ಡಿವಿಜಿ ಸುದ್ದಿ, ಭದ್ರಾವತಿ: ಬೆಳಗಾವಿ ಗ್ರಾಮಾಂತರ ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ಪುತ್ರನ ವಿವಾಹ ನಿಶ್ಚಿತಾರ್ಥ ಸಮಾರಂಭ ಇಂದು ಶಿವಮೊಗ್ಗ ಜಿಲ್ಲೆಯ ಭದ್ರಾವತಿಯಲ್ಲಿ ನಡೆಯಲಿದೆ.
ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ಪುತ್ರ ಮೃಣಾಲ್ ಹಾಗೂ ಡಾ. ಹಿತಾ ವಿವಾಹ ನಿಶ್ಚಿತಾರ್ಥ ಇಂದು ನಡೆಯಲಿದೆ. ಹೆಬ್ಬಾಳ್ಕರ್ ಪುತ್ರನಿಗೆ ಭದ್ರಾವತಿ ಕ್ಷೇತ್ರದ ಕಾಂಗ್ರೆಸ್ ಶಾಸಕ ಬಿ.ಕೆ.ಸಂಗಮೇಶ್ ಸಹೋದರ ಶಿವಕುಮಾರ್ ಪುತ್ರಿ ಜೊತೆ ನಿಶ್ಚಿತಾರ್ಥ ನಿಶ್ಚಯವಾಗಿದೆ.

ಶಿವಮೊಗ್ಗ ನಗರದ ಸವಳಂಗ ರಸ್ತೆಯ ಸರ್ಜಿ ಕನ್ವೆಂಷನ್ ಹಾಲ್‍ನಲ್ಲಿ ಗುರು-ಹಿರಿಯರು ನಿಶ್ಚಯಿಸಿರುವ ಮುಹೂರ್ತದಲ್ಲಿ ಸಮಾರಂಭ ನಡೆಯಲಿದೆ. ಕೊರೊನಾ ಹಿನ್ನೆಲೆಯಲ್ಲಿ ಅಗತ್ಯ ಮುಂಜಾಗ್ರತಾ ಕ್ರಮ ಕೈಗೊಂಡು ನಿಶ್ಚಿತಾರ್ಥ ಸಮಾರಂಭ ಜರುಗಲಿದೆ.
ಈಗಾಗಲೇ ಪುತ್ರನ ನಿಶ್ಚಿತಾರ್ಥಕ್ಕೆ ಲಕ್ಷ್ಮಿ ಹೆಬ್ಬಾಳ್ಕರ್ ಶಿವಮೊಗ್ಗಕ್ಕೆ ಆಗಮಿಸಿದ್ದು, ಇಂದು ಮಧ್ಯಾಹ್ನ 12 ಗಂಟೆಗೆ ನಿಶ್ಚಿತಾರ್ಥ ಕಾರ್ಯಕ್ರಮ ನಡೆಯಲಿದೆ. ನಿಶ್ಚಿತಾರ್ಥದ ತಯಾರಿ ಭರದಿಂದ ಸಾಗಿದೆ. ಈ ಮೂಲಕ ಇಬ್ಬರು ರಾಜಕೀಯ ಕುಟುಂಬದ ನಡುವೆ ಮತ್ತೊಂದು ಬಾಂಧವ್ಯಕ್ಕೆ ಸಮಾರಂಭ ಸಾಕ್ಷಿಯಾಗಲಿದೆ.




