ಡಿವಿಜಿ ಸುದ್ದಿ, ದಾವಣಗೆರೆ : ಕುವೆಂಪು ವಿಶ್ವವಿದ್ಯಾನಿಲಯ ನಡೆದ ದಕ್ಷಿಣ ವಲಯದ ಅಂತರ ವಿಶ್ವವಿದ್ಯಾನಿಲ ಖೋ-ಖೋ ಪಂದ್ಯಾವಳಿಯಲ್ಲಿ ದಾವಣಗೆರೆ ವಿಶ್ವವಿದ್ಯಾನಿಲಯದ ಪುರುಷರ ತಂಡ ತೃತೀಯ ಸ್ಥಾನ ಹಾಗೂ ಅಖಿಲಭಾರತ ಅಂತರ ವಿಶ್ವವಿದ್ಯಾನಿಲಯ ಪಂದ್ಯಾವಳಿಯಲ್ಲಿಯೂ ತೃತೀಯ ಸ್ಥಾನವನ್ನು ಪಡೆದಿದೆ.
ತಂಡದ ಎಲ್ಲಾ ಆಟಗಾರರಿಗೆ ಮತ್ತು ತಂಡದ ಮ್ಯಾನೇಜರ್ ಬಸವರಾಜ್ ವಿ ದಮ್ಮಳ್ಳಿ, ತಂಡದ ಕೋಚ್ ಹೆಚ್.ತಿಪ್ಪೇಸ್ವಾಮಿಯವರಿಗೆ, ಕುಲಪತಿ ಪ್ರೊ.ಎಸ್.ವಿ. ಹಲಸೆ ಅಭಿನಂದನೆ ಸಲ್ಲಿಸಿದರು. ಈ ಸಂದರ್ಭದಲ್ಲಿ ಕುಲಸಚಿವ ಪ್ರೊ. ಬಸವರಾಜ್ ಬಣಕಾರ್, ಪರೀಕ್ಷಾಂಗ ಕುಲಸಚಿವ ಪ್ರೊ.ಅನಿತಾ ಹೆಚ್.ಎಸ್ , ಡೀನ್ ಡಾ. ಕೆ.ಬಿ. ರಂಗಪ್ಪ, ದೈಹಿಕ ಶಿಕ್ಷಣ ನಿರ್ದೇಶಕ ಡಾ. ಎಂ.ಎಸ್. ರಾಜ್‍ಕುಮಾರ್ ಹಾಗೂ ವಿಶ್ವವಿದ್ಯಾನಿಲಯ ಅಧಿಕಾರಿ ವೃಂದದವರು ಉಪಸ್ಥಿತರಿದ್ದರು.



