Connect with us

Dvgsuddi Kannada | online news portal | Kannada news online

ಡ್ರಗ್ಸ್‌ ಮಾಫಿಯಾ: ಸ್ಯಾಂಡಲ್ ವುಡ್ ಗೆ ಮತ್ತೊಂದು ಶಾಕ್;  ಸ್ಟಾರ್ ದಂಪತಿಗೆ  ಸಿಸಿಬಿ ನೋಟಿಸ್‌

ಸಿನಿಮಾ

ಡ್ರಗ್ಸ್‌ ಮಾಫಿಯಾ: ಸ್ಯಾಂಡಲ್ ವುಡ್ ಗೆ ಮತ್ತೊಂದು ಶಾಕ್;  ಸ್ಟಾರ್ ದಂಪತಿಗೆ  ಸಿಸಿಬಿ ನೋಟಿಸ್‌

ಡಿವಿಜಿ ಸುದ್ದಿ, ಬೆಂಗಳೂರು: ಸ್ಯಾಂಡಲ್‌ವುಡ್‌ ಡ್ರಗ್ಸ್‌ ಪ್ರಕರಣಕ್ಕೆ ಸಂಬಂಧಿಸಿದಂತೆ ಸ್ಟಾರ್‌ ದಂಪತಿ ದಿಗಂತ್‌, ಐಂದ್ರಿತಾ ರೇಗೆ ಸಿಸಿಬಿ ನೋಟಿಸ್‌ ಜಾರಿ ಮಾಡಿದೆ.

ಬುಧವಾರ  ಬೆಳಗ್ಗೆ 11 ಗಂಟೆಗೆ ಸಿಸಿಬಿ ಕಚೇರಿಗೆ ಹಾಜರಾಗಿ ವಿಚಾರಣೆಗೆ ಎದುರಿಸಬೇಕೆಂದು ಸಿಸಿಬಿ  ಸೂಚಿಸಿಲಾಗಿದೆ. ಎರಡು ದಿನಗಳ ಹಿಂದೆ ನಟಿ ಐಂದ್ರಿತಾ ರೇ  ಶ್ರೀಲಂಕಾದ ಕ್ಯಾಸಿನೋಗೆ ಹೋಗಿದ್ದ ವಿಡಿಯೋ, ಫೋಟೋ ವೈರಲ್‌ ಆಗಿತ್ತು. ಈ ವೇಳೆ ಈ ಪ್ರಕರಣದ ಆರೋಪಿ ಶೇಖ್‌ ಫಾಝಿಲ್‌ ಜೊತೆ ಇದ್ದ ಫೋಟೋಗಳು ಸಹ ದೊರೆತ್ತಿತ್ತು.

aindrita ray 2

ನಾನು ಸಿನಿಮಾ ಪ್ರಮೋಶನ್ ಗಾಗಿ ಕೊಲಂಬೋದಲ್ಲಿರುವ ಕ್ಯಾಸಿನೋಗೆ ಹೋಗಿದ್ದೆ. ಚಿತ್ರ ಪ್ರಚಾರಕ್ಕಾಗಿ ನಮ್ಮ ಮ್ಯಾನೇಜರ್ ಹೋಗಬೇಕು ಅಂತ ಹೇಳಿದ್ದರು.  ಸೊಹೈಲ್ ಮತ್ತು ಅರ್ಬಾಜ್ ಖಾನ್ ಜೊತೆ ಹೋಗಿದ್ದೆ.  ಶೇಖ್ ಫಾಝಿಲ್ ನನಗೆ ಪರಿಚಯವಿಲ್ಲ ಎಂದು ಹೇಳಿದ್ದಾರೆ.

ಅರ್ಬಾಜ್ ಖಾನ್ ಜೊತೆ ‘ಮೇ ಜರೂರ್ ಆವೂಂಗಾ’ ಸಿನಿಮಾ ಮಾಡುತ್ತಿರುವಾಗ ಕ್ಯಾಸಿನೋಗೆ ಹೋಗಿದ್ದೇನೆ. ಅಲ್ಲಿ ಸಿನಿಮಾ ಪ್ರಮೋಶನ್ ಚೆನ್ನಾಗಿ ಆಗುತ್ತೆ ಅಂತಾ ಹೇಳಿದ್ದರಿಂದ ಚಿತ್ರತಂಡ ನಮ್ಮನ್ನು  ಕ್ಯಾಸಿನೋಗೆ ಕಳುಹಿಸಿದ್ದರು.

aindrita ray 3

ಕ್ಯಾಸಿನೋ ಪಾರ್ಟಿಗೆ ತೆರಳಿರುವ ಫೋಟೋಗಳು ನನ್ನ ಇನ್‍ಸ್ಟಾಗ್ರಾಂನಲ್ಲಿವೆ. ಯಾವ ಫೋಟೋ ಮತ್ತು ವಿಡಿಯೋಗಳನ್ನ ಡಿಲೀಟ್ ಮಾಡಿಲ್ಲ. ಪ್ರೊಫೆಷನಲ್ ಗಾಗಿ ಕ್ಯಾಸಿನೋಗೆ ಹೋಗಿದ್ದೆ ಕರೀಷ್ಮಾ ಕಪೂರ್, ಸೊಹೈಲ್ ಖಾನ್, ಅರ್ಬಾಜ್ ಖಾನ್ ಜೊತೆ ನನ್ನ ಜೊತೆ ಬಂದಿದ್ದರು ಎಂದು ವಿವರಿಸಿದ್ದರು.

ಎರಡನೇ ಬಾರಿ ಅರ್ಬಾಜ್ ಖಾನ್ ಹುಟ್ಟುಹಬ್ಬದ ಅಂಗವಾಗಿ ಬೆಂಗಳೂರಿನ ಹೋಟೆಲ್ ನಲ್ಲಿ ಪಾರ್ಟಿ ಮಾಡಲಾಗಿತ್ತು. ಬರ್ತ್ ಡೇ ಪಾರ್ಟಿ ವೇಳೆ ಫಾಝಿಲ್ ಬಂದಿದ್ದ. ಪಾರ್ಟಿಯಲ್ಲಿದ್ದಾಗ ಸಹಜವಾಗಿ ಫಾಝಿಲ್ ಜೊತೆ ಫೋಟೋ ತೆಗೆಸಿಕೊಳ್ಳಲಾಗಿತ್ತು. ಅರ್ಬಾಜ್ ಖಾನ್ ಬರ್ತ್ ಡೇ ಪಾರ್ಟಿ ವೇಳೆ ಮಾಧ್ಯಮದವರು ಸಹ ಇದ್ರು. 10 ರಿಂದ 20 ನಿಮಿಷ ನಾನು ಅಲ್ಲಿದ್ದು ಹೊರ ಬಂದಿದ್ದೇನೆ. ಆಗ ಯಾರಿಗೂ ಫಾಝಿಲ್ ಬಗ್ಗೆ ನಮಗೂ ಗೊತ್ತಿರಲಿಲ್ಲ ಎಂದು ತಿಳಿಸಿದರು. 

ಶ್ರೀಲಂಕಾದ ಕ್ಯಾಸಿನೋಗೆ ಹಬ್ಬದ ಸಮಯದಲ್ಲಿ ಸಿನಿಮಾದ ದೊಡ್ಡ ದೊಡ್ಡ ತಾರೆಯರನ್ನ ಕರೆಸುತ್ತಾರೆ. ನಮಗೂ ಆ ರೀತಿಯ ಆಹ್ವಾನಗಳು ಬರುತ್ತವೆ. ಆಹ್ವಾನ ಬಂದಾಗ ಆ ವ್ಯಕ್ತಿಯ ಹಿನ್ನೆಲೆ ಚೆಕ್ ಮಾಡಲು ಆಗಲ್ಲ ಎಂದಿದ್ದಾರೆ.

 

 

ಲೋಕಲ್ ಸುದ್ದಿಗಳನ್ನು ಕ್ಷಣಾರ್ಧದಲ್ಲಿ ಲೋಕದ ಜನರ ಬೆರಳ ತುದಿಗೆ ತಲುಪಿಸುವ ಉದ್ದೇಶದಿಂದ ಡಿವಿಜಿಸುದ್ದಿ.ಕಾಂ ಕನ್ನಡ ಆನ್ ಲೈನ್ ನ್ಯೂಸ್ ಪೋರ್ಟಲ್ (ಡಿಜಿಟಲ್ ಮಾಧ್ಯಮ) ಸ್ಥಾಪಿಸಲಾಗಿದೆ. ಸ್ಥಳೀಯ ಸುದ್ದಿ ಜೊತೆ ಇನ್ಫೋರ್ಮೆಟಿವ್ ನ್ಯೂಸ್ ಕೊಡುವುದು ಮೊದಲ ಆದ್ಯತೆ. ಇದಲ್ಲದೆ ರಾಜಕೀಯ, ಶಿಕ್ಷಣ, ಉದ್ಯೋಗ, ಕ್ರೀಡೆ, ಅಪರಾಧ ಸುದ್ದಿ ಹಾಗೂ ವಿಶೇಷವಾಗಿ ಕೃಷಿ ಮತ್ತು ರೈತರಿಗೆ ಉಪಯುಕ್ತ ಮಾಹಿತಿ ನೀಡುವುದು ಮುಖ್ಯ ಉದ್ದೇಶ. ಸುದ್ದಿ, ಮಾಹಿತಿ, ಸಲಹೆ, ಸೂಚನೆ ನೀಡಲು ವಾಟ್ಸಾಪ್ (7483892205) ಮಾಡಿ... Editor: munikondajji, MA journalism, contact number:7483892205, e-mail: dvgsuddi@gmail.com

Click to comment

Leave a Reply

Your email address will not be published. Required fields are marked *

More in ಸಿನಿಮಾ

ದಾವಣಗೆರೆ

Advertisement
Advertisement Enter ad code here

Title

To Top