Connect with us

Dvgsuddi Kannada | online news portal | Kannada news online

ಬಿಸಿಸಿಐ ವಾರ್ಷಿಕ ಒಪ್ಪಂದ ಪಟ್ಟಿಯಿಂದ ಧೋನಿ ಔಟ್: ಧೋನಿ ಕ್ರಿಕೆಟ್ ಲೈಫ್ ಮುಗಿತಾ..?

ಕ್ರೀಡೆ

ಬಿಸಿಸಿಐ ವಾರ್ಷಿಕ ಒಪ್ಪಂದ ಪಟ್ಟಿಯಿಂದ ಧೋನಿ ಔಟ್: ಧೋನಿ ಕ್ರಿಕೆಟ್ ಲೈಫ್ ಮುಗಿತಾ..?

ನವದೆಹಲಿ: ಭಾರತ ಕ್ರಿಕೆಟ್‌ ನಿಯಂತ್ರಣ ಮಂಡಳಿ (ಬಿಸಿಸಿಐ) ಆಟಗಾರರೊಂದಿಗೆ ಮಾಡಿಕೊಂಡಿರುವ ವಾರ್ಷಿಕ ಒಪ್ಪಂದ ಪಟ್ಟಿ ಪ್ರಕಟಿಸಿದ್ದು, ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಹೆಸರನ್ನು ಕೈಬಿಡಲಾಗಿದೆ. ಈ ಮೂಲಕ ಧೋನಿ ಕ್ರಿಕೆಟ್ ಲೈಫ್ ಮುಗಿತಾ ಅನ್ನೋ ಅನುಮಾನ ಮೂಡಿದೆ.

dhoni 2

ಧೋನಿ ಹಿಂದಿನ ವರ್ಷದ ಒಪ್ಪಂದ ಪಟ್ಟಿಯಲ್ಲಿ ಎ ಶ್ರೇಣಿಯಲ್ಲಿದ್ದರು. 2014ರಲ್ಲಿ ಟೆಸ್ಟ್‌ ಕ್ರಿಕೆಟ್‌ಗೆ ವಿದಾಯಹೇಳಿದ್ದರು.  2017ರಲ್ಲಿ ಚುಟುಕು ಕ್ರಿಕೆಟ್‌ ನಾಯಕತ್ವ ತೊರೆದಿದ್ದರು.ಇಂಗ್ಲೆಂಡ್‌ನಲ್ಲಿ ನಡೆದ ಏಕದಿನ ವಿಶ್ವಕಪ್‌ನ ಸೆಮಿಫೈನಲ್‌ನಲ್ಲಿ ಸೋಲು ಕಂಡ ಬಳಿಕ ಕ್ರಿಕೆಟ್‌ನಿಂದ ದೂರ ಉಳಿದಿದ್ದಾರೆ.

ಅವರು ಕ್ರಿಕೆಟ್‌ನಲ್ಲಿ ಮುಂದುವರಿಯುವ ಬಗ್ಗೆ ಇದುವರೆಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಹೀಗಾಗಿ ಪಟ್ಟಿಯಿಂದ ಕೈ ಬಿಡಲಾದೆ. ಈ ಮೂಲಕ ಧೋನಿ ಮತ್ತೆ ಅಂತರಾಷ್ಟ್ರೀಯ ಕ್ರಿಕೆಟ್ ಗೆ ಮರಳುವುದು ಅನುಮಾನ ಮೂಡಿದೆ.ಇತ್ತೀಚೆಗೆ ಸುನೀಲ್‌ ಗವಾಸ್ಕರ್‌, ಯಾರು ಇಷ್ಟು ಸಮಯ ಭಾರತ ತಂಡದಿಂದ ಅಂತರ ಯ್ದುಕೊಳ್ಳುತ್ತಾರೆಯೇ?’ ಎಂದು ಪ್ರಶ್ನಿಸಿದ್ದರು.

dhoni 3

2019–2020ರಲ್ಲಿ ಬಿಸಿಸಿಐ ಆಟಗಾರೊಂದಿಗಿನ ಒಪ್ಪಂದದ ಪಟ್ಟಿ

+’ ಶ್ರೇಣಿ: ವಾರ್ಷಿಕ ₹ 7 ಕೋಟಿ
01. ವಿರಾಟ್‌ ಕೊಹ್ಲಿ
02. ರೋಹಿತ್‌ ಶರ್ಮಾ
03. ಜಸ್‌ಪ್ರಿತ್‌ ಬೂಮ್ರಾ

ಶ್ರೇಣಿ: ವಾರ್ಷಿಕ ₹ 5 ಕೋಟಿ
01. ರವಿಚಂದ್ರನ್‌ ಅಶ್ವಿನ್‌
02. ರವೀಂದ್ರ ಜಡೇಜಾ
03. ಭುವನೇಶ್ವರ್ ಕುಮಾರ್‌
04. ಚೇತೇಶ್ವರ ಪೂಜಾರ
05. ಅಜಿಂಕ್ಯ ರಹಾನೆ
06. ಕೆ.ಎಲ್‌.ರಾಹುಲ್‌
07. ಶಿಖರ್‌ ಧವನ್‌
08. ಮೊಹಮದ್ ಶಮಿ
09. ಇಶಾಂತ್‌ ಶರ್ಮಾ
10. ಕುಲದೀಪ್‌ ಯಾದವ್‌
11. ರಿಷಭ್‌ ಪಂತ್

ಬಿಶ್ರೇಣಿ: ವಾರ್ಷಿಕ ₹ 3 ಕೋಟಿ
01. ವೃದ್ದಿಮಾನ್‌ ಸಹಾ
02. ಉಮೇಶ್‌ ಯಾದವ್‌
03. ಯಜುವೇಂದ್ರ ಚಾಹಲ್‌
04. ಹಾರ್ದಿಕ್ ಪಾಂಡ್ಯ
05. ಮಯಂಕ್‌ ಅಗರವಾಲ್‌

ಸಿಶ್ರೇಣಿ: ವಾರ್ಷಿಕ ₹ 1 ಕೋಟಿ
01. ಕೇದಾರ್‌ ಜಾಧವ್‌
02. ನವದೀಪ್ ಶೈನಿ
03. ದೀಪಕ್‌ ಚಾಹರ್‌
04. ಮನೀಷ್‌ ಪಾಂಡೆ
05. ಹನುಮ ವಿಹಾರಿ
06. ಶಾರ್ದೂಲ್‌ ಠಾಕೂರ್‌
07. ಶ್ರೇಯಸ್‌ ಅಯ್ಯರ್
08. ವಾಷಿಂಗ್ಟನ್‌ ಸುಂದರ್

Continue Reading
Advertisement
You may also like...

ಲೋಕಲ್ ಸುದ್ದಿಗಳನ್ನು ಕ್ಷಣಾರ್ಧದಲ್ಲಿ ಲೋಕದ ಜನರ ಬೆರಳ ತುದಿಗೆ ತಲುಪಿಸುವ ಉದ್ದೇಶದಿಂದ ಡಿವಿಜಿಸುದ್ದಿ.ಕಾಂ ಕನ್ನಡ ಆನ್ ಲೈನ್ ನ್ಯೂಸ್ ಪೋರ್ಟಲ್ (ಡಿಜಿಟಲ್ ಮಾಧ್ಯಮ) ಸ್ಥಾಪಿಸಲಾಗಿದೆ. ಸ್ಥಳೀಯ ಸುದ್ದಿ ಜೊತೆ ಇನ್ಫೋರ್ಮೆಟಿವ್ ನ್ಯೂಸ್ ಕೊಡುವುದು ಮೊದಲ ಆದ್ಯತೆ. ಇದಲ್ಲದೆ ರಾಜಕೀಯ, ಶಿಕ್ಷಣ, ಉದ್ಯೋಗ, ಕ್ರೀಡೆ, ಅಪರಾಧ ಸುದ್ದಿ ಹಾಗೂ ವಿಶೇಷವಾಗಿ ಕೃಷಿ ಮತ್ತು ರೈತರಿಗೆ ಉಪಯುಕ್ತ ಮಾಹಿತಿ ನೀಡುವುದು ಮುಖ್ಯ ಉದ್ದೇಶ. ಸುದ್ದಿ, ಮಾಹಿತಿ, ಸಲಹೆ, ಸೂಚನೆ ನೀಡಲು ವಾಟ್ಸಾಪ್ (7483892205) ಮಾಡಿ... Editor: munikondajji, MA journalism, contact number:7483892205, e-mail: dvgsuddi@gmail.com

Click to comment

Leave a Reply

Your email address will not be published. Required fields are marked *

More in ಕ್ರೀಡೆ

ದಾವಣಗೆರೆ

Advertisement
Advertisement Enter ad code here

Title

To Top