಳಿಸಲಾಗಿದೆ.

ಈ ವರದಿ ಜಾರಿಯಿಂದಾಗಿ ಹೊಸದಾಗಿ ಸೇರುವ ಪೊಲೀಸ್‌ ಕಾನ್‌ಸ್ಟೆಬಲ್‌ಗಳಿಗೆ ಇರುವ ಮಾಸಿಕ ವೇತನದ ಒಟ್ಟು ₹ 30,427 ರಿಂದ  ಬದಲಿಗೆ ₹ 34,267 ಹೆಚ್ಚಳವಾಗಲಿದೆ.

Click to comment

Leave a Reply

Your email address will not be published. Required fields are marked *

More in ರಾಜ್ಯ ಸುದ್ದಿ

Advertisement Enter ad code here
Advertisement

ದಾವಣಗೆರೆ

Advertisement

ಪ್ರಮುಖ ಸುದ್ದಿ

Advertisement
Advertisement e
Advertisement
To Top