ನ್ಯೂಜಿಲೆಂಡ್ ವಿರುದ್ಧ ಭಾರತಕ್ಕೆ ಭರ್ಜರಿ ಜಯ;  ಸರಣಿ ಕ್ಲೀನ್‍ಸ್ವಿಪ್: ಮಿಂಚಿದ ರಾಹುಲ್, ರೋಹಿತ್ ,ಸೈನಿ..!

Dvgsuddi
By
Dvgsuddi
ಲೋಕಲ್ ಸುದ್ದಿಗಳನ್ನು ಕ್ಷಣಾರ್ಧದಲ್ಲಿ ಲೋಕದ ಜನರ ಬೆರಳ ತುದಿಗೆ ತಲುಪಿಸುವ ಉದ್ದೇಶದಿಂದ ಡಿವಿಜಿಸುದ್ದಿ.ಕಾಂ ಕನ್ನಡ ಆನ್ ಲೈನ್ ನ್ಯೂಸ್ ಪೋರ್ಟಲ್ (ಡಿಜಿಟಲ್ ಮಾಧ್ಯಮ) ಸ್ಥಾಪಿಸಲಾಗಿದೆ. ಸ್ಥಳೀಯ ಸುದ್ದಿ ಜೊತೆ ಇನ್ಫೋರ್ಮೆಟಿವ್ ನ್ಯೂಸ್ ಕೊಡುವುದು ಮೊದಲ ಆದ್ಯತೆ....
3 Min Read

ಮೌಂಟ್ ಮಾಂಗನುಯಿ: ಭಾರತ 5 ಪಂದ್ಯಗಳ ಸರಣಿಯಲ್ಲಿ ಕ್ಲೀನ್ ಸ್ವಿಪ್ ಮಾಡುವ ಮೂಲಕ ಭರ್ಜರಿ ಜಯ ಗಳಿಸಿದೆ. ಇದೇ ಮೊದಲ ಸಾಲ ನಾಯಕತ್ವ ವಹಿಸಿಕೊಂಡ ಕೆ.ಎಲ್ ರಾಹುಲ್, ರೋಹಿತ್ ಶರ್ಮಾ ಭರ್ಜರಿ ಬ್ಯಾಟಿಂಗ್ ಹಾಗೂ ಜಸ್‍ಪ್ರೀತ್ ಬುಮ್ರಾ, ನವದೀಪ್ ಸೈನಿ ಸೂಪರ್  ಬೌಲಿಂಗ್‍ ಮೂಲಕ ಟೀಂ ಇಂಡಿಯಾ ನ್ಯೂಜಿಲೆಂಡ್ ವಿರುದ್ಧ 7 ವಿಕೆಟ್‍ಗಳ ಭರ್ಜರಿ ಜಯ ದಾಖಲಿಸಿತು.

ಇಂದು ನ್ಯೂಜಿಲೆಂಡ್ ನ ಮೌಂಟ್ ಮಾಂಗನುಯಿನಲ್ಲಿ ನಡೆದ 5 ನೇ ಟಿ20 ಪಂದ್ಯದಲ್ಲಿ  ಟೀಂ ಇಂಡಿಯಾ ಭರ್ಜರಿ  ಗೆಲುವು ಸಾಧಿಸಿತು.  ಈ ಮೂಲಕ ಸರಣಿಯನ್ನು 5-0 ಅಂತರದಿಂದ ಗೆದ್ದು ನ್ಯೂಜಿಲೆಂಡ್ ಗೆ ತವರು ನೆಲದಲ್ಲಿ ಬಿಗ್ ಶಾಕ್ ನೀಡಿದೆ.  ಭಾರತ ನೀಡಿದ್ದ 163 ರನ್‍ಗಳ ಗುರಿಯನ್ನು ಸಾವಾಲಿನ ಗುರು ಬೆನ್ನಟ್ಟಿದ ನ್ಯೂಜಿಲೆಂಡ್ ನಿಗದಿತ 20 ಓವರ್ ಗಳಲ್ಲಿ 9 ವಿಕೆಟ್‍ಗೆ ಕೇವಲ 156 ರನ್ ಗಳಿಸಲಷ್ಟೇ ಸಾಧ್ಯವಾಯಿತು.

rahul 1

ಟಾಸ್ ಗೆದ್ದ ಭಾರತ ಮೊದಲು ಬ್ಯಾಟಿಂಗ್ ಮಾಡಿ ಕ್ಕೆ ಆರಂಭಿಕರಾಗಿ ಕೆ.ಎಲ್.ರಾಹುಲ್ ಜೊತೆ ಬಂದ ಸಂಜು ಸ್ಯಾಮ್ಸನ್ ಬಂದರು. ಸ್ಯಾಮ್ಸನ್  ಮತ್ತೆ ಬ್ಯಾಟಿಂಗ್ ವೈಫಲ್ಯ ಅನುಭವಿಸಿದರು. ಹಿಟ್ ಮ್ಯಾನ್ ರೋಹಿತ್ ಶರ್ಮಾ ಔಟಾಗದೆ 60 ರನ್ (41 ಎಸೆತ, 3 ಬೌಂಡರಿ, 3 ಸಿಕ್ಸರ್), ಕೆ.ಎಲ್.ರಾಹುಲ್ (45 ರನ್, 33 ಎಸೆತ) ಕೊನೆಯಲ್ಲಿ ಮನೀಶ್ ಪಾಂಡೆ ಔಟಾಗದೇ 11 ರನ್ ಮತ್ತು ಶ್ರೇಯಸ್ ಅಯ್ಯರ್ 33 ರನ್ ಗಳ ನೆರವಿನಿಂದ ಟೀಮ್ ಇಂಡಿಯಾ  3 ವಿಕೆಟ್ ನಷ್ಟಕ್ಕೆ 163ರನ್ ಪೇರಿಸಿತ್ತು.

ಟೀಂ ಇಂಡಿಯಾ ನೀಡಿದ್ದ 164 ರನ್‍ಗಳ ಗುರಿ ಬೆನ್ನಟ್ಟಿದ ನ್ಯೂಜಿಲೆಂಡ್ ತಂಡವು ಮಾರ್ಟಿನ್ ಆರಂಭದಲ್ಲೇ ಓಪನರ್ ಬ್ಯಾಟ್ಸ್‌ಮನ್‌ ಗಪ್ಟಿಲ್ ವಿಕೆಟ್ ಕಳೆದುಕೊಂಡು ಆಘಾತಕ್ಕೆ ಒಳಗಾಗಿತ್ತು.   ಟಿಮ್ ಸೀಫರ್ಟ್ ವಿಕೆಟ್ ಕಾಯ್ದುಕೊಂಡು ತಂಡದ ರನ್ ಮೊತ್ತ ಹೆಚ್ಚಿಸಿದರು.  ಆದರೆ 15 ರನ್ ಗಳಿದ್ದ ಕಾಲಿನ್ ಮನ್ರೊ ಕೂಡ ವಿಕೆಟ್ ಒಪ್ಪಿಸಿ ಪೆವಿಲಿಯನ್‍ಗೆ ತೆರಳಿದರು. ಬಳಿಕ ಮೈದಾಕ್ಕಿಳಿದ ಟಾಮ್ ಬೂಸ್ ಯಾವುದೇ ರನ್ ಗಳಿಸದೆ ವಿಕೆಟ್ ಒಪ್ಪಿಸಿದರು. ನ್ಯೂಜಿಲೆಂಡ್ 3 ವಿಕೆಟ್‍ಗೆ ಕೇವಲ 17 ರನ್ ಗಳಿಸಿತು.ಸಂಕಷಷ್ಟಕ್ಕೆ ಸಿಲುಕಿದ್ದ ತಂಡಕ್ಕೆ ಟಿಮ್ ಸೀಫರ್ಟ್ ಹಾಗೂ ರಾಸ್ ಟೇಲರ್ ಉತ್ತಮ ಜೊತೆಯಾಟ ನೀಡಿದರು. ನಾಲ್ಕನೇ ವಿಕೆಟ್‍ಗೆ ಈ ಜೋಡಿಯು 99 ರನ್‍ಗಳ ಜೊತೆಯಾಟದ ಕೊಡುಗೆ ನೀಡಿತು. ಈ ಜೋಡಿಯು ಶಿವಂ ದುಬೆ ಎಸೆದ ಇನ್ನಿಂಗ್ಸ್ ನ 10ನೇ ಓವರಿನಲ್ಲಿ ನಾಲ್ಕು ಸಿಕ್ಸರ್, ಎರಡು ಬೌಂಡರಿ ಸೇರಿ ಒಟ್ಟು 34 ರನ್ ಚಚ್ಚಿದರು.

ಮತ್ತೆ  ಸೈನಿ ಶೈನ್:
ವಿಶ್ವಾಸದಿಂದ ಬ್ಯಾಟ್ ಬೀಸುತ್ತಿದ್ದ ಸೀಫರ್ಟ್ ಹಾಗೂ ಟೇಲರ್ ಜೊತೆಯಾಟವನ್ನು ನವದೀಪ್ ಸೈನಿ ಮುರಿದರು. ಸೀಫರ್ಟ್ 50 ರನ್ (30 ಎಸೆತ, 5 ಬೌಂಡರಿ, 3 ಸಿಕ್ಸರ್) ಗಳಿಸಿ ವಿಕೆಟ್ ಒಪ್ಪಿಸಿದರು. ಈ ಬೆನ್ನಲ್ಲೇ ನ್ಯೂಜಿಲೆಂಡ್ ಬ್ಯಾಟ್ಸ್‌ಮನ್‌ಗಳು ಪೆವಿಲಿಯನ್ ಸೇರಿದರು. ಇನ್ನಿಂಗ್ಸ್ ನ 17ನೇ ಓವರಿನ ಮೊದಲ ಎಸೆತದಲ್ಲೇ ಸೈನಿ 53 ರನ್ ಗಳಿಸಿದ್ದ ಟೇಲರ್ ವಿಕೆಟ್ ಕಿತ್ತು. ಪಂದ್ಯಕ್ಕೆ ತಿರುವು ನೀಡಿದರು.

14 ಸಾವಿರ ರನ್ ದಾಖಲೆ ಬರೆದ ರೋಹಿತ್ :35ನೇ ಎಸೆತದಲ್ಲಿ ಅರ್ಧ ಶತಕಗಳಿಸುವ ಮೂಲಕ ರೋಹಿತ್ ಶರ್ಮಾ ಟಿ20ಯಲ್ಲಿ ತಮ್ಮ ವೃತ್ತಿ ಜೀವನದ 25ನೇ ಅರ್ಧ ಶತಕವನ್ನು ದಾಖಲಿಸಿದರು. ಇದುವರೆಗೂ ವಿರಾಟ್ ಕೊಹ್ಲಿ  24 ಅರ್ಧ ಶತಕ ಗಳಿಸಿದ್ದಾರೆ. ಇದರ ಜೊತೆಗೆ ಅಂತರಾಷ್ಟ್ರೀಯ ಕ್ರಿಕೆಟ್ ನಲ್ಲಿ 14 ಸಾವಿರ ರನ್ ಗಳಿಸಿದ ಭಾರತೀಯ ಆಟಗಾರರ ಪಟ್ಟಿಯಲ್ಲಿ ರೋಹಿತ್ ಶರ್ಮಾ ಎಂಟನೇ ಸ್ಥಾನ ಪಡೆದಿದ್ದಾರೆ . ಕಾಲಿನ ಹಿಂಭಾಗದಲ್ಲಿ ರೋಹಿತ್ ಶರ್ಮಾರಿಗೆ ಆಟ ಮುಂದುವರಿಸಲಾಗಲಿಲ್ಲ.

Share This Article
Follow:
ಲೋಕಲ್ ಸುದ್ದಿಗಳನ್ನು ಕ್ಷಣಾರ್ಧದಲ್ಲಿ ಲೋಕದ ಜನರ ಬೆರಳ ತುದಿಗೆ ತಲುಪಿಸುವ ಉದ್ದೇಶದಿಂದ ಡಿವಿಜಿಸುದ್ದಿ.ಕಾಂ ಕನ್ನಡ ಆನ್ ಲೈನ್ ನ್ಯೂಸ್ ಪೋರ್ಟಲ್ (ಡಿಜಿಟಲ್ ಮಾಧ್ಯಮ) ಸ್ಥಾಪಿಸಲಾಗಿದೆ. ಸ್ಥಳೀಯ ಸುದ್ದಿ ಜೊತೆ ಇನ್ಫೋರ್ಮೆಟಿವ್ ನ್ಯೂಸ್ ಕೊಡುವುದು ಮೊದಲ ಆದ್ಯತೆ. ಇದಲ್ಲದೆ ರಾಜಕೀಯ, ಶಿಕ್ಷಣ, ಉದ್ಯೋಗ, ಕ್ರೀಡೆ, ಅಪರಾಧ ಸುದ್ದಿ ಹಾಗೂ ವಿಶೇಷವಾಗಿ ಕೃಷಿ ಮತ್ತು ರೈತರಿಗೆ ಉಪಯುಕ್ತ ಮಾಹಿತಿ ನೀಡುವುದು ಮುಖ್ಯ ಉದ್ದೇಶ. ಸುದ್ದಿ, ಮಾಹಿತಿ, ಸಲಹೆ, ಸೂಚನೆ ನೀಡಲು ವಾಟ್ಸಾಪ್ (7483892205) ಮಾಡಿ... Editor: munikondajji, MA journalism, contact number:7483892205, e-mail: dvgsuddi@gmail.com
Leave a Comment

Leave a Reply

Your email address will not be published. Required fields are marked *