ನವದೆಹಲಿ: ಬಾರಿಯ ಐಪಿಎಲ್ ಆವೃತ್ತಿಯ ಪ್ರಾಯೋಜಕತ್ವಕ್ಕೆ ಯೋಗ ಗುರು ಬಾಬಾ ರಾಮ್‌ದೇವ್ ಅವರ ಪತಂಜಲಿ ಆಯುರ್ವೇದ ಬಿಡ್ಡಿಂಗ್ ಸಲ್ಲಿಸಲು ಚಿಂತನೆ ನಡೆಸಿದೆ.
ಚೀನಾದ ಮೊಲೈಲ್ ತಯಾರಿಕಾ ಕಂಪನಿ ವಿವೋ , ಈ ಬಾರಿಯ ಐಪಿಎಲ್ ಪ್ರಾಯೋಜಕತ್ವದಿಂದ ಹಿಂದೆ ಸರಿದ ಹಿನ್ನೆಲೆ ಬಿಸಿಸಿಐ ಹೊಸ ಪ್ರಾಯೋಜಕತ್ವಕ್ಕೆ ಹುಡುಕಾಟ ಆರಂಭಿಸಿದೆ. ಪೂರ್ವ ಲಡಾಖ್‌ನ ಗಾಲ್ವನ್ ಕಣಿವೆಯಲ್ಲಿ ಭಾರತ–ಚೀನಾ ಸೇನಾ ನಡುವಿನ ಸಂಘರ್ಷ ಬಳಿಕ ಚೀನಾ ಉತ್ಪನ್ನಗಳನ್ನು ಬಹಿಷ್ಕರಿಸಬೇಕೆಂಬ ಕರೆ ದೇಶದಲ್ಲಿ ತೀವ್ರಗೊಂಡಿತ್ತು. ಈ ಹಿನ್ನೆಲೆ ಐಪಿಎಲ್ ಪ್ರಾಯೋಜಕತ್ವದಿಂದ ವಿವೋ ಹಿಂದೆ ಸರಿದಿತ್ತು.

ರಾಮದೇವ್ ಅವರ ಪತಂಜಲಿ ಬ್ರಾಂಡ್‌ಗೆ ಜಾಗತಿಕ ಮಾರುಕಟ್ಟೆ ಕಲ್ಪಿಸುವ ಸಲುವಾಗಿ ಈ ವರ್ಷದ ಐಪಿಎಲ್ ಪ್ರಾಯೋಜಕತ್ವ ವಹಿಸುವ ಬಗ್ಗೆ ಚಿಂತನೆ ನಡೆಸಲಾಗುತ್ತಿದೆ ಎಂದು ಕಂಪನಿಯ ವಕ್ತಾರ ಎಸ್.ಕೆ.ತಿಜಾರಾವಾಲ ಹೇಳಿದ್ದಾರೆ. ಈ ಬಾರಿಯ ಐಪಿಎಲ್ ಪ್ರಾಯೋಜಕತ್ವಕ್ಕೆ ಜಿಯೋ, ಅಮೆಜಾನ್, ಟಾಟಾ ಗ್ರೂಪ್ ಮತ್ತು ಅದಾನಿ ಗ್ರೂಪ್ ಸಹ ಸ್ಪರ್ಧೆಯಲ್ಲಿವೆ.



