Connect with us

Dvgsuddi Kannada | online news portal | Kannada news online

ಶ್ರೇಯಸ್ , ಕೊಹ್ಲಿ, ರಾಹುಲ್ ಸೂಪರ್ ಬ್ಯಾಟಿಂಗ್:ನ್ಯೂಜಿಲೆಂಡ್ ಗೆ 348 ರನ್ ಗುರಿ

ಪ್ರಮುಖ ಸುದ್ದಿ

ಶ್ರೇಯಸ್ , ಕೊಹ್ಲಿ, ರಾಹುಲ್ ಸೂಪರ್ ಬ್ಯಾಟಿಂಗ್:ನ್ಯೂಜಿಲೆಂಡ್ ಗೆ 348 ರನ್ ಗುರಿ

ಹ್ಯಾಮಿಲ್ಟನ್: ನ್ಯೂಜಿಲೆಂಡ್‌ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಟೀ ಇಂಡಿಯಾ ಭರ್ಜರಿ ಬ್ಯಾಂಟಿಂಗ್ ಮಾಡಿದ್ದು,  ಟೀಂ ಇಂಡಿಯಾದ ಶ್ರೇಯಸ್ ಅಯ್ಯರ್ ಮೊದಲ ಶತಕ, ನಾಯಕ ವಿರಾಟ್‌ ಕೊಹ್ಲಿ ಹಾಗೂ ಕೆ.ಎಲ್. ರಾಹುಲ್ ಅವರ ಅರ್ಧಶದಿಂದ ನೆರವಿನಿಂದ ಟೀಂ ಇಂಡಿಯಾ  50 ಓವರ್‌ಗಳಲ್ಲಿ 4 ವಿಕೆಟ್‌ ಕಳೆದುಕೊಂಡು 347 ರನ್‌ ಗಳ ಬೃಹತ್ ಮೊತ್ತ ದಾಖಲಿಸಿದೆ.

ಟಾಸ್‌ ಸೋತ ಟೀಂ ಇಂಡಿಯಾಗೆ ಮೊದಲು ಬ್ಯಾಟಿಂಗ್ ಮಾಡಲು ನ್ಯೂಜಿಲೆಂಡ್ ನಾಯಕ ಟಾಮ್‌ ಲಾಥಮ್‌ ಅವಕಾಶ ನೀಡಿದರು. ಈ ಅವಕಾಶವನ್ನು ಸರಿಯಾಗಿ ಸದುಪಯೋಗ ಪಡಿಸಿಕೊಂಡ ಇಂಡಿಯಾ, ಭರ್ಜರಿ ಮೊತ್ತ ಸೇರಿಸಿ ಸವಾಲಿನ ಗುರಿ ನೀಡಿತು.  ಟೆಸ್ಟ್ ಕ್ರಿಕೆಟ್ ನಲ್ಲಿ ಓಪನರ್ ಆಗಿ ಮಿಂಚಿದ್ದ  ಪೃಥ್ವಿ ಶಾ ಮತ್ತು ಮಯಂಕ್ ಅಗರವಾಲ್‌ ಭಾರತ ಪರ ಮೊದಲ ಏಕ ದಿನ ಪಂದ್ಯವಾಡಿದರು. ಮೊದಲ ವಿಕೆಟ್ ಗೆ 50 ರನ್‌ ಕಲೆಹಾಕಿತು, ಪೃಥ್ವಿ ಶಾ 20 ರನ್‌ ಗಳಿಸಿದರೆ, ಮಯಂಕ್‌ ಅಗರವಾಲ್  32 ರನ್‌ ಕೊಡುಗೆ ನೀಡಿದರು.

1 one day 3

1 one day 2

ಶಾ,ಅಗರವಾಲ್  ಬಳಿಕ ನಾಯಕ ಕೊಹ್ಲಿ, ಶ್ರೇಯಸ್‌ ಅಯ್ಯರ್‌ ಜೊತೆಗೂಡಿ ಮೂರನೇ ವಿಕೆಟ್‌ 102 ರನ್ ಸೇರಿಸಿದರು.   51 ರನ್‌ ಗಳಿಸಿದ ಕೊಹ್ಲಿ ಏಕದಿನ ಕ್ರಿಕೆಟ್‌ನಲ್ಲಿ 58ನೇ ಅರ್ಧ ಶತಕ ಸಿಡಿಸಿ ಔಟಾದರು. ನಂತರ ಬಂದ ರಾಹುಲ್‌, ಶ್ರೇಯಸ್ ಜೊತೆ ಸೂಪರ್ ಬ್ಯಾಂಟಿಂಗ್ ನಡೆಸಿ 300 ಗಡಿ ದಾಟಿಸಿದರು. ಈ ಇಬ್ಬರೂ ಐದನೇ ವಿಕೆಟ್‌ಗೆ 146 ರನ್‌ ಸೇರಿಸಿದರು. ಶ್ರೇಯಸ್  107 ಎಸೆತಗಳಲ್ಲಿ 11 ಬೌಂಡರಿ ಹಾಗೂ 1 ಸಿಕ್ಸರ್‌ ಸೇರಿ 103 ರನ್‌ ಗಳಿಸಿದರು ಈ ಮೂಲಕ ತಮ್ಮ ಮೊದಲ ಶತಕದ ಬಾರಿಸಿ  ಸಂಭ್ರಮಿಸಿದರು. ಕೊನೆಯಲ್ಲಿ  ರಾಹುಲ್‌, ಕೇದಾರ್‌ ಜಾಧವ್‌  ಉತ್ತಮ ಬ್ಯಾಟಿಂಗ್ ನಿಂದ ಭಾರತ 347 ರನ್ ಗಳಿಸಿ, ನ್ಯೂಜಿಲೆಂಡ್ ಗೆ ಸವಾಲಿನ ಮೊತ್ತ ನೀಡಿದೆ.

 

ಲೋಕಲ್ ಸುದ್ದಿಗಳನ್ನು ಕ್ಷಣಾರ್ಧದಲ್ಲಿ ಲೋಕದ ಜನರ ಬೆರಳ ತುದಿಗೆ ತಲುಪಿಸುವ ಉದ್ದೇಶದಿಂದ ಡಿವಿಜಿಸುದ್ದಿ.ಕಾಂ ಕನ್ನಡ ಆನ್ ಲೈನ್ ನ್ಯೂಸ್ ಪೋರ್ಟಲ್ (ಡಿಜಿಟಲ್ ಮಾಧ್ಯಮ) ಸ್ಥಾಪಿಸಲಾಗಿದೆ. ಸ್ಥಳೀಯ ಸುದ್ದಿ ಜೊತೆ ಇನ್ಫೋರ್ಮೆಟಿವ್ ನ್ಯೂಸ್ ಕೊಡುವುದು ಮೊದಲ ಆದ್ಯತೆ. ಇದಲ್ಲದೆ ರಾಜಕೀಯ, ಶಿಕ್ಷಣ, ಉದ್ಯೋಗ, ಕ್ರೀಡೆ, ಅಪರಾಧ ಸುದ್ದಿ ಹಾಗೂ ವಿಶೇಷವಾಗಿ ಕೃಷಿ ಮತ್ತು ರೈತರಿಗೆ ಉಪಯುಕ್ತ ಮಾಹಿತಿ ನೀಡುವುದು ಮುಖ್ಯ ಉದ್ದೇಶ. ಸುದ್ದಿ, ಮಾಹಿತಿ, ಸಲಹೆ, ಸೂಚನೆ ನೀಡಲು ವಾಟ್ಸಾಪ್ (7483892205) ಮಾಡಿ... Editor: munikondajji, MA journalism, contact number:7483892205, e-mail: dvgsuddi@gmail.com

Click to comment

Leave a Reply

Your email address will not be published. Required fields are marked *

More in ಪ್ರಮುಖ ಸುದ್ದಿ

  • astrology today astrology today

    ಪ್ರಮುಖ ಸುದ್ದಿ

    ಭಾನುವಾರದ ರಾಶಿ ಭವಿಷ್ಯ 01 ಜೂನ್ 2025

    By

    ಈ ರಾಶಿಯವರಿಗೆ ವಿದೇಶ ಯೋಗ, ಈ ರಾಶಿಯವರಿಗೆ ಮದುವೆ ಯೋಗ, ರಾಶಿಯ ದಂಪತಿಗಳಿಗೆ ಸಂತಾನ ಭಾಗ್ಯ, ಭಾನುವಾರದ ರಾಶಿ ಭವಿಷ್ಯ 01...

  • astrology today astrology today

    ಪ್ರಮುಖ ಸುದ್ದಿ

    ಶನಿವಾರದ ರಾಶಿ ಭವಿಷ್ಯ 31 ಮೇ 2025

    By

    ಈ ರಾಶಿಯ ಕಲಾವಿದರಿಗೆ ಶುಭ ಸಂದೇಶ, ಈ ರಾಶಿಯವರಿಗೆ ಎಲ್ಲಾ ಇದ್ದು ಏನೂ ಕೈಗೂಡುತ್ತಿಲ್ಲ, ಶನಿವಾರದ ರಾಶಿ ಭವಿಷ್ಯ 31 ಮೇ...

  • astrology today astrology today

    ಪ್ರಮುಖ ಸುದ್ದಿ

    ಶುಕ್ರವಾರದ ರಾಶಿ ಭವಿಷ್ಯ 30 ಮೇ 2025

    By

    ಈ ರಾಶಿಯವರ ವ್ಯಾಪಾರಕ್ಕೆ ಗ್ರಾಹಕರ ಕೊರತೆ, ಈ ರಾಶಿಯವರ ಮದುವೆಗೆ ಬಂದ ಸಂಬಂಧ ಫಿಕ್ಸ್ ಆಗುತ್ತಿಲ್ಲ , ಶುಕ್ರವಾರದ ರಾಶಿ ಭವಿಷ್ಯ...

  • images 11 images 11

    ಪ್ರಮುಖ ಸುದ್ದಿ

    ಗಜಕೇಸರಿ ಯೋಗ ಮಾಹಿತಿ

    By

    ಸೋಮಶೇಖರ್B.Sc ವಂಶಪಾರಂಪರಿಕ ಜ್ಯೋತಿಷ್ಯಶಾಸ್ತ್ರ, ವಾಸ್ತುಶಾಸ್ತ್ರ ಹಾಗೂ ಸಂಖ್ಯಾಶಾಸ್ತ್ರಪ್ರವೀಣರು. Mob.93534 88403 ವ್ಯಕ್ತಿಯ ಜನ್ಮ ಕುಂಡಲಿಯನ್ನು ನೋಡಿ ಯೋಗಗಳನ್ನು ನೋಡಬಹುದು. ಅದರಲ್ಲಿ ಒಂದು...

  • astrology today astrology today

    ಪ್ರಮುಖ ಸುದ್ದಿ

    ಗುರುವಾರದ ರಾಶಿ ಭವಿಷ್ಯ 29 ಮೇ 2025

    By

    ಈ ರಾಶಿಯವರಿಗೆ ಬಂಪರ್, ಈ ರಾಶಿಯವರಿಗೆ ಮದುವೆ ಯೋಗ, ಈ ರಾಶಿ ದಂಪತಿಗಳಿಗೆ ಸಂತಾನ ಭಾಗ್ಯ, ಗುರುವಾರದ ರಾಶಿ ಭವಿಷ್ಯ 29...

To Top