ಡಿವಿಜಿ ಸುದ್ದಿ, ಬೆಂಗಳೂರು: ಈ ಬಾರಿಯ ಎಸ್‌ಎಸ್‌ಎಲ್‌ಸಿ ಫಲಿತಾಂಶದಲ್ಲಿ ಎಂಟು ವಿದ್ಯಾರ್ಥಿಗಳು ಶೇ.100 ರಷ್ಟು ಅಂಕ ಗಳಿಸಿದ್ದಾರೆ.
ಈ ಬಾರಿ ಒಟ್ಟು 8.11 ಲಕ್ಷ ವಿದ್ಯಾರ್ಥಿಗಳು ಪರೀಕ್ಷೆ ಎದುರಿಸಿದ್ದರು. ಅದರಲ್ಲಿ 5,82,316 ವಿದ್ಯಾರ್ಥಿಗಳು ಪಾಸ್ ಆಗಿದ್ದು, 2,28,734 ಫೇಲ್ ಆಗಿದ್ದಾರೆ. ಇನ್ನು ಈ ಬಾರಿ ಒಟ್ಟು ಶೇ.71.80 ವಿದ್ಯಾರ್ಥಿಗಳು ಉತ್ತೀರ್ಣ ಆಗಿದ್ದಾರೆ. ಕಳೆದ ಸಲ ಶೇ 73.70 ವಿದ್ಯಾರ್ಥಿಗಳು ಪಾಸ್ ಆಗಿದ್ದರು. ಶೇ. 66.41 ಬಾಲಕರು ಮತ್ತು ಶೇ.77.74 ಬಾಲಕಿಯರು ಪಾಸ್ ಆಗಿದ್ದಾರೆ.
ಶೇ. 100ರಷ್ಟು ಅಂಕಗಳಿಸಿದ ವಿದ್ಯಾರ್ಥಿಗಳು
- ಸನ್ನಿಧಿ ಮಹಾಬಲೇಶ್ವರ ಹೆಗಡೆ – ಸರ್ಕಾರಿ ಮಾರಿಕಾಂಬಾ ಪಿಯು ಕಾಲೇಜು, ಶಿರಸಿ
- ಚೈತನ್ಯ ಕೆ.ಎಸ್.- ಸೇಂಟ್ ಮೇರಿ ಹೈಸ್ಕೂಲ್, ಬೆಂಗಳೂರು
- ನಿಖಿಲೇಶ್ ಎಂ.ಮರಳಿ -ಪೂರ್ಣಪ್ರಜ್ಞ ಶಿಕ್ಷಣ ಕೇಂದ್ರ, ಬೆಂಗಳೂರು
- ಧೀರಜ್ ರೆಡ್ಡಿ ಎಂ.ಪಿ- ಸತ್ಯಸಾಯಿ ಸರಸ್ವತಿ ಇಂಗ್ಲಿಷ್ ಮಾಧ್ಯಮ ಶಾಲೆ, ಮಂಡ್ಯ
- ಅನುಷ್ ಎ.ಎಲ್ -ಕುಮಾರಸ್ವಾಮಿ ಇಂಗ್ಲಿಷ್ ಮೀಡಿಯಂ ಸ್ಕೂಲ್, ಸುಳ್ಯ
- ತನ್ಮಯಿ ಐ.ಪಿ-ಸೇಂಟ್ ಜೋಸೆಫ್ ಕಾನ್ವೆಂಟ್, ಚಿಕ್ಕಮಗಳೂರು
- ಅನಿರುದ್ಧ ಸುರೇಶ್ ಗುತ್ತಿಕಾರ್ -ಪ್ರಶಾಂತಿ ಇಂಗ್ಲಿಷ್ ಮೀಡಿಯಂ ಶಾಲೆ, ಸಿದ್ದಾಪುರ
- ಅಮೋಘ ಜಿ.ಕೆ. ವಿವಿಎಸ್ ಸರ್ದಾರ್ ಪಟೇಲ್ ಇಂಗ್ಲಿಷ್ ಹೈಸ್ಕೂಲ್, ಬೆಂಗಳೂರು
11 ವಿದ್ಯಾರ್ಥಿಗಳು 624 ಅಂಕ
- ಜಿ.ಕೆ. ಅಮೋಘ್, ಬೆಂಗಳೂರು
- ಪ್ರಣವ್ ವಿಜಯ್ ನಾಡಿಗೇರ, ಬೆಂಗಳೂರು
- ಎಂ.ಡಿ. ವೀಣಾ, ಬೆಂಗಳೂರು
- ನಿಹಾರಿಕಾ ಸಂತೋಷ್ ಕುಲಕರ್ಣಿ, ಬೆಂಗಳೂರು
- ಎ.ಎಸ್. ಸ್ಫೂರ್ತಿ , ಬೆಂಗಳೂರು
- ಅನಿರುದ್ಧ್ ಸುರೇಶ್ ಗುತ್ತೀಕರ್, ಉತ್ತರ ಕನ್ನಡ
- ಜಿ.ಎಂ. ಮಹೇಶ್, ತುಮಕೂರು
- ಸುರಭಿ ಎಸ್.ಶೆಟ್ಟಿ ಉಡುಪಿ
- ಸುಮುಖ ಸುಬ್ರಹ್ಮಣ್ಯ ಶೆಟ್ಟಿ, ದಕ್ಷಿಣ ಕನ್ನಡ
- ನಿಧಿ ರಾವ್, ದಕ್ಷಿಣ ಕನ್ನಡ
- ಅಭಿರಾಮ ಟಿ.ಎಸ್, ಶಿವಮೊಗ್ಗ
kseeb.kar.nic.in, karresults.nic.in ಮತ್ತು results.nic.in ವೆಬ್‌ಸೈಟ್‌ಗಳಲ್ಲಿ ಫಲಿತಾಂಶ ಲಭ್ಯವಿದೆ.



