ಡಿವಿಜಿ ಸುದ್ದಿ, ದಾವಣಗೆರೆ: ಪವರ್ ಆಫ್ ಪಾಕಿಸ್ತಾನ ಫೇಸ್‌ಬುಕ್ ಪೇಜ್ ಶೇರ್ ಮಾಡಿದ ನಗರದ ಪೊಲೀಸ್ ಸಿಬ್ಬಂದಿ ಸನಾವುಲ್ಲಾನನ್ನು 24 ಗಂಟೆಯೊಳಗೆ ಬಂಧಿಸದಿದ್ದರೆ ಬೀದಿಗೆ ಇಳಿದು ಹೋರಾಟ ನಡೆಸಲಾಗುವುದು ಎಂದು ಶ್ರೀರಾಮ ಸೇನಾ ರಾಷ್ಟ್ರೀಯ ಅಧ್ಯಕ್ಷ ಪ್ರಮೋದ್ ಮುತಾಲಿಕ್ ವಾರ್ನಿಂಗ್ ನೀಡಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದೇಶದ ಬಗ್ಗೆ ಇಲ್ಲಿನ ಜಿಲ್ಲಾಡಳಿತಕ್ಕೆ ಕಾಳಜಿ ಇಲ್ಲದಿರಬಹುದು. ಆದರೆ ನಮಗಿದೆ. ಪಾಕಿಸ್ತಾನದ ಪರ ಫೇಸ್ ಬುಕ್ ಪೇಜ್ ಶೇರ್ ಮಾಡಿದ ಸನಾವುಲ್ಲಾ ದೇಶದ್ರೋಹಿ ಈ ಬಗ್ಗೆ ಈಗಾಗಲೇ ದೂರು ನೀಡಲಾಗಿದೆ. ಆದರೆ ಇನ್ನೂ ಎಫ್‌ಐಆರ್ ದಾಖಲಾಗಿಲ್ಲ.
ಈ ಬಗ್ಗೆ ಜಿಲ್ಲಾಧಿಕಾರಿಗಳಾಗಲಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಾಗಲಿ, ಉಸ್ತುವಾರಿ ಸಚಿವರಾಗಲಿ, ಗೃಹ ಸಚಿವರಾಗಲಿ ಈ ಬಗ್ಗೆ ಮಾತನಾಡುತ್ತಿಲ್ಲ. ಈತ ಎಲ್ಲ ಕಡೆ ಓಡಾಡುತ್ತಿದ್ದಾನೆ. ಪೊಲೀಸರು ತಮ್ಮಿಂದ ಬಂಧಿಸಲು ಆಗ ಎಂದು ಹೇಳಿದ್ರೆ, ನಾವೇ ಕ್ರಮ ಕೈಗೊಳ್ಳುತ್ತೇವೆ ಎಂದು ಕಿಡಿಕಾರಿದರು.



