ನವದೆಹಲಿ: ಬಾಂಗ್ಲಾದೇಶ ಪಿತಾಮಹ ಶೇಖ್ ಮುಜಿಬುರ್ ರಹ್ಮಾನ್ ಅವರ ಜನ್ಮ ಶತಮಾನೋತ್ಸವ ಅಂಗವಾಗಿ ಬಾಂಗ್ಲಾದೇಶ ಕ್ರಿಕೆಟ್ ಮಂಡಳಿ (ಬಿಸಿಬಿ) ಆಯೋಜಿಸಿರುವ ಇಲವೆನ್ ಮತ್ತು ಏಷ್ಯಾ ಇಲವೆನ್ ನಡುವಣ ಟಿ20 ಕ್ರಿಕೆಟ್ ಟೂರ್ನಿಯಲ್ಲಿ ಪಾಕಿಸ್ತಾನ ಆಟಗಾರರಿಗೆ ಸ್ಥಾನ ಇಲ್ಲ ಬಿಸಿಸಿಐ ಸ್ಪಷ್ಟಪಡಿಸಿದೆ.
ಬಿಸಿಬಿಯ ಈ ಟೂರ್ನಿಗೆ ಅಂತರರಾಷ್ಟ್ರೀಯ ಸ್ಥಾನಮಾನ ಸಿಕ್ಕಿದ್ದು, ಭಾರತ ಮತ್ತು ಪಾಕಿಸ್ತಾನ ಆಟಗಾರರು ಒಂದೇ ತಂಡದಲ್ಲಿಯೇ ಎಂಬ ಪ್ರಶ್ನೆ ಮೂಡಿತ್ತು. ಈ ಹಿನ್ನೆಲೆಯಲ್ಲಿ ಬಿಸಿಸಿಐ ಸ್ಪಷ್ಟನೆ ನೀಡಿದೆ. ಭಾರತ ಮತ್ತು ಪಾಕಿಸ್ತಾನದ ಆಟಗಾರರು ಒಟ್ಟಾಗಿ ಆಡುವ ಪ್ರಶ್ನೆಯೇ ಇಲ್ಲ. ಏಕೆಂದರೆ ಸರಣಿಗೆ ಪಾಕ್ ಆಟಗಾರರನ್ನು ಆಹ್ವಾನಿಸಿಲ್ಲ ಎಂದು ಬಿಸಿಸಿಐ ಜಂಟಿ ಕಾರ್ಯದರ್ಶಿ ಜಾಯೆಶ್ ಜಾರ್ಜ್ ತಿಳಿಸಿದ್ದಾರೆ.
ಇನ್ನು ವಿಶ್ವ ಇಲವೆನ್ ತಂಡದಲ್ಲಿಯೂ ಪಾಕಿಸ್ತಾನದ ಆಟಗಾರರು ಇರುವುದಿಲ್ಲ. ಹಾಗಾಗಿ ಎರಡೂ ತಂಡಗಳು ಒಂದಾಗಿ ಆಡುವ ಪ್ರಶ್ನೆ ಇಲ್ಲ. ಬಿಸಿಸಿಐ ಅಧ್ಯಕ್ಷರಾಗಿರುವ ಸೌರವ್ ಗಂಗೂಲಿ ಅವರು ಏಷ್ಯಾ ಇಲವೆನ್‌ನಲ್ಲಿ ಭಾಗವಹಿಸಲಿರುವ ಆಟಗಾರು ಯಾರು ಎಂದು ತಿಳಿಸಲಿದ್ದಾರೆ ಎಂದಿದ್ದಾರೆ.



