ಡಿವಿಜಿ ಸುದ್ದಿ, ಬೆಂಗಳೂರು: ರಾಜ್ಯದ ಕರಾವಳಿ ಭಾಗದಲ್ಲಿ ಮುಂಗಾರು ಮಳೆ ಚುರುಕುಗೊಂಡಿದ್ದು, ಜುಲೈ 5ರಿಂದ 9ರವರೆಗೆ ಭಾರಿ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಉತ್ತರ ಕನ್ನಡ, ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳಲ್ಲಿ ಐದೂ ದಿನ ಕಾಲ ಯೆಲ್ಲೊ ಅಲರ್ಟ್ ಘೋಷಿಸಲಾಗಿದೆ. ಗಂಟೆಗೆ 45ರಿಂದ 55 ಕಿ.ಮೀ ವೇಗದಲ್ಲಿ ಗಾಳಿ ಬೀಸುತ್ತಿರುವುದರಿಂದ ಮೀನುಗಾರರು ಕಡಲಿಗೆ ಇಳಿಯದಂತೆ ಇಲಾಖೆ ಎಚ್ಚರಿಸಿದೆ. ಉತ್ತರ ಹಾಗೂ ದಕ್ಷಿಣ ಒಳನಾಡಿನಲ್ಲಿ ಮಳೆ ಪ್ರಮಾಣ ತಗ್ಗಿದ್ದು, ಕೆಲವೆಡೆ ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ.
ದಕ್ಷಿಣ ಕನ್ನಡ 15 ಸೆಂ.ಮೀ ಗರಿಷ್ಠ ಮಳೆಯಾಗಿದೆ. ಕೋಟ 14, ಕಾರವಾರ 12, ಕಾರ್ಕಳ, ಗೋಕರ್ಣ 11, ಉಡುಪಿ 10, ಮೂಡುಬಿದಿರೆ, ಪಣಂಬೂರು, ಮಂಗಳೂರು, ಬ್ರಹ್ಮಾವರ 9, ಪುತ್ತೂರು, ಸುಳ್ಯ 8, ಕುಂದಾಪುರ 7, ಉಪ್ಪಿನಂಗಡಿ, ಭಟ್ಕಳ 6, ಸುಬ್ರಹ್ಮಣ್ಯ, ಮಡಿಕೇರಿ, ವಿರಾಜಪೇಟೆ, ಕಳಸ 5, ಸಿದ್ದಾಪುರ, ಭಾಗಮಂಡಲ 4, ಧರ್ಮಸ್ಥಳ, ಶೃಂಗೇರಿ, ನಂಜನಗೂಡು, ಮಾಗಡಿ 3, ಬೆಳಗಾವಿ, ಸೋಮವಾರಪೇಟೆ, ಮೂಡಿಗೆರೆ, ತೀರ್ಥಹಳ್ಳಿ, ಕೊಳ್ಳೇಗಾಲ, ಮದ್ದೂರು, ಶಿರಾದಲ್ಲಿ ತಲಾ 2 ಸೆಂ.ಮೀ ಮಳೆಯಾಗಿದೆ



