Connect with us

Dvgsuddi Kannada | online news portal | Kannada news online

ಡಿ.23 ರಿಂದ 26 ವರೆಗೆ ಕುವೆಂಪು ವಿವಿಯಲ್ಲಿ ಖೋ-ಖೋ ಪಂದ್ಯಾವಳಿ

ದಾವಣಗೆರೆ

ಡಿ.23 ರಿಂದ 26 ವರೆಗೆ ಕುವೆಂಪು ವಿವಿಯಲ್ಲಿ ಖೋ-ಖೋ ಪಂದ್ಯಾವಳಿ

ಡಿವಿಜಿ ಸುದ್ದಿ, ದಾವಣಗೆರೆ : ದಕ್ಷಿಣ ಭಾರತ ಅಂತರ ವಿಶ್ವವಿದ್ಯಾನಿಲಯದ ಖೋ-ಖೋ ಪಂದ್ಯಾವಳಿಗೆ ದಾವಣಗೆರೆ ಕ್ರೀಡಾ ವಸತಿ ನಿಲಯದ ಖೋ-ಖೋ ಕ್ರೀಡಾಪಟುಗಳು ಆಯ್ಕೆಯಾಗಿದ್ದಾರೆ.

ಡಿ.23 ರಿಂದ 26 ರವರೆಗೆ ಶಿವಮೊಗ್ಗ ಜಿಲ್ಲೆಯ  ಶಂಕರಘಟ್ಟದ ಕುವೆಂಪು ವಿಶ್ವವಿದ್ಯಾನಿಲಯದಲ್ಲಿ  ನಡೆಯುವ ಪುರುಷರ ದಕ್ಷಿಣ ಭಾರತ ಅಂತರ ವಿಶ್ವವಿದ್ಯಾನಿಲಯದ ಖೋ-ಖೋ ಪಂದ್ಯಾವಳಿ ನಡೆಯಲಿದೆ. ದಾವಣಗೆರೆ ವಿಶ್ವವಿದ್ಯಾನಿಲಯದ ತಂಡಕ್ಕೆ ದಾವಣಗೆರೆ ಕ್ರೀಡಾ ವಸತಿ ನಿಲಯದ
ಖೋ-ಖೋ ಕ್ರೀಡಾಪಟುಗಳಾದ ಬಾಷಿತ್ ಆಲಿ, ಅರುಣ ಜಿ.ಬಿ., ಭರತ್ ಕುಮಾರ್ ಪಿ.ಬಿ., ಬಾಹುಬಲಿ.ಎಸ್.ಬೀಳಗಿ, ಹನುಮಂತ. ಆರ್, ರಂಗಸ್ವಾಮಿ ಸಿ.ಎಂ., ವೀರೇಶ್, ಅರ್ಜುನ ಆಯ್ಕೆಯಾಗಿದ್ದಾರೆ.

ಖೋ-ಖೋ ಪಂದ್ಯಾವಳಿಯಲ್ಲಿ ದಾವಣಗೆರೆ ವಿಶ್ವವಿದ್ಯಾನಿಲಯ ತಂಡವು ವಿಜಯ ಸಾಧಿಸಲೆಂದು ಜಿಲ್ಲಾ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ಶ್ರೀನಿವಾಸ ಮತ್ತು ಇಲಾಖೆಯ ಎಲ್ಲಾ ತರಬೇತುದಾರರು ಹಾಗೂ ಸಿಬ್ಬಂದಿ ವರ್ಗದವರು ಶುಭ ಹಾರೈಸಿದ್ದಾರೆ.

Dvgsuddi.com is a live Kannada news portal. Kannada news online. political, information, crime, film, Sports News in Kannada

Click to comment

Leave a Reply

Your email address will not be published. Required fields are marked *

More in ದಾವಣಗೆರೆ

To Top