ನವದೆಹಲಿ: ಭಾರತ ಕ್ರಿಕೆಟ್ ತಂಡ ಮೂರು ಮಾದರಿಯ ಕ್ರಿಕೆಟ್ ನಲ್ಲಿ ಯಶಸ್ಸು ಸಾಧಿಸಲು, ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ, ಎನ್‌ಸಿಎ ಮುಖ್ಯಸ್ಥ ರಾಹುಲ್ ದ್ರಾವಿಡ್ ಜೊತೆಯಾಟ ಅತಿ ಮುಖ್ಯ ಎಂದು ಮಾಜಿ ಕ್ರಿಕೆಟಿಗ ವಿವಿಎಸ್ ಲಕ್ಷ್ಮಣ್ ಅಭಿಪ್ರಾಯಪಟ್ಟಿದ್ದಾರೆ.

ಕಳೆದ ವರ್ಷ ಅಕ್ಟೋಬರ್‌ನಲ್ಲಿ ಬಿಸಿಸಿಐನ ಅಧ್ಯಕ್ಷರಾಗಿ ಗಂಗೂಲಿ ನೇಮಕವಾಗಿದ್ದರು. ಜುಲೈನಲ್ಲಿ ದ್ರಾವಿಡ್ ಎನ್‌ಸಿಎ ಜವಾಬ್ದಾರಿ ವಹಿಸಿಕೊಂಡಿದ್ದರು. ಈ ಬಗ್ಗೆ ಸಂದರ್ಶನ ಒಂದರಲ್ಲಿ ಮಾತನಾಡಿದ ಅವರು ಮಾತನಾಡಿರುವ ಅವರು, ಗಂಗೂಲಿ ಮತ್ತು ದ್ರಾವಿಡ್ ಜೊಡಿ ಶ್ರೇಷ್ಠವಾದದ್ದು, ಭಾರತ ತಂಡ ಯಶಸ್ಸುಗಳಿಸಬೇಕಿದ್ದರೆ, ಈ ಜೊತೆಯಾಟ ತುಂಬಾ ಮುಖ್ಯ. ತಂಡದ ನಾಯಕ, ಬಿಸಿಸಿಐ ಅಧ್ಯಕ್ಷ, ಎನ್‌ಸಿಯ ಮುಖ್ಯಸ್ಥ ಎಲ್ಲರೂ ಮುಖ್ಯ ಎಂದು ನನಗನಿಸುತ್ತದೆಎಂದು ಹೇಳಿದ್ದಾರೆ.




