Connect with us

Dvgsuddi Kannada | online news portal | Kannada news online

ರಾಶಿ ಭವಿಷ್ಯ

ಪ್ರಮುಖ ಸುದ್ದಿ

ರಾಶಿ ಭವಿಷ್ಯ

ಶುಭ ಶುಕ್ರವಾರ-ಆಗಸ್ಟ್-28,2020 ರಾಶಿ ಭವಿಷ್ಯ

  • ಸೂರ್ಯೋದಯ: 06:11, ಸೂರ್ಯಸ್ತ: 18:29
  • ಶಾರ್ವರಿ ನಾಮ ಸಂವತ್ಸರ
    ಭಾದ್ರಪದ ಮಾಸ ದಕ್ಷಿಣಾಯಣ
  • ತಿಥಿ: ದಶಮೀ – 08:37 ವರೆಗೆ
  • ನಕ್ಷತ್ರ: ಮೂಲ – 12:37 ವರೆಗೆ
  • ಯೋಗ: ಪ್ರೀತಿ – 16:05 ವರೆಗೆ
  • ಕರಣ: ಗರಜ – 08:37 ವರೆಗೆ ವಣಿಜ – 20:24 ವರೆಗೆ
  • ದುರ್ಮುಹೂರ್ತ: 08:39 – 09:28
  • ದುರ್ಮುಹೂರ್ತ : 12:45 – 13:34
  • ರಾಹು ಕಾಲ: 10:30 – 12:00
  • ಯಮಗಂಡ: 15:00 – 16:30
  • ಗುಳಿಕ ಕಾಲ: 07:30 – 09:00
  • ಅಮೃತಕಾಲ: 06:13 – 07:49
  • ಅಭಿಜಿತ್ ಮುಹುರ್ತ: 11:56 – 12:45
  • ಮದುವೆ ಬಗ್ಗೆ ಚಿಂತನೆ ಮಾಡುವವರಿಗೆ ಇಲ್ಲಿದೆ ಪರಿಹಾರ ಹಾಗೂ ಮಾರ್ಗದರ್ಶನ.

ಸೋಮಶೇಖರ್B.Sc
ಜಾತಕ ಬರೆಯುವುದು, ಜಾತಕವಿಶ್ಲೇಷಣೆಗಾರರು ರಾಶಿಹರಳು ತಿಳಿಸುವುದು. ವಂಶಪಾರಂಪರಿಕ ಜ್ಯೋತಿಷ್ಯಶಾಸ್ತ್ರ, ವಾಸ್ತುಶಾಸ್ತ್ರ ಹಾಗೂ ಸಂಖ್ಯಾಶಾಸ್ತ್ರ ಪರಿಣಿತರು.
Mob.9353488403

ಜನ್ಮ ಜಾತಕ ಅಥವಾ ಕುಂಡಲಿ ಲಗ್ನದಿಂದ ಅಂದರೆ ಕೇಂದ್ರದಿಂದ ಸಪ್ತಮ ಸ್ಥಾನ
ಶನಿ ಸ್ವಾಮಿ ಇದ್ದರೆ ಮದುವೆ ವಿಳಂಬಕ್ಕೆ ಶನಿಸ್ವಾಮಿಯೇ ಕಾರಣವಾಗುತ್ತಾನೆ.
ಲಗ್ನದಿಂದ ಸಪ್ತಮ ಸ್ಥಾನದಲ್ಲಿ ಶನಿ ಇದ್ದರೆ ತಮ್ಮ ಮದುವೆ ತಡವಾಗಿ ಅಂದರೆ ಮೂವತ್ತರ ಪ್ರಾಯದ ಮೇಲೆ ಕಂಕಣಬಲ ಕೂಡಿ ಬರುವ ಸಾಧ್ಯತೆ ಇದೆ.
ಶನಿ ಸ್ವಾಮಿಯು ನಿಮಗೇನಾದರೂ ಒಲಿದರೆ
ಚಿನ್ನದ ತಟ್ಟೆಯಲ್ಲಿ ಊಟ ಮಾಡಿಸುತ್ತಾನೆ, ಆದರೆ ಒಲಿಯದೆ ಹೋದರೆ ತಮಗೆ ದುಃಖ ನೀಡುತ್ತಾನೆ, ಕರ್ಮ ಕಾರನ್ನು ಆಗಿರುತ್ತಾನೆ , ಅಲ್ಪ ಆಯಸ್ಸು ಮತ್ತು ಕಂಟಕನಾಗಿರುತ್ತಾನೆ.
ಶನಿ ಸ್ವಾಮಿಗೆ ತುಲಾ ರಾಶಿಯ ಉಚ್ಚ ಸ್ಥಾನವಾಗಿದ್ದು. ಮೇಷರಾಶಿ ನೀಚಸ್ಥಾನ ವಾಗಿರುತ್ತದೆ .ಇಲ್ಲಿ ಮೇಷ ರಾಶಿಗೆ ಅಧಿಪತಿ ಕುಜ.
ಕುಜ ಮತ್ತು ಶನಿ ಶತ್ರು ಗ್ರಹಗಳು. ಜ್ಯೋತಿಷ್ಯಶಾಸ್ತ್ರದ ಪ್ರಕಾರ ಲಗ್ನದಿಂದ ಸಪ್ತಮ ಸ್ಥಾನ ಕಂಕಣಬಲ ಸೂಚಿಸುತ್ತದೆ. ಒಂದು ವೇಳೆ ಶನಿ ಸ್ವಾಮಿ ಸಪ್ತಮ ಸ್ಥಾನದಲ್ಲಿದ್ದರೆ ಮದುವೆ ವಿಳಂಬವಾಗುತ್ತದೆ. ಅಷ್ಟೇ ಅಲ್ಲ ಉದ್ಯೋಗದಲ್ಲಿ ಏರಿಳಿತ ಅನುಭವಿಸುವಿರಿ. ಶನಿ ಸ್ವಾಮಿಯು ನಮ್ಮ ದೇಹಕ್ಕೆ ಹೋಲಿಕೆ ಮಾಡಿದಾಗ ಕಾಲು ಮತ್ತು ಪಾದಗಳಿಗೆ ಸಂಬಂಧಪಟ್ಟ ಗ್ರಹವಾಗಿದೆ. ಆದ್ದರಿಂದ ಲಗ್ನದಿಂದ ಸಪ್ತಮ ಸ್ಥಾನದಲ್ಲಿ ಶನಿ ಇದ್ದರೆ ಕಾಲು ನೋವು ,ಮಂಡಿ ನೋವು, ಪಾದಗಳಲ್ಲಿ ಉರಿ, ವಾಯು, ಆಕಸ್ಮಿಕವಾಗಿ ಕಾಲುಗಳಿಗೆ ಪೆಟ್ಟು ,ನೋವು ಉಂಟಾಗುವ ಸಾಧ್ಯತೆ ಹೆಚ್ಚು.
ವ್ಯಾಪಾರದಲ್ಲಿ ತೀವ್ರ ಸಂಕಟ ಅನುಭವಿಸಬೇಕಾಗುತ್ತದೆ.

ಪರಿಹಾರಗಳು
1) ನಿಮ್ಮ ಲಗ್ನ ಕುಂಡಲಿಯಲ್ಲಿ ಲಗ್ನದಿಂದ ಸಪ್ತಮ ಸ್ಥಾನದಲ್ಲಿ ಶನಿ ಇದ್ದರೆ “ವಿಷ್ಣುಸಹಸ್ರನಾಮ ಪಾರಾಯಣ “ಮಾಡುವುದು ಉತ್ತಮ.
2) ಪ್ರತಿ ಶನಿವಾರ ಎಳ್ಳೆಣ್ಣೆ ದೀಪ ಶನೇಶ್ವರ ಸ್ವಾಮಿಗೆ ಹಚ್ಚಿರಿ.
3) ಸ್ತೋತ್ರ ದಿನಾಲು ಪಠಾಣ ಮಾಡಿರಿ.
ನೀಲಾಂಜನಂ ಸಮಾಭಾಸಂ। ರವಿಪುತ್ರಂ ಯಮಾಗ್ರಜಂ। ಛಾಯಾ ಮಾರ್ತಂಡ। ಸಂಭೂತಂ ತಂ ನಮಾಮಿ ಶನೇಶ್ವರ ನಮಃ।।

ಮೂಲಾ ನಕ್ಷತ್ರದಲ್ಲಿ ಜನಿಸಿದರೆ ಅದರ ಮಹತ್ವ ಹಾಗೂ ಅದರ ಮಾಹಿತಿ…….

ಜನನ ಹಾಗೂ ಮರಣ ದೈವಾನುಗ್ರಹ ಹಾಗೆಯೇ ಮೂಲ ನಕ್ಷತ್ರದಲ್ಲಿ ಹೆಣ್ಣಾಗಲಿ ಗಂಡಾಗಲಿ ಜನನವಾದರೆ ಅವರವರ ಶಕ್ತಿ ಅನುಸಾರವಾಗಿ ದೋಷ ನಿವಾರಣೆ ಪೂಜಾ ಮಾಡಿಸಿಕೊಳ್ಳಬೇಕು. ಮೂಲ ನಕ್ಷತ್ರದಲ್ಲಿ ಹುಟ್ಟಿದವರಿಗೆ ದೋಷ ಅಂಟುವುದು ಎಂಬುದರ ಬಗ್ಗೆ ಮಾಹಿತಿ ನೋಡೋಣ.
(1) ಮೂಲ ನಕ್ಷತ್ರದಲ್ಲಿ ಜನಿಸಿದರೆ ತಂದೆಗೆ ಸಮಸ್ಯೆಗೆ ಒಳಗಾಗುವ ಸಂಭವ.
(2) ಮೂಲಾ ನಕ್ಷತ್ರದಲ್ಲಿ 4ನೇ ಚರಣದಲ್ಲಿ ಜನಿಸಿದರೆ ಯಾವುದೇ ದೋಷ ಇರುವುದಿಲ್ಲ.

ಇದಕ್ಕಾಗಿ ಹಸು ಹಾಗೂ ಪುರೋಹಿತರನ್ನು ಕರೆದು ಪೂಜೆ ಸಲ್ಲಿಸಿ ಪುರೋಹಿತರಿಗೆ ನವಧಾನ್ಯ ,ವಸ್ತ್ರ ದಾನ ಮಾಡಬೇಕು. ಅದರ ಜೊತೆಗೆ ಹಸುವಿನ ಪೂಜೆ ಮಾಡಬೇಕು ಇದರಿಂದ ಮುಕ್ತಿ. ಆರ್ಥಿಕವಾಗಿ ಉಳ್ಳವರು ನಕ್ಷತ್ರ ಹೋಮ ಶಾಂತಿ ಮಾಡಬಹುದು. ಆರ್ಥಿಕಸ್ಥಿತಿ ಉತ್ತಮವಾಗಿದ್ದರೆ ಗೋದಾನ ಮಾಡಬಹುದು. ನನ್ನದನ್ನು ಮಾಡಬಹುದು.

ವಿವಾಹ ಕಾರ್ಯಕ್ಕೆ ಮೂಲ ನಕ್ಷತ್ರ ಅಡ್ಡಿಯೆ?

ಹೌದು ಮದುವೆ ವಿಳಂಬವಾಗುವ ಸಾಧ್ಯತೆ ಇರುತ್ತದೆ, ಅದಕ್ಕಾಗಿ ತಾವು ಸದಾ ಪೂಜೆ-ಪುನಸ್ಕಾರ ಅನ್ನದಾನ ಮಾಡಿ ಮುಕ್ತಿ ಹೊಂದಿರಿ ಇದಕ್ಕಾಗಿ
ಸಂಬಂಧಿಸಿದಂತೆ ತೊಂದರೆಗಳು ಆಗುತ್ತಿದ್ದಲ್ಲಿ ಈ ಮಂತ್ರ ಪಠಿಸಿರಿ. “ಓಂ ಹ್ರೀಂ ಸ್ವಯಂವರಪಾರ್ವತಿ ಜಪಯೋಗಿನಿ ಯೋಗಿನಿ ಯೋಗೇಶ್ವರಿ ಯೋಗೇಶ್ವರಿ ಯೋಗ ಭಯಂಕರಿ ಸಕಲ ಸ್ಥಾವರಸ್ಯ ಜಂಗಮ ಮುಖ ಹೃದಯಂ ಮಮ ವಶಂ ಆಕರ್ಷಯ ಆಕರ್ಷಯ” ಈ ಮಂತ್ರವನ್ನು ನಿತ್ಯ ಜಪ ಮಾಡಿದರೆ ಎಷ್ಟು ದೊಡ್ಡ ಸಮಸ್ಯೆ ಇದ್ದರೂ ನಿವಾರಣೆ ಆಗುತ್ತದೆ. ಶೀಘ್ರ ವಿವಾಹ ಆಗುತ್ತದೆ.

ಓಂ ಶ್ರೀ ಚಾಮುಂಡೇಶ್ವರಿ ಜ್ಯೋತಿಷ್ಯ ಕೇಂದ್ರ.

ಶ್ರೀ ಸೋಮಶೇಖರ್ B.Sc
Mob.No.9353488403
ಜಾತಕ ವಿಮರ್ಶಕರು, ಜ್ಯೋತಿಷ್ಯಶಾಸ್ತ್ರ, ವಾಸ್ತುಶಾಸ್ತ್ರ, ಸಂಖ್ಯಾಶಾಸ್ತ್ರ ಹಾಗೂ ನಾಡಿಶಾಸ್ತ್ರ ಪ್ರವೀಣರು.

ಇವರು ಜನ್ಮ ಜಾತಕ, ಫೋಟೋ, ಮುಖಲಕ್ಷಣ, ಹಸ್ತಸಾಮುದ್ರಿಕ ನೋಡಿ ನಿಮ್ಮ ಜೀವನದ ಸಂಪೂರ್ಣ ಭವಿಷ್ಯ ನುಡಿಯುವರು.ನಿಮ್ಮ ಸಮಸ್ಯೆಗಳಾದ,ವಿದ್ಯಾಭ್ಯಾಸ ತೊಂದರೆ, ಉದ್ಯೋಗ ಸಮಸ್ಯೆ ,ವಾಸ್ತು ದೋಷ ,ಪ್ರೀತಿಯಲ್ಲಿ ನಂಬಿ ಮೋಸ, ದಾಂಪತ್ಯ ಕಲಹ, ಮಾನಸಿಕ ಒತ್ತಡ, ಪ್ರೀತಿಯಲ್ಲಿ ಬಿದ್ದು ಮಕ್ಕಳು ನಿಮ್ಮ ಮಾತು ಕೇಳದಿದ್ದರೆ, ಅಣ್ಣ-ತಮ್ಮಂದಿರ ಸಮಸ್ಯೆ, ಅಕ್ಕತಂಗಿಯರ ಸಮಸ್ಯೆ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ಗ್ರಹಗಳ ಗೋಚಾರ ಫಲ ಸಮಸ್ಯೆ, ದಾಟಿದ ದೋಷ, ಶಕುನ ದೋಷ, ಸಾಲದ ಕೊರತೆ, ಜೂಜಾಟದಲ್ಲಿ ತೊಂದರೆ, ದುಷ್ಟ ಸ್ವಪ್ನ ಕಾಟ, ಅತ್ತೆ-ಸೊಸೆ ಕಿರಿಕಿರಿ, ಸಂಗಾತಿಯೊಡನೆ ವಿರಸ, ಅಲ್ಪಾಯುಷ್ಯ ಇನ್ನು ಮುಂತಾದ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಹಾಗೂ ಮಾರ್ಗದರ್ಶನ ಜಾತಕ ಬರೆದು ನಿಮ್ಮ ವಾಟ್ಸಪ್ ನಂಬರ್ಗೆ ಕಳುಹಿಸಿ ಸಮಗ್ರ ಮಾಹಿತಿ ಹಾಗೂ ಮಾರ್ಗದರ್ಶನ ತಿಳಿಸಲಾಗುವುದು.

ಶ್ರೀ ಸೋಮಶೇಖರ್B.Sc
( ವಂಶಪಾರಂಪರಿತ)
ಜ್ಯೋತಿಷ್ಯಶಾಸ್ತ್ರ, ವಾಸ್ತುಶಾಸ್ತ್ರ, ಸಂಖ್ಯಾಶಾಸ್ತ್ರ ಹಾಗೂ ನಾಡಿಶಾಸ್ತ್ರ ಪ್ರವೀಣರು.
Mob.No.93534 88403

ಇಂದಿನ ರಾಶಿ ಭವಿಷ್ಯ

ಮೇಷ ರಾಶಿ
ನಿಮ್ಮ ವಚನ ನಿಭಾಯಿಸುತ್ತೀರಿ.
ಆಸ್ತಿ ವಿಚಾರದಲ್ಲಿ ಕೊಟ್ಟ ಮಾತಿನಂತೆ ನಡೆದುಕೊಳ್ಳುತ್ತೀರಿ. ಕುಟುಂಬದಲ್ಲಿ ಹಾಗೂ ಸಮಾಜದಲ್ಲಿ ನಿಮ್ಮ ಬಗ್ಗೆ ಗೌರವ ಹೆಚ್ಚಾಗಲಿದೆ. ಸಜ್ಜನರ ಪರಿಚಯ ಆಗಲಿದೆ. ಉದ್ಯೋಗ ವಿಚಾರವಾಗಿ ಸ್ನೇಹಿತರ ಮೂಲಕ ಉತ್ತಮ ಫಲಿತಾಂಶ ತರಲಿವೆ. ಮನೆ ಬದಲಾವಣೆ ಮಾಡಬೇಕು ಅಂತಿರುವವರು ಸದ್ಯಕ್ಕೆ ಬೇಡ. ಉದ್ಯೋಗದ ಬದಲಾವಣೆ ಬೇಡ ಅಲ್ಲಿಯೇ ಮುಂದುವರೆಯಿರಿ. ನೌಕರರಿಗೆ ಬಡ್ತಿಯ ಜವಾಬ್ದಾರಿ. ಶಿಕ್ಷಕದವರಿಗೆ ವರ್ಗಾಂತರ ಭಾಗ್ಯ. ಪ್ರಮೋಷನ್ ಭಾಗ್ಯ.
ಕರೆ ಮಾಡಿರಿ ಸೋಮಶೇಖರ್B.Sc
Mob.No. 9353488403

ವೃಷಭ ರಾಶಿ
ಪತ್ನಿಯ ಮಾರ್ಗದರ್ಶನದಿಂದ ತೆಗೆದುಕೊಂಡ ತೀರ್ಮಾನಗಳು ಫಲ ನೀಡಲು ಆರಂಭಿಸುತ್ತವೆ. ಹೈನುಗಾರಿಕೆ ವ್ಯವಸಾಯ ಸಂಬಂಧಿಸಿದ ಉದ್ಯಮದಾರರುಗೆ ಹಣಕಾಸು ಅಗತ್ಯ, ಸಾಲ ಪಡೆಯುವಿರಿ. ದೀರ್ಘ ಕಾಲದ ಕಾಡುವ ಸಮಸ್ಯೆ ಸೂಕ್ತ ವೇದಿಕೆಯನ್ನು ನಿರ್ಮಿಸಿಕೊಳ್ಳುತ್ತೀರಿ. ಸಮಾಜದಲ್ಲಿ ದಾನ- ಧರ್ಮಾದಿ ಕಾರ್ಯಗಳಲ್ಲಿ ಪಾಲ್ಗೊಳ್ಳಲಿದ್ದೀರಿ. ಮಕ್ಕಳ ಮದುವೆ ಭಾಗ್ಯ ಕೂಡಿ ಬರಲಿದೆ. ದಂಪತಿಗಳಿಗೆ ಸಂತಾನಭಾಗ್ಯ. ವ್ಯಾಪಾರಸ್ಥರಿಗೆ ಮಂದಗತಿ ಪ್ರಗತಿ.
ಕರೆ ಮಾಡಿರಿ ಸೋಮಶೇಖರ್B.Sc
Mob.No. 9353488403

ಮಿಥುನ ರಾಶಿ
ಭವಿಷ್ಯದ ಬಗ್ಗೆ ಗೊಂದಲ ನಿವಾರಣೆ. ಸ್ವಂತ ವ್ಯವಹಾರ ಮಾಡುವ ಕುರಿತು ಸ್ನೇಹಿತರು, ಆಪ್ತರು ಅಥವಾ ಸಂಬಂಧಿಗಳಲ್ಲಿ ಚರ್ಚೆ ಮೂಲಕ ಪ್ರಾರಂಭ. ನಿಮ್ಮ ಆಸ್ತಿ ವಿಚಾರಕ್ಕಾಗಿ ಕೆಲವು ಕಾನೂನಿನ ಸವಾಲುಗಳು ಎದುರಾಗಲಿವೆ ಸೂಕ್ತ ಕಾನೂನು ಸಲಹೆ ಪಡೆದುಕೊಳ್ಳಿ. ಸಮರ್ಥವಾಗಿ ಎದುರಿಸಲಿದ್ದೀರಿ. ನಿಂತಿದ್ದ ನಿಶ್ಚಿತಾರ್ಥ ಕಾರ್ಯ ಮರುಸೃಷ್ಟಿ. ಬಂಧು ಬಳಗ ದಿಂದ ಮಕ್ಕಳ ಮದುವೆ ಪ್ರಸ್ತಾಪ. ಮನೆ ಕಟ್ಟುವ ವಿಚಾರ ಮನಸ್ಸಿಗೆ ಮೂಡಲಿದೆ. ಸಾಲಗಾರರಿಂದ ಕೊಂಚ ನೆಮ್ಮದಿ ನಷ್ಟ. ಲೇವಾದೇವಿಗಾರರು ಸಹನೆಯಿಂದ ಸಾಲ ಮರುಪಾವತಿ ಮಾಡಿಕೊಳ್ಳಿ.
ಕರೆ ಮಾಡಿರಿ ಸೋಮಶೇಖರ್B.Sc
Mob.No. 9353488403

ಕರ್ಕಾಟಕ ರಾಶಿ
ಹಿತೈಷಿಗಳ ಮಾತುಗಳನ್ನು ಆಡುವವರ ಉದ್ದೇಶ ಏನಿದೆ ಎಂಬುದನ್ನು ಅರಿತುಕೊಳ್ಳಿ. ನಿಮ್ಮ ಆತ್ಮೀಯ ಅಥವಾ ಸ್ನೇಹಿತ ಮಾತುಗಳಿಗೆ ಬಲಿ ಬಿದ್ದು, ಯಾವುದಾದರೂ ಯೋಜನೆಗೆ ಹಣ ತೊಡಗಿಸಿದರೆ ಆ ನಂತರ ಪಶ್ಚಾತ್ತಾಪ ಪಡುವಂತಾಗುತ್ತದೆ. ಮನೆಯಲ್ಲಿ ವಾಸ್ತು ಶಾಸ್ತ್ರದ ಪ್ರಕಾರ ನವೀಕರಣದ ಕೆಲಸ ಮಾಡಿಸಬೇಕಾಗಬಹುದು. ಎದೆ ನೋವು, ಉದರ ದೋಷ ಮಂಡಿನೋವಿನಿಂದ ನರಳುವಿರಿ. ಜಾಗ್ರತೆಯಿಂದ ವಾಹನ ಚಲಾಯಿಸಿ. ನಿಮ್ಮ ಮಕ್ಕಳಿಗಾಗಿ ಸದ್ಯಕ್ಕೆ ಹೊಸ ವಾಹನ ಖರೀದಿ ಬೇಡ. ಮಕ್ಕಳ ಸಹವಾಸ ದೋಷದಿಂದ ತಮಗೆ ಚಿಂತನೆ ಕಾಡಲಿದೆ.
ಕರೆ ಮಾಡಿರಿ ಸೋಮಶೇಖರ್B.Sc
Mob.No. 9353488403

ಸಿಂಹ ರಾಶಿ
ನಿಮ್ಮ ಸ್ವಾಭಿಮಾನ ನಿಮಗೆ ದಾರಿದೀಪವಾಗಲಿದೆ. ಆದರೆ ಅಹಂಕಾರ ಬೇಡ. ಆಸ್ತಿ ಪಾಲುದಾರಿಕೆ ವ್ಯಾಖ್ಯಾನ ಮಾಡುವ ಸಾಧ್ಯತೆ ಇದೆ. ಮಾತನಾಡುವಾಗ ತಮ್ಮ ಏರುಧ್ವನಿ ಇಂದ ವೈರಾಗ್ಯ. ಸ್ನೇಹಿತರು ತಮಾಷೆ ಮಾಡಿದರೆ ಅದನ್ನು ಸಕಾರಾತ್ಮಕವಾಗಿ ಸ್ವೀಕರಿಸಿ. ವಿರೋಧಿಗಳು ನಿಮಗೆ ಸಮಸ್ಯೆ ಮಾಡಲು ಪ್ರಯತ್ನಿಸಬಹುದು ಅಷ್ಟೇ ಅಲ್ಲ ಒಳಸಂಚು ರೂಪಿಸುವರು ಜಾಗ್ರತೆ ಇರಲಿ. ಏಕಾಂಗಿ ಓಡಾಟ ಬೇಡ. ಮಕ್ಕಳ ನಡತೆಯ ಬಗ್ಗೆ ಬೇಸರ. ಪ್ರೇಮಿಗಳಿಗೆ ಮನೋವೇದನೆ.
ಕರೆ ಮಾಡಿರಿ ಸೋಮಶೇಖರ್B.Sc
Mob.No. 9353488403

ಕನ್ಯಾ ರಾಶಿ
ಮಾಡುವಂತ ಕೆಲಸದ ಜಾಗದಲ್ಲಿ ಸವಾಲುಗಳು ಎದುರಾಗುತ್ತವೆ. ಸಾಲ ಮಾಡಲೇಬೇಕಾದ ಸನ್ನಿವೇಶ ಸೃಷ್ಟಿ. ದುಂದುವೆಚ್ಚ ಮಾಡಬೇಡಿ. ಮಿತವ್ಯಯ ಹಿತ ಭೂಷಣ. ಸಂಗಾತಿ ಓಲೈಕೆಗಾಗಿ ಉಡುಗೊರೆಗಳನ್ನು ನೀಡುವ ಸಾಧ್ಯತೆ ಇದೆ. ಬಾಂಧವ್ಯ ಗಟ್ಟಿಯಾಗಲಿದೆ. ಬಹುವರ್ಷಗಳಿಂದ ಪ್ರೀತಿಸು ವಿರಿ ಆದರೆ ವಿನಾಕಾರಣ ಮದುವೆ ವಿಳಂಬ.
ಕರೆ ಮಾಡಿರಿ ಸೋಮಶೇಖರ್B.Sc
Mob.No. 9353488403

ತುಲಾ ರಾಶಿ
ಆಸ್ತಿ ವಿಚಾರದಲ್ಲಿ ಇತರರು ನಿಷ್ಪಕ್ಷಪಾತವಾಗಿ ನಡೆದುಕೊಳ್ಳುತ್ತಿಲ್ಲ ಎಂದು ಅನಿಸಲು ಆರಂಭವಾಗುತ್ತದೆ. ಮಾನಸಿಕವಾಗಿ ಖಿನ್ನತೆಗೆ ಒಳಗಾಗುತ್ತೀರಿ. ಸಾಲ ಪಡೆದವರಿಂದ ಒತ್ತಡ ಮತ್ತು ಕಿರಿಕಿರಿ ಹೆಚ್ಚಾಗಬಹುದು. ಈ ಎಲ್ಲ ಕಾರಣವೂ ಸೇರಿ ಆಪ್ತರ ಜತೆಗೆ ಜಗಳ, ಮನಸ್ತಾಪ ಮಾಡಿಕೊಳ್ಳುವಂತಾಗುತ್ತದೆ. ಇದರಿಂದ ಮನುಷ್ಯ ಶಾಂತಿ ನಷ್ಟ. ಜೀವನದಲ್ಲಿ ಜಿಗುಪ್ಸೆ ಸೃಷ್ಟಿ. ಉದ್ಯೋಗಕ್ಕಾಗಿ ಬೇರೆ ಊರಿಗೆ ಹೋಗುವ ಅವಕಾಶವಿದೆ. ಮನೆ ಕಟ್ಟುವ ವಿಚಾರ ವಿಳಂಬ. ಹಣಕಾಸಿನಲ್ಲಿ ತೀವ್ರ ಸಂಕಟ. ಸಾಲ ಪಡೆಯಬೇಕು ಎಂಬ ನಿರ್ಧಾರ. ಅತಿಯಾದ ಮಾನಸಿಕ ಒತ್ತಡದಿಂದ ಆರೋಗ್ಯದಲ್ಲಿ ಏರುಪೇರು. ಮಾತಾಪಿತೃ ಆರೋಗ್ಯದ ಚಿಂತನೆ.
ಕರೆ ಮಾಡಿರಿ ಸೋಮಶೇಖರ್B.Sc
Mob.No. 9353488403

ವೃಶ್ಚಿಕ ರಾಶಿ
ವಿಶ್ರಾಂತಿ ಪಡೆಯಲು ರಜೆ ಪಡೆದುಕೊಳ್ಳುವಿರಿ. ಕುಟುಂಬದ ಸಮೇತ ಬೇರೆ ಊರಿಗೆ ಹೋಗುವಿರಿ. ಮೇಲಧಿಕಾರಿಗಳು ನಿಮ್ಮ ಎದುರಿಗೆ ಒಂದು ರೀತಿ,ಬೆನ್ನ ಹಿಂದೆ ಮತ್ತೊಂದು ರೀತಿ ನಡೆದುಕೊಳ್ಳುತ್ತಿದ್ದಾರೆ ಎಂದು ಭಾಸವಾಗುತ್ತದೆ. ನಿಮ್ಮಿಂದ ಎಲ್ಲರೂ ಕೆಲಸ ಮಾಡಿಕೊಳ್ಳುತ್ತಾರೆ. ಆದರೆ ಯಾರಿಂದಲೂ ತಮಗೆ ಕೃತಜ್ಞತೆ ಸಿಗಲಾರದು. ತಾವು ಎಲ್ಲರ ಕಷ್ಟಕ್ಕೆ ಸಹಾಯ ಮಾಡುವಿರಿ, ಆದರೆ ನಿಮ್ಮ ಕಷ್ಟಕ್ಕೆ ಯಾರು ಬರಲಾರರು. ಪ್ರೇಮಿಗಳ ಸರಸ ಸಲ್ಲಾಪ ಗಳಿಂದ ಪ್ರಾಯಶ್ಚಿತ್ತ.
ಕರೆ ಮಾಡಿರಿ ಸೋಮಶೇಖರ್B.Sc
Mob.No. 9353488403

ಧನಸ್ಸು ರಾಶಿ
ನಿಮ್ಮ ಸ್ವಂತ ಆಸ್ತಿ ವಿಚಾರದಲ್ಲಿ ಇತರರು ಹಸ್ತಕ್ಷೇಪ ಮಾಡುತ್ತಿದ್ದಾರೆಂದು ಬಲವಾಗಿ ಅನಿಸುತ್ತದೆ. ಆದರೆ ಈ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಲು ನಿಮ್ಮಿಂದ ಸಾಧ್ಯವಾಗುತ್ತಿಲ್ಲ. ಧಾರ್ಮಿಕ ಚಿಂತನೆಯಿಂದ ಮನಸ್ಸಿಗೆ ನೆಮ್ಮದಿ ದೇವದರ್ಶನ ಭಾಗ್ಯ ದೊರೆಯುತ್ತದೆ. ಇತರರ ಸಲುವಾಗಿ ಸಹಾಯ ಮಾಡಿ ನಿಮಗೆ ಕೆಟ್ಟ ಹೆಸರು ಬರುವ ಯೋಗ ಇದೆ. ನಿವೇಶನ ಖರೀದಿ ಅಡತಡೆ ಕಾಣುವಿರಿ. ಪಿತ್ರಾರ್ಜಿತ ಆಸ್ತಿ ವಿಚಾರಕ್ಕಾಗಿ ಕೋರ್ಟ್ ಮೆಟ್ಟಿಲು ಹತ್ತುವ ಪ್ರಸಂಗ. ಕಾನೂನು ಸಲಹೆ ಪಡೆದುಕೊಳ್ಳಿ. ಮಕ್ಕಳ ಮದುವೆ ವಿಚಾರಕ್ಕಾಗಿ ಆತ್ಮೀಯರ ಹತ್ತಿರ ಪ್ರಸ್ತಾಪ. ನವದಂಪತಿಗಳಿಗೆ ಸಂತಾನದ ಸಮಸ್ಯೆಯಾಗಲಿದೆ.
ಕರೆ ಮಾಡಿರಿ ಸೋಮಶೇಖರ್B.Sc
Mob.No. 9353488403

ಮಕರ ರಾಶಿ
ದುಂದುವೆಚ್ಚ ಖರ್ಚಿನ ವಿಚಾರದಲ್ಲಿ ಬಹಳ ಎಚ್ಚರಿಕೆಯಿಂದ ಇರಬೇಕು. ಸಂಗಾತಿಯಿಂದ ಸುಖಾಯೋಗ ಇದೆ. ಕುಟುಂಬದ ಎಲ್ಲಾ ಜವಾಬ್ದಾರಿ ನಿಮ್ಮ ಹೆಗಲ ಮೇಲೆ ಬೀಳಲಿದೆ. ಮುಖ್ಯವಾದ ದಾಖಲೆ- ಪತ್ರಗಳನ್ನು ಹುಡುಕುವಿರಿ. ಉಳಿತಾಯದ ಹಣವನ್ನು ಉಳಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಮಕ್ಕಳ ಮದುವೆಗಾಗಿ ಎಲ್ಲ ಪ್ರಯತ್ನ ಮಾಡುವಿರಿ. ಅಳಿಯನ ನಡವಳಿಕೆ ಹಾಗೂ ಅವರ ಕುಟುಂಬ ಕಲಹಗಳಿಂದ ತುಂಬಾ ಬೇಸರ.
ಕರೆ ಮಾಡಿರಿ ಸೋಮಶೇಖರ್B.Sc
Mob.No. 9353488403

ಕುಂಭ ರಾಶಿ
ವಿದೇಶ ಪ್ರಯಾಣ ಮಾಡುವ ಸಿದ್ಧತೆ. ಸರಕಾರಿ ನೌಕರಿ ಭಾಗ್ಯ ಅದಕ್ಕಾಗಿ ಸಿದ್ಧತೆ ಮಾಡಿಕೊಳ್ಳಿ. ನೀವು ರೂಪಿಸಿರುವ ಯೋಜನೆಗಳು ಪೂರ್ಣಗೊಳ್ಳಲು ಸ್ನೇಹಿತರು- ಸಹೋದ್ಯೋಗಿಗಳ ನೆರವು ಪಡೆಯಲಿದ್ದೀರಿ. ಸ್ತ್ರೀಯರ ವಿಚಾರದಲ್ಲಿ ಎಚ್ಚರಿಕೆ ಹೆಜ್ಜೆಗಳನ್ನು ಇಡಿ. ಗರ್ಭಿಣಿಯರು ಜಾಗೃತಿವಹಿಸಿ. ನಿಮ್ಮ ನೇರ ಮಾತಿನಿಂದ ನಿಮ್ಮ ಮಾತಿಗೆ ಬೇರೆ ಅರ್ಥ ಕಲ್ಪಿಸಿ, ವರ್ಚಸ್ಸಿಗೆ ಧಕ್ಕೆ ಮಾಡಬಹುದು.
ಪ್ರೀತಿ ಸರಸ-ಸಲ್ಲಾಪ ಗಳಿಂದ ವೇದನೆ.
ಕರೆ ಮಾಡಿರಿ ಸೋಮಶೇಖರ್B.Sc
Mob.No. 9353488403

ಮೀನ ರಾಶಿ
ಇತರರ ವಿಚಾರದಲ್ಲಿ ಭಾಗವಹಿಸ ಬೇಡಿ . ಕಾಯಕದಲ್ಲಿ ತುಂಬ ಆಸಕ್ತಿ ತೋರಿಸುತ್ತೀರಿ. ಅಗತ್ಯ ಕೆಲಸಗಳು ಮೊದಲು ಮಾಡಿಮುಗಿಸಿ. ಉದ್ಯೋಗದಲ್ಲಿ ಬಿಡುವಿಲ್ಲದಷ್ಟು ಕೆಲಸ ಬರಬಹುದು. ಆದ್ಯತೆ ಮೇಲೆ ಒಂದೊಂದಾಗಿ ಕೆಲಸ ಮಾಡಿ, ಮುಗಿಸಿ, ಇದರಿಂದ ಮೇಲಾಧಿಕಾರಿಗಳ ಪ್ರಶಂಸೆಗೆ ಭಾಗ್ಯ .ನಿರಂತರ ಕೆಲಸದಿಂದ ಆಯಾಸ ಆಗಿ, ವಿಶ್ರಾಂತಿ ಪಡೆಯುವುದಕ್ಕೆ ಮನಸ್ಸು ಬಯಸುತ್ತದೆ. ತಲೆ ನೋವು, ಕಣ್ಣಿನ ಸಮಸ್ಯೆ ಕಾಣಿಸಿಕೊಂಡಲ್ಲಿ ಕೂಡಲೇ ವೈದ್ಯರನ್ನು ಭೇಟಿಯಾಗಿ. ಆಗಾಗ ನಿಮ್ಮ ಶರೀರದಲ್ಲಿ ಆರೋಗ್ಯದ ಸಮಸ್ಯೆ ಕಾಡಲಿದೆ, ಎಲ್ಲಾ ವೈದ್ಯಕೀಯ ತಪಾಸಣೆ ಮಾಡಿದರು ಯಾವುದೇ ಕಾಯಿಲೆ ಇಲ್ಲ ಎಂದು ರಿಪೋರ್ಟ್ ಬರುತ್ತದೆ . ಆದರೆ ನಿಮ್ಮ ಮನಸ್ಸಲ್ಲಿ ಆರೋಗ್ಯದ ಗೊಂದಲದಿಂದ ನರಳುವಿರಿ. ಮಕ್ಕಳ ಮದುವೆ ಚಿಂತನೆ ಕಾಡಲಿದೆ. ಪತಿ-ಪತ್ನಿ ಮಧ್ಯೆ ಪದೇಪದೇ ಭಿನ್ನಾಭಿಪ್ರಾಯ ಮೂಡುವುದು. ಸಂಗತಿಗಳ ಮಧ್ಯೆ ಮದುವೆ ಕಾರ್ಯ ಅನುಮಾನ.
ಕರೆ ಮಾಡಿರಿ ಸೋಮಶೇಖರ್B.Sc
Mob.No. 9353488403

ಲೋಕಲ್ ಸುದ್ದಿಗಳನ್ನು ಕ್ಷಣಾರ್ಧದಲ್ಲಿ ಲೋಕದ ಜನರ ಬೆರಳ ತುದಿಗೆ ತಲುಪಿಸುವ ಉದ್ದೇಶದಿಂದ ಡಿವಿಜಿಸುದ್ದಿ.ಕಾಂ ಕನ್ನಡ ಆನ್ ಲೈನ್ ನ್ಯೂಸ್ ಪೋರ್ಟಲ್ (ಡಿಜಿಟಲ್ ಮಾಧ್ಯಮ) ಸ್ಥಾಪಿಸಲಾಗಿದೆ. ಸ್ಥಳೀಯ ಸುದ್ದಿ ಜೊತೆ ಇನ್ಫೋರ್ಮೆಟಿವ್ ನ್ಯೂಸ್ ಕೊಡುವುದು ಮೊದಲ ಆದ್ಯತೆ. ಇದಲ್ಲದೆ ರಾಜಕೀಯ, ಶಿಕ್ಷಣ, ಉದ್ಯೋಗ, ಕ್ರೀಡೆ, ಅಪರಾಧ ಸುದ್ದಿ ಹಾಗೂ ವಿಶೇಷವಾಗಿ ಕೃಷಿ ಮತ್ತು ರೈತರಿಗೆ ಉಪಯುಕ್ತ ಮಾಹಿತಿ ನೀಡುವುದು ಮುಖ್ಯ ಉದ್ದೇಶ. ಸುದ್ದಿ, ಮಾಹಿತಿ, ಸಲಹೆ, ಸೂಚನೆ ನೀಡಲು ವಾಟ್ಸಾಪ್ (7483892205) ಮಾಡಿ... Editor: munikondajji, MA journalism, contact number:7483892205, e-mail: dvgsuddi@gmail.com

Click to comment

Leave a Reply

Your email address will not be published. Required fields are marked *

More in ಪ್ರಮುಖ ಸುದ್ದಿ

To Top