ನವದೆಹಲಿ: ಭಾರತೀಯ ಕ್ರಿಕೆಟ್ ತಂಡದ ಆಟಗಾರ ರೋಹಿತ್ ಶರ್ಮ, ಪ್ಯಾರಾ ಅಥ್ಲಿಟ್ ಮರಿಯಪ್ಪನ್ ಟಿ, ಟೇಬಲ್ ಟೆನಿಸ್ ಆಟಗಾರ್ತಿ ಮನಿಕಾ ಬಾತ್ರಾ, ಕುಸ್ತಿಪಟು ವಿನೇಶಾ ಪೋಗಟ್ ಮತ್ತು ಹಾಕಿ ಆಟಗಾರ್ತಿ ರಾಣಿ ಅವರು ಖೇಲ್ ರತ್ನ ಪುರಸ್ಕಾರಕ್ಕೆ ಪಾತ್ರರಾಗಿದ್ದು, ಇಶಾಂತ್ ಶರ್ಮಾ ಅವರಿಗೆ ಅರ್ಜುನ ಪ್ರಶಸ್ತಿ ಘೋಷಣೆ ಮಾಡಲಾಗಿದೆ
ದ್ರೋಣಾಚಾರ್ಯ ಪ್ರಶಸ್ತಿ
ಧರ್ಮೇಂದ್ರ ತಿವಾರಿ (ಬಿಲ್ಲುಗಾರಿಕೆ), ಪುರುಷೋತ್ತಮ ರಾಯ್ (ಆಥ್ಲೇಟಿಕ್ಸ್), ಶಿವ ಸಿಂಗ್ (ಬಾಕ್ಸಿಂಗ್) ರೊಮೆಶ್ ಪಾಠಾಣಿಯ (ಹಾಕಿ), ಕೃಷ್ಣ ಕುಮಾರ್ ಹೂಡಾ (ಕಬಡ್ಡಿ), ವಿಜಯ ಬಾಲಚಂದ್ರ ಮುನಿಶ್ವರ್ (ಪ್ಯಾರಾ ಪವರ್‌ಲಿಫ್ಟಿಂಗ್), ನರೇಶ್ ಕುಮಾರ್ (ಟೆನ್ನಿಸ್), ಓಮ್ ಪ್ರಕಾಶ್ ದಿಯಾ (ಕುಸ್ತಿ)
ಕ್ರೀಡಾ ಸಚಿವಾಲಯ ನೇಮಿಸಿದ್ದ ಪ್ರಶಸ್ತಿ ಆಯ್ಕೆ ಸಮಿತಿ ಶಿಫಾರಸುಗಳಿಗೆ ಇಲಾಖೆ ಶುಕ್ರವಾರ ಸಮ್ಮತಿ ಸೂಚಿಸಿದೆ.



