ಡಿವಿಜಿ ಸುದ್ದಿ, ಮೈಸೂರು: ಮಾಜಿ ಶಾಸಕ ಎಂಟಿಬಿ ನಾಗರಾಜ ನನಗೆ ಯಾವುದೇ ರೀತಿಯ ಸಾಲ ಕೊಟ್ಟಿಲ್ಲ, ಆಪರೇಷನ್ ಕಮಲ ಮಾಡಲು ಬಿಜೆಪಿಗೆ ದುಡ್ಡು ಕೊಟ್ಟಿರಬೇಕು ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ತಿರುಗೇಟು ನೀಡಿದ್ದಾರೆ.
ಆಪರೇಷನ್ ಕಮಲಕ್ಕೆ ಎಂಟಿಬಿ ನಾಗರಾಜ್ ಸಾಲ ಕೊಟ್ಟಿದ್ದಾನೆ ಅದಕ್ಕೆ ಯಡಿಯೂರಪ್ಪಗೆ ಎಂಟಿಬಿ ನಾಗರಾಜ್ ಮೇಲೆ ಪ್ರೀತಿ. ಎಂಟಿಬಿ ಆಪರೇಷನ್ ಕಮಲದಲ್ಲಿ ಹಣ ಪಡೆದಿಲ್ಲ. ಬದಲಿಗೆ ಎಂಟಿಬಿಯೇ ಯಡಿಯೂರಪ್ಪಗೆ ಹಣ ನೀಡಿದ್ದಾನೆ ಎಂದು ಸುದ್ದಿಗೋಷ್ಠಿಯಲ್ಲಿ ವ್ಯಂಗ್ಯವಾಡಿದರು.
ನನ್ನ ಬಳಿ ಸಿದ್ದರಾಮಯ್ಯ ಸಾಲ ಪಡೆದ್ದಾರೆ ಎಂಬುನ್ನು ನಿರಕರಿಸಿದ ಸಿದ್ದರಾಮಯ್ಯ, ನಾನು ಎಂಟಿಬಿ ನಾಗರಾಜನಿಂದ ಯಾವುದೇ ಸಾಲವನ್ನೇ ಪಡೆದಿಲ್ಲ.ಕೃಷ್ಣಭೈರೇಗೌಡ ಲೋಕಸಭೆ ಚುನಾವಣೆ ವೇಳೆ ಸಾಲ ಪಡೆದಿದ್ದ. ಅವನು ಅದನ್ನು ವಾಪಸ್ ಕೊಟ್ಟಿದ್ದಾರೆ. ನಾನು ಸಾಲನೇ ಪಡೆದಿಲ್ಲ ಎಂದ ಮೇಲೆ ವಾಪಸ್ ಎಲ್ಲಿಂದ ಕೊಡಲಿ ಎಂದರು.
ಹೊಸಕೋಟೆ ಕ್ಷೇತ್ರದಲ್ಲಿ ಪ್ರಚಾರ ವೇಳೆ ಎಂಟಿಬಿ ನಾಗರಾಜ, ನಾನು ಯಾರ ಋಣದಲ್ಲಿ ಇಲ್ಲ. ನನ್ನ ಋಣದಲ್ಲಿ ಕಾಂಗ್ರೆಸ್ ನಾಯಕರಿದ್ದಾರೆ. ಸಿದ್ದರಾಮಯ್ಯ, ಮುನಿಯಪ್ಪ, ನಂಜೇಗೌಡ ಮತ್ತು ನಾರಾಯಣಸ್ವಾಮಿ ನನ್ನ ಬಳಿ ಹಣ ಪಡೆದಿದ್ದಾರೆ ಎಂದು ಆರೋಪಿಸಿದ್ದರು.