ಡಿವಿಜಿ ಸುದ್ದಿ, ಬೆಂಗಳೂರು: ಭೂಸುಧಾರಣಾ ಕಾಯ್ದೆಗೆ ಸುಗ್ರೀವಾಜ್ಞೆ ವಿರೋಧಿಸಿ ಸರ್ಕಾರದ ವಿರುದ್ಧ ಗ್ರಾಮೀಣ ಮಟ್ಟದಿಂದ ಹೋರಾಟ ಮಾಡುತ್ತವೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದರು.
ಈ ಕಾಯ್ದೆ ಬಗ್ಗೆ ರೈತ ಸಂಘಟನೆ ಜೊತೆ ಸಭೆ ನಡೆಸಿದ ಅವರು, ಕಾಯ್ದೆ ತಿದ್ದುಪಡಿಗೆ ರೈತ ಸಂಘಟನೆಗಳ ಮುಖಂಡರು ವಿರೋಧವಿದೆ. ಈ ಬಗ್ಗೆ ಗ್ರಾಮೀಣ ಮಟ್ಟದಿಂದ ಹೋರಾಟ ಮಾಡುಬೇಕಿದೆ. ಮುಂದಿನ ದಿನಗಳಲ್ಲಿ ಕಾಂಗ್ರೆಸ್ ಪಕ್ಷ ಗ್ರಾಮೀಣ ಮಟ್ಟದಿಂದ ಹೋರಾಟ ರೂಪಿಸುತ್ತೇವೆ. ಕಾಯ್ದೆ ತಿದ್ದುಪಡಿ ಮೂಲಕ ಸರ್ಕಾರ, ರೈತ ವಿರೋಧಿ ನೀತಿ ಅನುಸರಿಸುತ್ತಿದೆ. ಈ ತಿದ್ದುಪಡಿಯಿಂದ ರೈತರು ಬೀದಿಪಾಲು ಆಗಲಿದ್ದಾರೆ ಎಂದರು.
ರಾಜ್ಯ ಸರ್ಕಾರ ತಂದಿರುವ ತಿದ್ದುಪಡಿ ರೈತ ವಿರೋಧಿ. ರೈತರು, ಕೃಷಿ ಕಾರ್ಮಿಕರಿಗೆ ಇದೊಂದು ಮರಣಶಾಸನ. ಕೂಡಲೇ ತಿದ್ದುಪಡಿ ವಾಪಸ್ ಪಡೆಯಬೇಕು. ಈ ತಿದ್ದುಪಡಿ ರೈತರ ಭೂಮಿಯನ್ನು ಕೊಳ್ಳಲು ಶ್ರೀಮಂತರಿಗೆ ಅವಕಾಶ ಮಾಡಿಕೊಟ್ಟಿದೆ. ಹೀಗಾಗಿ ರೈತ ಮುಖಂಡರು ನಮ್ಮ ಹೋರಾಟಕ್ಕೆ ಬೆಂಬಲ ನೀಡಬೇಕು ಮನವಿ ಮಾಡಿದರು.
ರೈತ ಮುಖಂಡರಾದ ಕೋಡಿಹಳ್ಳಿ ಚಂದ್ರಶೇಖರ್, ಬಸವರಾಜಪ್ಪ, ವೀರಸಂಗಯ್ಯ, ಚಾಮರಸಮಾಲಿಪಾಟೀಲ, ಬಡಿಗೇಪುರ ನಾಗೇಂದ್ರ ಮತ್ತಿತರರು ಸಭೆಯಲ್ಲಿ ಭಾಗಿಯಾಗಿದ್ದರು.



