ಡಿವಿಜಿ ಸುದ್ದಿ, ದಾವಣಗೆರೆ : ದಕ್ಷಿಣ ಭಾರತ ಅಂತರ ವಿಶ್ವವಿದ್ಯಾನಿಲಯದ ಖೋ-ಖೋ ಪಂದ್ಯಾವಳಿಗೆ ದಾವಣಗೆರೆ ಕ್ರೀಡಾ ವಸತಿ ನಿಲಯದ ಖೋ-ಖೋ ಕ್ರೀಡಾಪಟುಗಳು ಆಯ್ಕೆಯಾಗಿದ್ದಾರೆ.
ಡಿ.23 ರಿಂದ 26 ರವರೆಗೆ ಶಿವಮೊಗ್ಗ ಜಿಲ್ಲೆಯ ಶಂಕರಘಟ್ಟದ ಕುವೆಂಪು ವಿಶ್ವವಿದ್ಯಾನಿಲಯದಲ್ಲಿ ನಡೆಯುವ ಪುರುಷರ ದಕ್ಷಿಣ ಭಾರತ ಅಂತರ ವಿಶ್ವವಿದ್ಯಾನಿಲಯದ ಖೋ-ಖೋ ಪಂದ್ಯಾವಳಿ ನಡೆಯಲಿದೆ. ದಾವಣಗೆರೆ ವಿಶ್ವವಿದ್ಯಾನಿಲಯದ ತಂಡಕ್ಕೆ ದಾವಣಗೆರೆ ಕ್ರೀಡಾ ವಸತಿ ನಿಲಯದ
ಖೋ-ಖೋ ಕ್ರೀಡಾಪಟುಗಳಾದ ಬಾಷಿತ್ ಆಲಿ, ಅರುಣ ಜಿ.ಬಿ., ಭರತ್ ಕುಮಾರ್ ಪಿ.ಬಿ., ಬಾಹುಬಲಿ.ಎಸ್.ಬೀಳಗಿ, ಹನುಮಂತ. ಆರ್, ರಂಗಸ್ವಾಮಿ ಸಿ.ಎಂ., ವೀರೇಶ್, ಅರ್ಜುನ ಆಯ್ಕೆಯಾಗಿದ್ದಾರೆ.
ಖೋ-ಖೋ ಪಂದ್ಯಾವಳಿಯಲ್ಲಿ ದಾವಣಗೆರೆ ವಿಶ್ವವಿದ್ಯಾನಿಲಯ ತಂಡವು ವಿಜಯ ಸಾಧಿಸಲೆಂದು ಜಿಲ್ಲಾ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ಶ್ರೀನಿವಾಸ ಮತ್ತು ಇಲಾಖೆಯ ಎಲ್ಲಾ ತರಬೇತುದಾರರು ಹಾಗೂ ಸಿಬ್ಬಂದಿ ವರ್ಗದವರು ಶುಭ ಹಾರೈಸಿದ್ದಾರೆ.



